ಡೆನ್ಮಾರ್ಕ್​ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಹೊರಡುವುದಕ್ಕೂ ಮೊದಲು ಜರ್ಮನಿ ಸರ್ಕಾರಕ್ಕೆ ಕೃತಜ್ಞತೆ | PM Modi Reached Copenhagen Of Denmark From Berlin today


ಡೆನ್ಮಾರ್ಕ್​ ತಲುಪಿದ ಪ್ರಧಾನಿ ನರೇಂದ್ರ ಮೋದಿ; ಹೊರಡುವುದಕ್ಕೂ ಮೊದಲು ಜರ್ಮನಿ ಸರ್ಕಾರಕ್ಕೆ ಕೃತಜ್ಞತೆ

ಡೆನ್ಮಾರ್ಕ್​ಗೆ ತಲುಪಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ಯುರೋಪ್​ ದೇಶಗಳ ಪ್ರವಾಸದ ಎರಡನೇ ಹಂತ ಪ್ರಾರಂಭವಾಗಿದ್ದು, ಅವರಿಂದು ಜರ್ಮನ್​​ನಿಂದ ಹೊರಟು ಡೆನ್ಮಾರ್ಕ್​ ತಲುಪಿದ್ದಾರೆ. ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆ ವಕ್ತಾರ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಯುರೋಪ್​​ನ ಮೂರು ದೇಶಗಳ ಪ್ರವಾಸದ ಮೊದಲ ಹಂತ ಮುಕ್ತಾಯಗೊಂಡಿದೆ. ಈ ಭೇಟಿ ಭಾರತ-ಜರ್ಮನಿಯ ಸಂಬಂಧವನ್ನ ಬಲಗೊಳಿಸಿದೆ. ಮುಂದಿನ ನಿಲ್ದಾಣ, ಡೆನ್ಮಾರ್ಕ್​-ಕೋಪನ್ ಹ್ಯಾಗನ್ ಎಂದು ಹೇಳಿದ್ದು, ಎರಡು ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. 

ಹಾಗೇ, ಪ್ರಧಾನಿ ನರೇಂದ್ರ ಮೋದಿ ತಾವು ಜರ್ಮನಿಯಿಂದ ಹೊರಡುವುದಕ್ಕೂ ಮೊದಲು ಜರ್ಮನಿಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಆತಿಥ್ಯ ನೀಡಿ ಗೌರವಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ‘ನಾನು ಜರ್ಮನಿಗೆ ಭೇಟಿ ಕೊಟ್ಟಿದ್ದು ಫಲಪ್ರದವಾಗಿದೆ. ಇಲ್ಲಿನ ಚಾನ್ಸೆಲರ್ ಬುಂಡೆಸ್ಕಾಂಜ್ಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ವಿಸ್ತಾರವಾಗಿ  ದ್ವಿಪಕ್ಷೀಯ ಮಾತುಕತೆ ನಡೆಸಲಾಯಿತು. ಅಂತರ್​ ಸರ್ಕಾರ ಸಮಾಲೋಚನೆಗಳು ನಡೆದವು. ಹಾಗೇ, ಇಲ್ಲಿರುವ ಭಾರತೀಯ ಉದ್ಯಮಿಗಳು, ಸಮುದಾಯದ ಮುಖಂಡರ ಜತೆಗೆ ಮಾತುಕತೆಗೆ ಅವಕಾಶ ಸಿಕ್ಕಿದ್ದು ಖುಷಿಯಾಯಿತು ಎಂದು ಹೇಳಿದ್ದಾರೆ.  ವಿಡಿಯೋ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಬರ್ಲಿಗೆ ಬಂದಿದ್ದರು.ಅಂತರ-ಸರ್ಕಾರಿ ಸಮಾಲೋಚನೆಯ (ಐಜಿಸಿ) ಆರನೇ ಸರ್ವಾಂಗೀಣ ಅಧಿವೇಶನದಲ್ಲಿ ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ಸಹ-ಅಧ್ಯಕ್ಷತೆ ವಹಿಸಿದ್ದರು. ಈ ಅಧಿವೇಶನದಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಮೋದಿ, ಭಾರತದ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಭಾಗವಹಿಸುವಂತೆ ಜರ್ಮನಿಗೆ ಆಹ್ವಾನ ನೀಡಿದರು.  ಇದೇ ವೇಳೆ ಭಾರತ ಮತ್ತು ಜರ್ಮನಿಯ ನಾಯಕರು ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಡಿಯಲ್ಲಿ, ಭಾರತ 2023ರ ಹೊತ್ತಿಗೆ ಶುದ್ಧ ಇಂಧನ ಬಳಕೆಯನ್ನು ಹೆಚ್ಚಿಸಲು ಜರ್ಮನಿಯಿಂದ 10.5 ಬಿಲಿಯನ್​  ಡಾಲರ್​​ಗಳಷ್ಟು ನೆರವು ಪಡೆಯಲಿದೆ.

TV9 Kannada


Leave a Reply

Your email address will not be published. Required fields are marked *