ದೇಶದಲ್ಲಿ ಪತ್ತೆಯಾಗಿರುವ ಡೆಲ್ಟಾ ಪ್ಲಸ್ ಕೊರೊನಾ ರೂಪಾಂತರ ಪ್ರಕರಣಗಳು ಏಕಾಏಕಿ ಏರಿಕೆಯಾಗಿರುವುದು ಆತಂಕ ಸೃಷ್ಟಿಸಿದೆ. ಈ ಮಧ್ಯೆ ಡೆಲ್ಟಾ ಪ್ಲಸ್‌ನಿಂದ ಕೊರೊನಾ ಮೂರನೇ ಅಲೆಯ ಸಂಭವವಿಲ್ಲ. ಯಾಕಂದ್ರೆ, 2ನೇ ಅಲೆಯಲ್ಲೇ ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದೆ ಅಂತ ಐಜಿಐಬಿ(Institute of Genomics and Integrative Biology) ನಿರ್ದೇಶಕ ಡಾ. ಅನುರಾಗ್ ಅಗರ್​​ವಾಲ್​​​ ಮಾಹಿತಿ ನೀಡಿದ್ದಾರೆ.

ಡೆಲ್ಟಾ ಪ್ಲಸ್​​​​ 3ನೇ ಅಲೆಯನ್ನು ಸೃಷ್ಟಿಸುತ್ತೆ ಅಂತ ಹೇಳೋದಕ್ಕೆ ಸದ್ಯಕ್ಕೆ ಯಾವುದೇ ಸಾಕ್ಷ್ಯವಿಲ್ಲ. ನಮ್ಮ ಸಂಸ್ಥೆ ಜೂನ್ ತಿಂಗಳಲ್ಲಿ ಮಹಾರಾಷ್ಟ್ರದ 3,500ಕ್ಕೂ ಹೆಚ್ಚು ಮಾದರಿಗಳನ್ನು ಸೀಕ್ವೆನ್ಸಿಂಗ್ ಮಾಡಿದೆ. ಅವು ಏಪ್ರಿಲ್ ಮತ್ತು ಮೇ ತಿಂಗಳ ಮಾದರಿಗಳನ್ನು ಒಳಗೊಂಡಿದ್ದವು. ಡೆಲ್ಟಾ ಪ್ಲಸ್ ರೂಪಾಂತರಿ ಆಗಲೇ ಅನ್ನೋದನ್ನ ನಾವು ನೋಡಬಹುದು. ಆದರೆ ಅದು ಶೇಕಡಾ ಒಂದಕ್ಕಿಂತ ಕಡಿಮೆ ಎಂದು ಅವರು ಹೇಳಿದ್ದಾರೆ. 

ಡೆಲ್ಟಾ ಪ್ಲಸ್​ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿಯೂ ಸಹ, ಅತೀ ಹೆಚ್ಚೇನಿಲ್ಲ. ಪರಿಸ್ಥಿತಿ ಸ್ಥಿರವಾಗಿ ಕಾಣುತ್ತಿದೆ ಎಂದು ಡಾ ಅಗರ್ವಾಲ್ ಭರವಸೆ ನೀಡಿದ್ದಾರೆ.

 

The post ಡೆಲ್ಟಾ ಪ್ಲಸ್​ ತಳಿ​​ 3ನೇ ಅಲೆ ಸೃಷ್ಟಿಸುತ್ತೆ ಅನ್ನೋದಕ್ಕೆ ಸಾಕ್ಷ್ಯವಿಲ್ಲ -IGIB ನಿರ್ದೇಶಕ appeared first on News First Kannada.

Source: newsfirstlive.com

Source link