ರಾಯಚೂರು: ಮಹಾರಾಷ್ಟ್ರದಲ್ಲಿ ದಿನೇ ದಿನೇ ಡೆಲ್ಟಾ ಪ್ಲಸ್ ಹೆಚ್ಚಳ ಹಿನ್ನೆಲೆ ರಾಯಚೂರಿನಲ್ಲಿ ಡೆಲ್ಟಾ ಪ್ಲಸ್​ ಬರದಂತೆ ತಡೆಯಲು ಜಿಲ್ಲಾಡಳಿತ ಸಜ್ಜಾಗುತ್ತಿದೆ.

ರಾಯಚೂರು ಜಿಲ್ಲಾಡಳಿತ ಗಡಿಯಲ್ಲಿ ತಪಾಸಣೆಗಾಗಿ ಒಟ್ಟು 22 ನೋಡಲ್ ಅಧಿಕಾರಿಗಳ ‌ನೇಮಕ ಮಾಡಿದೆ. ಜಿಲ್ಲೆಯ 11 ಚೆಕ್ ಪೋಸ್ಟ್ ಗಳಲ್ಲಿ 24 ಗಂಟೆಗಳ ಕಾಲ ತಪಾಸಣೆ ಕಡ್ಡಾಯವಾಗಿ ನಡೆಯಲಿದೆ. ರಾಯಚೂರಿನ ರೈಲು ನಿಲ್ದಾಣ, ಬಸ್ ನಿಲ್ದಾಣ ಹಾಗೂ 9 ಗಡಿಯ ಚೆಕ್ ಪೋಸ್ಟ್​ನಲ್ಲೂ ತಪಾಸಣೆ ನಡೆಸಿ.. ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವ ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡಬೇಕು. RTPCR ನೆಗೆಟಿವ್ ರಿಪೋರ್ಟ್ ಇದ್ರೆ ಮಾತ್ರ ಜಿಲ್ಲೆಗೆ ಎಂಟ್ರಿ ಕೊಡಿ.. ಒಂದು ಡೋಸ್ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು ಎಂದು ರಾಯಚೂರು ಜಿಲ್ಲಾಡಳಿತ ಖಡಕ್ ಆದೇಶ ಹೊರಡಿಸಿದೆ.

The post ಡೆಲ್ಟಾಪ್ಲಸ್ ಸೋಂಕು: ನೆಗೆಟಿವ್ ಸರ್ಟಿಫಿಕೇಟ್ ಇದ್ದರಷ್ಟೇ ಗಡಿ ದಾಟಿ ಎನ್ನುತ್ತಿದೆ ರಾಯಚೂರು ಜಿಲ್ಲಾಡಳಿತ appeared first on News First Kannada.

Source: newsfirstlive.com

Source link