ಡೆನ್ಮಾರ್ಕ್​ ಪ್ರಧಾನಿ 3 ದಿನ ಭಾರತ ಪ್ರವಾಸ; ಅ.9ಕ್ಕೆ ಮೋದಿ ಜತೆ ಮಹತ್ವದ ಚರ್ಚೆ; ಏನು ಗೊತ್ತಾ?

ಡೆನ್ಮಾರ್ಕ್ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸನ್ ಅಕ್ಟೋಬರ್ 9ರಿಂದ ಅಕ್ಟೋಬರ್ 11ರವರೆಗೆ ಮೂರು ದಿನ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. ಡೆನ್ಮಾರ್ಕ್​ ಪ್ರಧಾನಿ ಫ್ರೆಡೆರಿಕ್ಸನ್ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದು, ನಂತರ ಪ್ರಧಾನಿ ಮೋದಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಈ ಸಂದರ್ಭದಲ್ಲಿ ಕಳೆದ ವರ್ಷ ಉಭಯ ದೇಶಗಳು ಸ್ಥಾಪಿಸಿದ್ದ ಗ್ರೀನ್ ಸ್ಟ್ರಾಟಿಜಿಕ್ ಪಾಲುದಾರಿಕೆಯ ಅನುಷ್ಠಾನದ ಪ್ರಗತಿಯ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಇನ್ನು ಭಾರತದ ಭೇಟಿ ವೇಳೆ ವಿದ್ಯಾರ್ಥಿಗಳು ಮತ್ತು ವಿದೇಶಾಂಗ ಅಧಿಕಾರಿಗಳ ಜತೆ ಸಂವಾದ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಗಳು ಹೇಳಿವೆ.

ಇದನ್ನೂ ಓದಿ: ವಿಶ್ವಕ್ಕೇ ಅಪಾಯಕಾರಿ ಚೀನಾ; ಭಾರತ-ತೈವಾನ್‌ ₹55,000ಕೋಟಿ ಒಪ್ಪಂದ ಯಾಕೆ?

News First Live Kannada

Leave a comment

Your email address will not be published. Required fields are marked *