ಡೆಲಿವರಿ ಬಾಯ್ಸ್​ಗೆ ಶೀಘ್ರ ಲಸಿಕೆ ಕೊಡಿಸಲು ಕಂಪನಿಗಳ ಪ್ಲಾನ್

ಡೆಲಿವರಿ ಬಾಯ್ಸ್​ಗೆ ಶೀಘ್ರ ಲಸಿಕೆ ಕೊಡಿಸಲು ಕಂಪನಿಗಳ ಪ್ಲಾನ್

ದೇಶದ ಮಹಾನಗರಗಳು ಲಾಕ್ ಆಗಿ ಬಿಟ್ಟಿವೆ. ಕಂಪ್ಲೀಟ್ ಬಂದ್ ಆಗಿ ಬಿಟ್ಟಿವೆ. ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಅನೇಕ ನಗರಗಳು ಸ್ತಬ್ಧವಾಗಿವೆ. ಯಾರೂ ಮನೆಯಿಂದ ಆಚೆ ಬರುವಂತಿಲ್ಲ. ಬೆಳಗಿನ ಕೆಲ ಹೊತ್ತು ಅಗತ್ಯ ವಸ್ತುಗಳನ್ನು ಕೊಳ್ಳಲು ಬಿಟ್ಟರೆ ಉಳಿದಂತೆ ಬೇರೆ ಯಾವ ಸಮಯದಲ್ಲೂ ಜನ ಸಂಚಾರ ಕಾಣಿಸಿಕೊಳ್ಳಲ್ಲ. ಈಗ ರಸ್ತೆಯಲ್ಲಿ ಲಾಕ್ ಡೌನ್ ಬಿಗಿಯಾಗಿ ಜಾರಿಗೆ ತರುವಲ್ಲಿ ಶ್ರಮಿಸ್ತಾ ಇರುವ ಪೊಲೀಸರೇ ಹೆಚ್ಚಾಗಿ ಇರ್ತಾರೆ. ಇನ್ನು ಆರೋಗ್ಯ ಸಿಬ್ಬಂದಿ, ಆಂಬ್ಯುಲೆನ್ಸ್ಗಳು ಮಾತ್ರ ಓಡಾಡ್ತಾ ಇರೋದನ್ನು ನೋಡಬಹುದು. ಇವರನ್ನು ಹೊರತುಪಡಿಸಿ ಡೆಲಿವರಿ ಬಾಯ್ಸ್ ನಗರಗಳಲ್ಲಿ ಹೆಚ್ಚಾಗಿ ಓಡಾಡ್ತಾ ಇದಾರೆ. ಮನೆಯಲ್ಲೇ ಇರಬೇಕಾಗಿರೋದ್ರಿಂದ ಎಲ್ಲೂ ಓಡಾಡೋ ಹಾಗಿಲ್ಲದ ಕಾರಣ ಜನ ಏನು ಬೇಕಾದರೂ ಆನ್ಲೈನ್ ನಲ್ಲೇ ಆರ್ಡರ್ ಮಾಡಿ ತರಿಸಿಕೊಳ್ತಾ ಇದಾರೆ. ಹೀಗಾಗಿ ಇವರ ಕೆಲಸ ಮಾತ್ರ ಜೋರಾಗಿ ನಡೆಯುತ್ತಿದೆ.

ಇವತ್ತು ಲಾಕ್ಡೌನ್ ನಿಂದ ಪ್ರತಿಯೊಬ್ಬರು ಮನೆ ಸೇರಿಕೊಂಡು ಬಿಟ್ಟಿದ್ದಾರೆ. ಹೀಗೆ ಮನೆ ಸೇರಿಕೊಂಡಿರೋರಿಗೆ ಅವಶ್ಯಕತೆ ಇರೋ ಸಮಯಕ್ಕೆ ಸರಿಯಾಗಿ ವಸ್ತುಗಳನ್ನ, ತಿಂಡಿ ತಿನಿಸುಗಳನ್ನ ತಲುಪಿಸುವಂತಹ ಕೆಲಸಗಳನ್ನ ಮಾಡುತ್ತಿರೋದು ಅಂದ್ರೆ ಅದು ಡೆಲಿವರಿ ಬಾಯ್ಗಳು. ಅನೇಕ ಹೋಮ್ ಡೆಲಿವರಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರೋರು ತಮ್ಮ ಜೀವವನ್ನು ಲೆಕ್ಕಿಸದೆ ಆನ್​ಲೈನ್ನಲ್ಲಿ ಆರ್ಡರ್ ಮಾಡುತ್ತಿರೋರಿಗೆ ಡೆಲಿವರಿ ಮಾಡುತ್ತಿದ್ದಾರೆ. ಹೀಗೆ ಅವರೆಲ್ಲರು ಕೂಡ ಮನೆ ಮಠ ಬಿಟ್ಟು ರಸ್ತೆಗಿಳಿದು ಕೆಲಸ ಮಾಡ್ತಾಯಿರೋದ್ರಿಂದ ಅವರನ್ನು ಕೂಡ ವಾರಿಯರ್​​ಗಳೇ ಎಂದು ಕರೆಯಬೇಕು ಅನ್ನೋ ಕೂಗು ಎಲ್ಲಾ ಕಡೆ ಕೇಳಿ ಬರುತ್ತಿದೆ.

ಹೀಗೆ ಅನೇಕ ಕಡೆ ಅವರನ್ನ ತಮ್ಮಷ್ಟಕ್ಕೆ ತಾವೇ ವಾರಿಯರ್ಗಳು ಎಂದು ಕರೆದುಕೊಳ್ಳುತ್ತಿದ್ದವರಿಗೆ ಒಂದು ಖುಷಿ ಸುದ್ದಿಯೊಂದು ಸಿಕ್ಕಿದೆ. ನಿಜಕ್ಕು ಅವರು ಪಡುತ್ತಿರೋ ಕಷ್ಟಕ್ಕೆ ಇದೊಂದು ರೀತಿಯಲ್ಲಿ ಪ್ರತಿಫಲ ಅಂದ್ರೆ ತಪ್ಪಾಗೋದಿಲ್ಲಾ. ಯಾಕಂದ್ರೆ ಇಷ್ಟು ದಿನ ಅವರಿಗೂ ಲಸಿಕೆ ಕೊಡಬೇಕು ಅಂತಾ ಎಷ್ಟೇ ಕೇಳಿಕೊಂಡ್ರು ಅವರಿಗೆ ಸಿಗುತ್ತಿರಲಿಲ್ಲ. ಆದ್ರೆ ಈಗ ಅವರಿಗೆ ಸದ್ಯದಲ್ಲೆ ಲಸಿಕೆ ಕೊಡುವ ಕೆಲಸ ನಡೆಯುತ್ತೆ ಅಂತಾ ಹೇಳಲಾಗ್ತಾ ಇದೆ.

ಹೌದು. ಹೋಮ್​ ಡೆಲವರಿ ಮಾಡೋ ಕಂಪನಿಗಳು ಸರ್ಕಾರದ ಮುಂದೆ ಈ ಒಂದು ಬೇಡಿಕೆಯನ್ನ ಇಟ್ಟಿವೆ. ಇದಕ್ಕಾಗಿ ಸರ್ಕಾರಗಳು ಈಗ ಒಲವನ್ನ ತೋರಿಸಿರೋದು ವಿಶೇಷ. ಆದ್ರೆ ಇವತ್ತು ಒಂದು ಡೋಸ್ ಪಡೆದುಕೊಂಡವರಿಗೆ ಸೂಕ್ತ ಸಮಯಕ್ಕೆ ಲಸಿಕೆ ಸಿಗುತ್ತಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಅದ್ಯಾವ ರೀತಿಯ ವ್ಯವಸ್ಥೆಯನ್ನ ಸರ್ಕಾರ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇವತ್ತು ಪ್ರಮುಕವಾಗಿ ಆನ್​ಲೈನ್​ ಡೆಲಿವರಿ ಕಂಪನಿಗಳಾದ ಅಮೆಜಾನ್​​, ಸ್ವಿಗ್ಗೀ, ಜೊಮೊಟೊ, ಫ್ಲಿಪ್​ಕಾರ್ಟ್​​​​, ಡಾಮಿನೋಸ್​​ ಪಿಜ್ಜಾ, ಕೆಎಫ್​ಸಿ ಹೀಗೆ ಹತ್ತು ಹಲವು ಕಂಪನಿಗಳು ಹೋಮ್​ ಡೆಲಿವರಿ ಬಾಯ್​​ಗಳನ್ನ ಇಟ್ಟುಕೊಂಡು ಹೋಮ್ ಡೆಲಿವರಿ ಮಾಡುತ್ತಿದೆ. ಸಾಂಕ್ರಾಮಿಕಕ್ಕೂ ಮುನ್ನ ಸಾಮಾನ್ಯವಾಗಿ ಡೆಲಿವರಿ ಬಾಯ್​ಗಳು ತಮಗಿಷ್ಟ ಬಂದಂತೆ ಡೆಲಿವರಿ ಮಾಡಿ ಬರುತ್ತಿದ್ರು. ಆದ್ರೆ ಈಗ ಸಾಂಕ್ರಾಮಿಕ ರೋಗ ಹರಡುತ್ತಿರುವುದರಿಂದ ಆಯಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸೇಫ್ಟಿ ಮೆಶರ್ಸ್​ ತೆಗೆದುಕೊಂಡು ಡೆಲಿವರಿ ಮಾಡುತ್ತಿವೆ. ಆದ್ರೂ ಕೂಡ ಜನ ಹೋಮ್ ಡೆಲಿವರಿ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದರ ಬಗ್ಗೆ ಅರಿವಾಗುತ್ತಿದ್ದಂತೆ ಬಹುತೇಕ ಕಂಪನಿಗಳು ಆನ್​ಲೈನ್​ನಲ್ಲಿ ಆರ್ಡರ್​ ಮಾಡುವಾಗಲೇ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೀವಿ ಅನ್ನೋ ಜಾಹಿರಾತನ್ನು ಕೂಡ ಎಲ್ಲಾ ಕಡೆ ಕೊಡುತ್ತಿದೆ. ಆದ್ರೂ ಕೂಡ ಗ್ರಾಹಕರು ಆನ್​ಲೈನ್​​ನಲ್ಲಿ ಆರ್ಡರ್ ಮಾಡಲು ಹಿಂದೆಟು ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ಈಗ ಕಂಪನಿಗಳು ಡೆಲಿವರಿ ಬಾಯ್​ಗಳಿಗೆ ವ್ಯಾಕ್ಸಿನ್ ಕೊಡಿ ಎಂದು ದುಂಬಾಲು ಬಿದ್ದಿರೋದು.

ಡೆಲಿವರಿ ಬಾಯ್ಸ್​ಗೆ ಶೀಘ್ರ ಲಸಿಕೆ ಕೊಡಿಸಲು ಕಂಪನಿಗಳ ಪ್ಲಾನ್2020ರಲ್ಲಿ ನಡೆದ ಒಂದು ಘಟನೆಯನ್ನ ನಾವಿಲ್ಲ ನೆನಪಿಸಿಕೊಳ್ಳಬಹುದು. ದಿಲ್ಲಿಯಲ್ಲಿ ಒಬ್ಬ ಯುವಕ ಪಿಜ್ಜಾ ಡೆಲಿವರಿ ಬಾಯ್​ ಆಗಿ ಕೆಲಸ ಮಾಡಿಕೊಂಡಿದ್ದ. ಆ ಸಮಯದಲ್ಲೂ ಕೂಡ ಇಡೀ ದೇಶದಲ್ಲೇ ಲಾಕ್​​ಡೌನ್ ಹೇರಲಾಗಿತ್ತು. ಆ ಸಂದರ್ಭದಲ್ಲಿ ಹೆಚ್ಚೆಚ್ಚು ಜನ ಮನೆಯಲ್ಲಿದ್ದವರು ತಮಗೆ ಏನ್ ಬೇಕೋ ಅದನ್ನ ಆನ್​ಲೈನ್​ನಲ್ಲಿ ಆರ್ಡರ್ ಮಾಡಿಕೊಳ್ಳಲು ಅವಕಾಶ ಇತ್ತು. ಅದಕ್ಕಾಗಿ ಇ-ಕಾಮರ್ಸ್​ ಸೇವೆಗೆ ಅನುಮತಿ ನೀಡಿದ್ದರು. ಆಗ ದಿಲ್ಲಿಯಲ್ಲಿದ್ದ ಪಿಜ್ಜಾ ಡೆಲಿವರಿ ಬಾಯ್ ಬರೋಬ್ಬರಿ 72 ಮನೆಗಳಿಗೆ ಪಿಜ್ಜಾವನ್ನ ಡೆಲಿವರಿ ಮಾಡಿದ್ದ. ಆದಾದ ಬಳಿಕ ಆತನಿಗೆ ಸೋಂಕಿರೋದು ದೃಢಪಟ್ಟಿತ್ತು. ಯಾವಾಗ ಪಿಜ್ಜಾ ಡೆಲಿವರಿ ಬಾಯ್​​ಗೆ ಪಾಸಿಟಿವ್ ಅನ್ನೋದು ಗೊತ್ತಾಗಿತ್ತೋ ಆ 72 ಮನೆಯಲ್ಲಿದ್ದವರನ್ನ ಕ್ವಾರಂಟೀನ್ ಮಾಡಲಾಗಿತ್ತು. ಆಗಿದ್ದ ಭಯ ಈಗಲೂ ಇರೋದ್ರಿಂದ ಈ ಬಾರಿ ರಾಜ್ಯಗಳಲ್ಲಿ ಹೇರಿರೋ ಲಾಕ್​ಡೌನ್​ನಿಂದ ಜನ ಆನ್​ಲೈನ್ ನಲ್ಲಿ ಆರ್ಡರ್ ಮಾಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಅಲ್ಲದೇ ಈಗಿರೋ ವರದಿ ಪ್ರಕಾರ ಕಳೆದ ಮೂರು ವಾರಗಳಿಂದ ಆನ್​ಲೈನ್​ನಲ್ಲಿ ಆರ್ಡರ್ ಮಾಡುತ್ತಿರೋರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಕಾರಣ ಯುವಕರು ಯಾರು ಕೂಡ ಸೂಕ್ತ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳುತ್ತಿಲ್ಲ ಅನ್ನೋದು. ಅದಕ್ಕಾಗಿ ಕಂಪನಿಗಳು ತಮ್ಮ ಡೆಲಿವರಿ ಬಾಯ್ಗಳಿಗೆ ವಿಶೇಷವಾಗಿ ಹ್ಯಾಂಡ್ ಗ್ಲೌಸ್​​, ಫೇಸ್ ಮಾಸ್ಕ್, ಫೇಸ್ ಶೀಲ್ಡ್​​ ಹಾಗೂ ಸ್ಯಾನಿಟೈಸರ್ ಕೂಡ ಕೊಟ್ಟು ಕಳುಹಿಸೋದಕ್ಕೆ ಶುರು ಮಾಡಿದ್ದರು. ಅಲ್ಲದೇ ಅನ್​​ಟಚಬಲ್ ಡೆಲಿವರಿ ಅನ್ನೋ ಕಾನ್ಸೆಪ್ಟ್​  ತಂದು ಗ್ರಾಹಕರ ಸೇಫ್ಟಿಗಾಗಿ ಇದೆಲ್ಲವನ್ನ ಮಾಡಿದ್ದೀವಿ ಅಂತಾ ಹೇಳಿಕೊಂಡಿದ್ದವು. ಆದ್ರೂ ಕೂಡ ಗ್ರಾಹಕರು ಹಿಂದೆಟು ಹಾಕ್ತಿದ್ದಾರೆ. ಹಾಗಾಗಿ ಈಗ ತಮ್ಮ ಡೆಲಿವರಿ ಬಾಯ್​​ಗಳಿಗೆ ಲಸಿಕೆ ಕೊಡಿಸಲು ಕಂಪನಿಗಳು ಮುಂದಾಗಿವೆ.

ಇನ್ನು ಏನಾದ್ರು ಸರ್ಕಾರ ಡೆಲಿವರಿ ಬಾಯ್​​ಗಳಿಗೆ ಲಸಿಕೆ ಕೊಡೋದಕ್ಕೆ ಅನುಮತಿ ನೀಡಿದ್ದೇ ಆದ್ರೆ ತಕ್ಷಣ ಅವರ ಹೆಸರ ಸಮೇತ ಆನ್​​​ಲೈನ್​​ನಲ್ಲಿ ಮಾಹಿತಿ ಅಪಲೋಡ್​​ ಮಾಡೋ ಪ್ಲಾನ್ ಅನ್ನು ಮಾಡಿಕೊಂಡಿವೆ ಆನ್​ಲೈನ್​ ಡೆಲಿವರಿ ಕಂಪನಿಗಳು. ಈ ವಿಚಾರವಾಗಿ ಜೊಮ್ಯಾಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಮಾತನಾಡಿ, “ನಮ್ಮ ವಿತರಣಾ ಪಾಲುದಾರರಿಗೆ ಸಾಧ್ಯವಾದಷ್ಟು ಬೇಗ ಲಸಿಕೆ ನೀಡಲು ನಾವು ಪ್ರಾರಂಭಿಸಿದ್ದೇವೆ. ಆ್ಯಪ್​​ನಲ್ಲಿ ಶೀಘ್ರದಲ್ಲೇ ಇದರ ಬಗ್ಗೆ ನಿಮಗೆ ತಿಳಿಸಲಾಗುವುದು ಎಂದಿದ್ದಾರೆ.

ಇನ್ನು ಸ್ವಿಗ್ಗಿ ಮತ್ತು ಜೊಮ್ಯಾಟೊ ದಲ್ಲಿ ಒಟ್ಟಿಗೆ ಮೂರು ಲಕ್ಷದ ಐವತ್ತು ಸಾವಿರ ಮಂದಿ ಡೆಲಿವರಿ ಬಾಯ್ಸ್​ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರಿಗೂ ವ್ಯಾಕ್ಸಿನ್ ಹಾಕಿಸೋ ಕೆಲಸಕ್ಕೆ ಈಗ ಕಂಪನಿಗಳು ಮುಂದಾಗಿವೆ. ಅವರಿಗೆಲ್ಲಾ ಲಸಿಕೆ ಹಾಕಿಸಿದ ಬಳಿಕ ಪಾರದರ್ಶಕತೆಯ ಕಾರಣದಿಂದಾಗಿ ಅವರ ಹೆಸರ ಮುಂದೆ ಲಸಿಕೆ ಪಡೆದಿರೋ ಬಗ್ಗೆ ಮಾಹಿತಿಯನ್ನ ಹಂಚಿಕೊಳ್ಳುತ್ತೀವಿ ಅಂದಿದ್ದಾರೆ. ಇನ್ನು ಈ ವಿಚಾರವಾಗಿ ಇ-ಕಾಮರ್ಸ್​​ ದೈತ್ಯ ಅಮೇಜಾನ್ ಕೂಡ ತನ್ನ ಬ್ಲಾಗ್ ನಲ್ಲಿ ಈ ರೀತಿ ಬರೆದು ಪೋಸ್ಟ್ ಮಾಡಿದೆ.

“ನಾವು ಲಸಿಕೆ ಕಾರ್ಯಕ್ರಮವನ್ನು ಮುಂಚೂಣಿಯಲ್ಲಿರುವವರೊಂದಿಗೆ ಪ್ರಾರಂಭಿಸಿದ್ದೇವೆ, ನಮ್ಮ ಗ್ರಾಹಕರಿಗೆ ತಲುಪಿಸುತ್ತೇವೆ ಮತ್ತು ಲಸಿಕೆಗಳು ಹೆಚ್ಚು ಲಭ್ಯವಾದಾಗ ವಿಸ್ತರಿಸುವುದನ್ನು ಮುಂದುವರಿಸುತ್ತೇವೆ”
– ಅಮೆಜಾನ್

ನೋಡಿ ಹೀಗೆ ಆನ್​ಲೈನ್​ ಡೆಲಿವರಿ ಮಾಡೋ ಕಂಪನಿಗಳು ಇಂಥಾ ಒಂದು ನಿರ್ಧಾರಕ್ಕೆ ಬಂದಿದ್ದು, ಡೆಲಿವರಿ ಬಾಯ್ಸ್​ ಸುರಕ್ಷತೆ ದೃಷ್ಟಿಯಿಂದ ಹಾಗು ತಮ್ಮ ವ್ಯಾಪಾರ ವಹಿವಾಟಿನ ದೃಷ್ಟಿಯಿಂದಲೂ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ. ಆದ್ರೆ ಹೀಗೆ ವ್ಯಾಕ್ಸಿನ್ ನೀಡಿದ್ದೇ ಆದ್ರೆ ನಿಜಕ್ಕೂ ಒಂದು ರೀತಿಯಲ್ಲಿ ಪಾರದರ್ಶಕತೆ ಬರೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿ ಗ್ರಾಹಕರು ಕುಡ ಯಾವುದೇ ಹಿಂಜರಿಕೆಯಿಲ್ಲದೇ ಆನ್​ಲೈನ್​ನಲ್ಲಿ ಆರ್ಡರ್​ ಕೂಡ ಮಾಡಬಹದಾಗಿದೆ. ಆದ್ರೂ ನಮ್ಮ ಎಚ್ಚರಿಕೆಯಿಂದ ನಾವ್ ಇರಬೇಕು ಅನ್ನೋದನ್ನ ಮರೆಯುವ ಹಾಗಿಲ್ಲ.

 

The post ಡೆಲಿವರಿ ಬಾಯ್ಸ್​ಗೆ ಶೀಘ್ರ ಲಸಿಕೆ ಕೊಡಿಸಲು ಕಂಪನಿಗಳ ಪ್ಲಾನ್ appeared first on News First Kannada.

Source: newsfirstlive.com

Source link