ಇಡೀ ಜಗತ್ತು ಕೊರೊನಾ ವಿರುದ್ಧ ಇನ್ನೂ ಹೋರಾಡುತ್ತಲೇ ಇದೆ. ಈಗ ಮೂರನೇ ಅಲೆಯ ಭೀತಿಯಲ್ಲಿದ್ದು, ಇದನ್ನ ಎದುರಿಸೋಕೆ ಎಲ್ಲ ರಾಷ್ಟ್ರಗಳೂ ಸಿದ್ಧತೆಗಳನ್ನ ಮಾಡಿಕೊಳ್ತಿವೆ. ಈ ನಡುವೆ ಫ್ರಾನ್ಸ್, ಕೋವಿಡ್ ನಾಲ್ಕನೇ ಅಲೆಯ ಎಚ್ಚರಿಕೆಯನ್ನ ನೀಡಿದೆ.

ಡೆಲ್ಟಾ ರೂಪಾಂತರಿ ತಳಿಯ ವೈರಸ್​ ಹರಡುವಿಕೆ ಹೆಚ್ಚಾಗಿದ್ದು, ಜುಲೈ ಅಂತ್ಯದ ವೇಳೆಗೆ ಫ್ರಾನ್ಸ್​ನಲ್ಲಿ ನಾಲ್ಕನೇ ಅಲೆ ಉಂಟಾಗಬಹುದು ಅಂತ ಅಲ್ಲಿನ ಸರ್ಕಾರದ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹೊಸದಾಗಿ ಪತ್ತೆಯಾಗುತ್ತಿರುವ ಸೋಂಕಿತರಲ್ಲಿ ಶೇಕಡ 30ರಷ್ಟು ಡೆಲ್ಟಾ ರೂಪಾಂತರಿಯಿಂದ ಬಾಧೆ ಪಡುತ್ತಿರುವವರಾಗಿದ್ದಾರೆ. ಈ ತಿಂಗಳಾಂತ್ಯಕ್ಕೆ ನಾಲ್ಕನೆ ಅಲೆ ಹಬ್ಬುವ ಸಾಧ್ಯತೆ ದಟ್ಟವಾಗಿದೆ ಅಂತ ವಕ್ತಾರ ಗ್ಯಾಬ್ರಿಯೆಲ್ ಅಟ್ಟಲ್ ಹೇಳಿದ್ದಾರೆ.

The post ಡೆಲ್ಟಾ ಅಬ್ಬರ; ಫ್ರಾನ್ಸ್​​ನಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ appeared first on News First Kannada.

Source: newsfirstlive.com

Source link