ಬೆಂಗಳೂರು: ಡೆಲಿವರಿ ಕೊಡುವ ನೆಪದಲ್ಲಿ ಬಂದು ಸರಗಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲು ತಿಲಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೈಯ್ಯದ್ ಫರ್ವಿಜ್ ಬಂಧಿತ ಆರೋಪಿಯಾಗಿದ್ದು, ಆರೋಪಿಯ ಬಂಧನದಿಂದ ಮೊಬೈಲ್ ರಾಬರಿ, ದ್ವಿಚಕ್ರ ವಾಹನ ಮತ್ತು ಕಾರು ಕಳವು ಸೇರಿ 11 ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ತಿಲಕನಗರ ಪೊಲೀಸ್ ಠಾಣೆ ಸೇರಿದಂತೆ ಸುತ್ತಮುತ್ತಲ ಪೊಲೀಸ್ ಠಾಣೆಗಳಿಗೆ ತಲೆ ನೋವಾಗಿದ್ದ.
ಈವರೆಗೂ ಆರೋಪಿ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಎರಡು ಕೇಸ್ಗಳಲ್ಲಿ ಆರೋಪಿಯ ವಿರುದ್ಧ ಎನ್ಬಿಡಬ್ಲ್ಯು ಜಾರಿಯಾಗಿದೆ. ಅಲ್ಲದೇ ಎರಡು ಬಾರಿ ವಾರೆಂಟ್ ಮತ್ತು ಎರಡು ಬಾರಿ ಪ್ರೊಕ್ಲಮೇಷನ್ ಸಹ ಜಾರಿಯಾಗಿದೆ. ನ್ಯಾಯಾಲಯದಿಂದ ಎನ್ಬಿಡಬ್ಲ್ಯು ಜಾರಿಯಾದರೂ ಆರೋಪಿ ಪೊಲೀಸರು ಕೈಗೆ ಸಿಗದೆ ಸಿಗದೆ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯ ಬಂಧನ ಬಳಿಕ ಆತನ ಮನೆಯಲ್ಲಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ ಗಾಂಜಾ ಸೇರಿದಂತೆ ಮಾರಕಾಸ್ತ್ರಗಳು ಕೂಡ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.