ಇಷ್ಟು ದಿನ ಮೊಬೈಲ್​ನಲ್ಲಿ ಮಿನಿ, ಮ್ಯಾಕ್ಸ್, ಪ್ರೋ ಮ್ಯಾಕ್ಸ್ ಅಂತ ವಿಭಿನ್ನ ಪ್ರಕಾರಗಳನ್ನು ನೋಡಿದ್ವಿ. ಆದ್ರೆ, ಈ ಹಾಳಾದ್ ಕೊರೊನಾ ಬಂದ ಮೇಲೆ ವೈರಸ್​​ಗಳಲ್ಲೂ ಪ್ರೊ, ಪ್ರೋ ಮ್ಯಾಕ್ಸ್ ಅನ್ನೋ ರೀತಿಯಲ್ಲಿ ವಿಧಾನಗಳನ್ನು ಕೇಳೋಹಾಗೆ ಆಗಿದೆ. ಆದ್ರೆ, ಮೊಬೈಲ್ ಬದಲಾವಣೆ ಖುಷಿ ಕೊಟ್ಟರೆ.. ಇದು ಆತಂಕವುಂಟು ಮಾಡ್ತಿದೆ.. ಸದ್ಯಕ್ಕೆ ಡೆಲ್ಟಾ ಪ್ಲಸ್ ಅನ್ನೋ ವೇರಿಯಂಟ್ ಕರ್ನಾಟಕದಲ್ಲೂ ಪತ್ತೆಯಾಗಿದ್ದು.. ಇದರ ಬಗ್ಗೆ ತಿಳಿಯಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ..

ಈ ಕೊರೊನಾ ಇದೆಯಲ್ಲ ಕಣ್ರಿ.. ಇದು ಮನುಷ್ಯ ನೆಮ್ಮದಿಯಾಗಿ ಇರೋಕೆ ಬಿಡಲ್ಲ ಅನಿಸುತ್ತೆ.. ಇನ್ನೇನು ಕೊರೊನಾ ಎರಡನೇ ಅಲೆ ಮುಗಿದೇ ಹೋಯ್ತು.. ಎಲ್ಲಾರು ವ್ಯಾಕ್ಸಿನ್ ಬೇರೆ ತಗೋತಾ ಇದ್ದೀವಿ.. ಕೆಲವ ದಿನಗಳಲ್ಲಿ ಮತ್ತೆ ನಮ್ಮ ದೈನಂದಿನ ಜೀವನ ಹಳಿಗೆ ಮರಳುತ್ತೆ.. ಅಂತಾ ನಿಟ್ಟುಸಿರು ಬಿಟ್ಟಿದ್ರು.. ಆದ್ರೆ.. ಈ ಬಹುರೂಪಿ ಕೊರೊನಾ ಒಂದು ಖತರ್ನಾಕ್ ರೂಪ ಪಡೆದುಕೊಂಡಿತ್ತು. ಅದನ್ನ ವಿಜ್ಞಾನಿಗಳು ಡೆಲ್ಟಾ ರೂಪಾಂತರಿ ಅಂತ ಗುರ್ತಿಸಿದ್ರು. ಎರಡನೇ ಅಲೆಯಲ್ಲಿ ಇದೇ ಸಾಕಷ್ಟು ಪ್ರಮಾಣದಲ್ಲಿ ತಾಂಡವವಾಡಿಬಿಟ್ಟಿತ್ತು. ಇದು ಸಾಲದು ಎಂಬಂತೆ ಇದೀಗ ಇದು ಮತ್ತೊಂದು ಟ್ವಿಸ್ಟ್ ಕೊಟ್ಟಿದೆ.. ಆ ಟ್ವಿಸ್ಟ್ ಏನು ಅಂತ ತಿಳಿಯೋ ಮೊದಲು ನಿಮಗೆ ಒಂದು ಕಥೆ ಹೇಳ್ತೀವಿ ಕೇಳಿ..

ಕೇವಲ ಸಿಂಬಾಲಿಕ್ ಚಿತ್ರ ಮಾತ್ರ

ಒಂದು ದೇಶದಲ್ಲಿ ಒಬ್ಬ ರಾಜ ಇರ್ತಾನೆ.. ಅವನಂದ್ರೆ ಅವನ ಸುತ್ತ ಮುತ್ತಲಿನ ಎಲ್ಲ ರಾಜ್ಯಗಳಿಗೂ ಭಯ ಕಾಡ್ತಾ ಇರುತ್ತೆ.. ಆದ್ರೂ ಆತನಿಗೆ ವಿರೋಧಿಗಳೂ ಹುಟ್ಟಿಕೊಳ್ತಾರೆ ಮತ್ತು ಸಾಕಷ್ಟು ಸ್ಟ್ರಾಂಗ್ ಆಗ್ತಾರೆ.. ಆಗ ಆ ರಾಜ ಯೋಚನೆ ಮಾಡೋಕೆ ಆರಂಭ ಮಾಡ್ತಾನೆ.. ನಾನು ಒಬ್ಬನೇ ಆದ್ರೆ ಇವರನ್ನೆಲ್ಲ ಸೋಲಿಸೋಕೆ ಆಗಲ್ಲ.. ನನಗೆ ಇನ್ನೊಂದು ದೇಶದ ಸಹಾಯವೂ ಬೇಕು ಅಂತಿರುವಾಗ್ಲೇ.. ದೂರದ ದಕ್ಷಿಣ ಆಫ್ರಿಕಾದಲ್ಲಿರೋ ರಾಣಿ ಬಗ್ಗೆ ಇವನಿಗೆ ತಿಳಿಯುತ್ತೆ..ಆಕೆಯೂ ಮಹಾನ್ ಪರಾಕ್ರಮಿ.. ಆಕೆ ಬಗ್ಗೆ ಇಡೀ ವಿಶ್ವದಲ್ಲೇ ಭಯ ಇರುತ್ತೆ.. ಅಂಥ ರಾಣಿ ಜೊತೆ ಈತನಿಗೆ ಸ್ನೇಹ ಆಗುತ್ತೆ.. ಸ್ನೇಹ ಪ್ರೀತಿಗೆ ತಿರುಗುತ್ತೆ.. ಅವರ ಪ್ರೀತಿಗೆ ಕುರುಹಾಗಿ ಒಂದು ಮಗುವೂ ಜನಿಸುತ್ತೆ.. ಆ ಮಗು ಮತ್ತಷ್ಟು ಡೇಂಜರಸ್ ಆಗಿರುತ್ತೆ.. ಅದು ಹುಟ್ಟುತ್ತಲೇ ಆತಂಕ ಸೃಷ್ಟಿಯಾಗಿ ಬಿಡುತ್ತೆ..!

ಅಷ್ಟಕ್ಕೂ ವೈರಸ್ ಬಗ್ಗೆ ಹೇಳುವಾಗ ಈ ಕಥೆ ಯಾಕೆ ಅಂದ್ರಾ? ಈ ಕಥೆಯಲ್ಲಿರೋ ರಾಜ ಬೇರೆ ಯಾರೂ ಅಲ್ಲ.. ಅದನ್ನ ನೀವು ಡೆಲ್ಟಾ ಅಲಿಯಾಸ್ B.1.617.2 ರೂಪಾಂತರಿ ವೈರಸ್ ಎನ್ನಬಹುದು..ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವೈರಿಗಳೇ ವ್ಯಾಕ್ಸಿನ್​ಗಳೂ, ಮೆಡಿಸಿನ್​ಗಳು.. ಆ ರಾಣಿ ಕೂಡ ಬೇರೆಯಾರೂ ಅಲ್ಲ ಅದು ದಕ್ಷಿಣ ಆಫ್ರೀಕಾದಲ್ಲಿ ಮೊದಲ ಬಾರಿಗೆ ಕಂಡು ಬಂದಿದ್ದ KF17N ಹೆಸರಿನ ರೂಪಾಂತರಿ ವೈರಸ್..! ಇವೆರಡರ ಸಮ್ಮಿಲನದಲ್ಲಿ ಹುಟ್ಟಿದ ಮಗು ಯಾರು ಅಂದುಕೊಂಡಿರಿ? ಅದು ಬೇರೆ ಏನೂ ಅಲ್ಲ.. ಅದೇ ಇಂದು ಭಯ ಹುಟ್ಟಿಸಿರೋ ಡೆಡ್ಲಿ ಡೆಲ್ಟಾ ಪ್ಲಸ್ ವೈರಸ್..!


ಹೌದು.. ಈ ಎರಡೂ ರೂಪಾಂತರಿಗಳ ಸಮ್ಮಿಳನವಾಗಿರೋ ಡೆಲ್ಟಾ ಪ್ಲಸ್ ಅಲಿಯಾಸ್ AY.1 ಅಲಿಯಾಸ್ B.1.617.2.1 ರೂಪಾಂತರಿ ವೈರಸ್ ಪ್ರಾರಂಭದಲ್ಲೇ ಸಾಕಷ್ಟು ಆತಂಕವನ್ನ ಸೃಷ್ಟಿಸಿಬಿಟ್ಟಿದೆ. ಬರೋಬ್ಬರಿ 80 ದೇಶಗಳಲ್ಲಿ ಈ ರೂಪಾಂತರಿ ಕಂಡು ಬಂದಿದೆ ಎನ್ನಲಾಗಿದ್ದರೂ.. ಭಾರತಕ್ಕೆ ಇತ್ತೀಚೆಗಷ್ಟೇ ಇದು ಕಂಡು ಬಂದಿದೆ.

  • ಡೆಲ್ಟಾ ಪ್ಲಸ್ ವೈರಸ್​ ಬಗ್ಗೆ ಯಾಕಿಷ್ಟು ಆತಂಕ?
  • ಅತ್ಯಂತ ವೇಗವಾಗಿ ಹರಡುವ ಗುಣ
  • ಶ್ವಾಸಕೋಶಕ್ಕೆ ಗಟ್ಟಿಯಾಗಿ ಅಂಟಿಕೊಳ್ಳುತ್ತೆ
  • ರೋಗನಿರೋಧಕ ಶಕ್ತಿ ಕಣಗಳನ್ನೇ ನಿಶ್ಯಕ್ತವಾಗಿಸುತ್ತೆ

ಡೆಲ್ಟಾ ಪ್ಲಸ್ ವೈರಸ್​ ಬಗ್ಗೆ ಯಾಕಿಷ್ಟು ಆತಂಕ? ನೋಡೋದಾದ್ರೆ.. ಇದು ಅತ್ಯಂತ ವೇಗವಾಗಿ ಹರಡುತ್ತೆ ಅಂತಾರೆ ವಿಜ್ಞಾನಿಗಳು. ಡೆಲ್ಟಾ ರೂಪಾಂತರಿಯೇ ರೂಪಾಂತರವಾಗಿರೋದ್ರಿಂದ ಅದಕ್ಕಿಂತ ವೇಗವಾಗಿ ಇದು ಹರಡುತ್ತೆ ಎನ್ನಲಾಗಿದೆ. ಅಷ್ಟೇ ಅಲ್ಲ ಮನುಷ್ಯನ ಶ್ವಾಸಕೋಶದ ಗೋಡೆಯಲ್ಲಿರುವ ರಿಸೀವರ್​ ಆಕಾರಕ್ಕೆ ಇದು ಗಟ್ಟಿಯಾಗಿ ಅಂಟಿಕೊಳ್ಳುತ್ತಂತೆ. ಜೊತೆಗೆ, ಮೊನೊಕ್ಲೋನಲ್ ಆ್ಯಂಟಿಬಾಡಿ ರೆಸ್ಪಾನ್ಸ್ ಅಥವಾ ರೋಗನಿರೋಧಕ ಶಕ್ತಿ ಕಣದ ಶಕ್ತಿಯನ್ನೇ ಇದು ಕುಂದಿಸುತ್ತೆ ಅಂತಾರೆ ವಿಜ್ಞಾನಿಗಳು..)

ಯಾವಾಗ ಈ ವೈರಸ್ ವೇಗವಾಗಿ ಹರಡುತ್ತೆ ಅನ್ನೋ ವಿಷಯ ಗೊತ್ತಾಯ್ತೋ.. ಕೇಂದ್ರ ಸರ್ಕಾರ ಕೂಡ ಸಾಕಷ್ಟು ಅಲರ್ಟ್​​ ಆಗಿದೆ.. ಈಗಾಗಲೇ ರಾಜ್ಯ ಸರ್ಕಾರಗಳಿಗೆ ಮಹತ್ವದ ಸೂಚನೆ ರವಾನಿಸಿದೆ. ಅದ್ರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕೇರಳ ರಾಜ್ಯಗಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನ ಕೇಂದ್ರ ಸರ್ಕಾರ ನೀಡಿದೆ.

ಟೆಸ್ಟ್.. ಟ್ರಾಕ್.. ಟ್ರೀಟ್.. ರಿಪೀಟ್..
ಕಂಟೈನ್​ಮೆಂಟ್.. ಕಂಟೈನ್​ಮೆಂಟ್.. ಕಂಟೈನ್​ಮೆಂಟ್

ಈಗಾಗಲೇ ಎರಡನೇ ಅಲೆ ತಂದಿಟ್ಟ ಆಘಾತದಿಂದ ದೇಶ ಇನ್ನೂ ಚೇತರಿಸಿಕೊಂಡಿಲ್ಲ.. ಎರಡನೇ ಅಲೆ ವೇಗ ಕಡಿಮೆಯಾಗಿದ್ರೂ ಇಂದಿಗೂ ಸರಾಸರಿ 50 ಸಾವಿರ ಹೊಸ ಕೊರೊನಾ ಕೇಸ್​ಗಳು ದೇಶದಲ್ಲಿ ದಾಖಲಾಗ್ತಿವೆ.. ಹೀಗಾಗಿ, ಈ ಬಾರಿ ಯಾವುದೇ ಚಾನ್ಸ್ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿಲ್ಲ. ಹೀಗಾಗಿಯೇ ರಾಜ್ಯಸರ್ಕಾರಗಳಿಗೆ ಟೆಸ್ಟ್.. ಟ್ರಾಕ್.. ಟ್ರೀಟ್.. ರಿಪೀಟ್.. ಅನ್ನೋ ಫಾರ್ಮುಲಾವನ್ನ ನೀಡಿದೆ. ಇದರ ಅರ್ಥ ಇಷ್ಟೇ.. ಟೆಸ್ಟ್​​ಗಳನ್ನು ಸಾಕಷ್ಟು ಮಾಡಿ.. ಅವುಗಳನ್ನು ಜಿನೋಮ್​ ಸಿಕ್ವೆನ್ಸಿಂಗ್​ ಕೂಡ ಮಾಡ್ತಿರಿ.. ಜೊತೆಗೆ ಸೋಂಕಿತರು ಕಂಡು ಬಂದ್ರೆ ಅವರನ್ನ ಟ್ರಾಕ್ ಮಾಡಿ.. ಅವರ ಪ್ರಾಥಮಿಕ ಮತ್ತು ತದನಂತರದ ಸಂಪರ್ಕವನ್ನ ಟ್ರೇಸ್​ ಮಾಡಿ.. ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ.. ಮತ್ತೆ ಮತ್ತೆ ಈ ಕಾರ್ಯವನ್ನ ನಿರಂತರವಾಗಿ ಮಾಡ್ತಿರಿ ಅಂತಾ ಹೇಳಿದೆ.

ಅಷ್ಟೇ ಅಲ್ಲ, ಕಂಟೈನ್​ಮೆಂಟ್.. ಕಂಟೈನ್​ಮೆಂಟ್.. ಕಂಟೈನ್​ಮೆಂಟ್ ಅನ್ನೋ ಮೂಲ ಮಂತ್ರವನ್ನ ಕೂಡ ರಾಜ್ಯ ಸರ್ಕಾರಗಳಿಗೆ ಕೇಂದ್ರ ಉಪದೇಶೀಸಿದೆ. ಅಂದ್ರೆ ಸೋಂಕಿತರನ್ನ ಐಸೋಲೇಟ್​ ಮಾಡಿ.. ಸೋಂಕನ್ನ ಕಂಟೈನ್​ಮೆಂಟ್ ಮಾಡಿ ಅಂತ.. ಅಂದ್ರೆ ಸೋಂಕಿತರು ಕಂಡು ಬಂದ ತಕ್ಷಣ ಅಂಥವರನ್ನು ಐಸೋಲೇಟ್​ ಮಾಡ್ಬೇಕು.. ಅವರ ಸಂಪರ್ಕದಲ್ಲಿ ಬಂದವರನ್ನ ಕ್ವಾರಂಟೀನ್ ಮಾಡಬೇಕು.. ಅವಶ್ಯ ಬಿದ್ದಲ್ಲಿ ಪುಟ್ಟ ಪುಟ್ಟ ಝೋನ್​ಗಳನ್ನು ಮಾಡಿ ನಿರ್ಬಂಧ ವಿಧಿಸಬೇಕು.. ಈ ಮೂಲಕ ವೈರಸ್​​ ಹರಡದಂತೆ ಅದನ್ನು ಕಂಟೈನ್​​ ಅಂದ್ರೆ ನಿಯಂತ್ರಣ ಮಾಡಬೇಕು ಅಂತಾ ಕೇಂದ್ರ ಹೇಳಿದೆ..

ರಾಜ್ಯ ಸರ್ಕಾರಗಳಿಗೆ ಯಾಕೆ ಶಿಫಾರಸ್ಸು?

ಹಾಗೆ ನೊಡಿದ್ರೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಯಾಕೆ ಜಹೀಗೆ ಶಿಫಾರಸು ಮಾಡುತ್ತಿದೆ ಅಂತ ನೋಡೋದಾದ್ರೆ.. ಈಗಾಗಲೇ ಡೆಲ್ಟಾ ಪ್ಲಸ್ ವೇರಿಯಂಟ್ ಸದ್ಯ ದೇಶದಲ್ಲಿ ಬರೋಬ್ಬರಿ 40 ಜನರಲ್ಲಿ ಕಂಡು ಬಂದಿದೆ ಅಂತಾ ಹೇಳಲಾಗ್ತಿದೆ. ಅದ್ರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಇದರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ಮಹಾರಾಷ್ಟ್ರದ ರತ್ನಗಿರಿ, ಜಲ್​ಗಾಂವ್, ಮುಂಬೈ, ಪಾಲ್​ಘಾರ್, ಥಾಣೆ, ಸಿಂಧುದುರ್ಗದಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕಂಡು ಬಂದಿದೆ. ಇನ್ನು ಕರ್ನಾಟಕದ ಮೈಸೂರಿನಲ್ಲೂ ವೈರಸ್​ನ ಮೊದಲ ಪ್ರಕರಣ ಪತ್ತೆಯಾಗಿದೆ. ಜೊತೆಗೆ ಕೇರಳ ಹಾಗೂ ಮಧ್ಯಪ್ರದೇಶದಲ್ಲೂ ಆತಂಕ ಸೃಷ್ಟಿಯಾಗಿದೆ.

ಡೆಲ್ಟಾ ಪ್ಲಸ್ ನಿಜಕ್ಕೂ ನಟೋರಿಯಸ್ ಕಿಲ್ಲರಾ?

ಇತ್ತೀಚೆಗೆ ತಾನೆ ಈ ಸೋಂಕು ಮೈಸೂರಿನಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಮೈಸೂರು ಮೆಡಿಕಲ್ ಆಸ್ಪತ್ರೆ ಡೀನ್ ಡಾ. ನಂಜರಾಜ್, ಇದು ಅತ್ಯಂತ ನಟೋರಿಯಸ್ ಕಿಲ್ಲರ್ ವೈರಸ್.. ನೇರವಾಗಿ ಹೃದಯಕ್ಕೆ ಅಟ್ಯಾಕ್ ಆಗಲಿದೆ ಅಂತಾ ಹೇಳಿಕೆ ಕೊಟ್ಟಿದ್ರು.

ಡಾ. ನಂಜರಾಜ್ ಹೀಗೆ ಹೇಳಿಕೆ ಕೊಟ್ಟಿದ್ದರೂ.. ಇದು ನಿಜಕ್ಕೂ ನಟೋರಿಯಸ್ ಕಿಲ್ಲರ್ ಅಂತಾ ನಿರೂಪಿಸುವಂಥ ಯಾವುದೇ ಲಕ್ಷಣಗಳು ಸದ್ಯಕ್ಕೆ ಕಂಡು ಬಂದಿಲ್ಲ.. ಅದ್ರಲ್ಲೂ ಇದು ನೇರವಾಗಿ ಹೃದಯಕ್ಕೇ ಅಟ್ಯಾಕ್ ಮಾಡುತ್ತೆ ಅನ್ನೋದು ಕೂಡ ನಿರೂಪಿತವಾಗಿಲ್ಲ.. ಆದ್ರೆ, ವೈದ್ಯರು ತಮ್ಮ ಅನುಭವದಿಂದ ಜನರನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ..ಹಾಗಂತ ತೀವ್ರ ಭಯ ಪಟ್ಟುಕೊಳ್ಳುವಂಥ ಸನ್ನಿವೇಶವೂ ಇದಲ್ಲ.. ಜೊತೆಗೆ ಉದಾಸೀನ ಮಾಡುವಂಥ ಸಂದರ್ಭವೂ ಇದಲ್ಲ..


ಹೀಗಾಗಿ ಸರ್ಕಾರಗಳು ಲಾಕ್​ಡೌನ್ ಸಡಿಲಿಸಿದ್ರೂ.. ಅವರು ಡೆಲ್ಟಾ ಪ್ಲಸ್ ನಿಯಂತ್ರಣಕ್ಕೆ ನಿಯಮಗಳನ್ನು ಜಾರಿಗೆ ತರ್ತಾ ಇದ್ರೂ.. ಜನರು ತಮ್ಮನ್ನು ತಾವು ಮತ್ತು ತಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಪಣ ತೊಡಬೇಕು.. ತಮ್ಮ ಮತ್ತು ತಮ್ಮ ಕುಟುಂಬಕ್ಕಿಂತೂ ಹೆಚ್ಚು ಅನಿಸಿದ್ರೆ ಮಾತ್ರ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.. ಮಾಸ್ಕ್​ ಅನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು.. ಸಾಮಾಜಿಕ ಅಂತರ ಕಾಪಾಡಿಕೊಳ್ಳೋದನ್ನ ಬಿಡಬಾರದು.. ಗಾಳಿ ಸುದ್ದಿಗೆ ಕಿವಿ ಕೊಡದೇ ವ್ಯಾಕ್ಸಿನ್ ಅನ್ನು ಪಡೆಯಲೇ ಬೇಕು.. ಜೊತೆಗೆ ಹ್ಯಾಂಡ್​ ಸ್ಯಾನಿಟೈಸೇಷನ್​​, ಕೈ ತೊಳೆಯುವಂಥದ್ದು ಮುಂತಾದ ಕ್ರಮಗಳನ್ನು ಅನುಸರಿಸಬೇಕು. ಜೊತೆಗೆ ಯಾರಿಗಾದ್ರೂ ಕೊಂಚವೂ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ್ರೆ, ಏನೇ ಲಕ್ಷಣ ಕಂಡು ಬಂದ್ರೂ ತಡಮಾಡದೇ ಟೆಸ್ಟ್ ಮಾಡಿಸಿಕೊಳ್ಳಬೇಕು.. ಟ್ರೀಟ್​ಮೆಂಟ್ ಪಡೆಯಬೇಕು.. ಜೊತೆಗೆ ತಮ್ಮಿಂದ ಇನ್ನೊಬ್ಬರಿಗೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು.. ಆಗ ಇಂಥ ಯಾವುದೇ ರೂಪಾಂತರಿ ಬಗ್ಗೆಯೂ ಜನ ಭಯ ಬೀಳುವ ಅವಶ್ಯಕತೆಯೇ ಬರಲ್ಲ..

ಒಟ್ಟಿನಲ್ಲಿ ಹೋದೆಯಾ ಪಿಶಾಚಿ ಅಂದ್ರೆ ಬಂದೆ ಕವಾಕ್ಷೀಲಿ ಅನ್ನೋಹಾಗೆ ಎರಡನೇ ಅಲೆ ಇನ್ನೇನು ಮುಗೀತು ಅನ್ನೋ ಹಂತದಲ್ಲಿ ಸದ್ಯ ಡೆಲ್ಟಾ ಪ್ಲಸ್ ಆತಂಕ ಕಾಡಲು ಶುರುಮಾಡಿದೆ.. ಈ ಆತಂಕವೂ ನಿವಾರಣೆಯಾಗುತ್ತೆ.. ಆದ್ರೆ ಜನ ಮಾತ್ರ ಎಚ್ಚರಿಕೆಯಿಂದ ಇರಬೇಕು..!

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

 

The post ಡೆಲ್ಟಾ ಪ್ಲಸ್​ ಇದೆಂಥ ವೈರಸ್? ನಿಜಕ್ಕೂ ಇದು ನಟೋರಿಯಸ್ ಕಿಲ್ಲರಾ? appeared first on News First Kannada.

Source: newsfirstlive.com

Source link