ಡೆಲ್ಟಾ ಪ್ಲಸ್ ಪತ್ತೆ: ಮೂರು ರಾಜ್ಯಗಳಿಗೆ ಆರೋಗ್ಯ ಇಲಾಖೆಯಿಂದ ವಾರ್ನಿಂಗ್

ಡೆಲ್ಟಾ ಪ್ಲಸ್ ಪತ್ತೆ: ಮೂರು ರಾಜ್ಯಗಳಿಗೆ ಆರೋಗ್ಯ ಇಲಾಖೆಯಿಂದ ವಾರ್ನಿಂಗ್

ನವದೆಹಲಿ: ದೇಶದಲ್ಲಿ ಡೆಲ್ಟಾ ಪ್ಲಸ್ ಸೋಂಕು ಪತ್ತೆ ಹಿನ್ನೆಲೆ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಕ್ಕೆ ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ಸಂದೇಶವನ್ನ ರವಾನಿಸಿದೆ.

ಸೋಂಕು ಪತ್ತೆಯಾದ ಪ್ರದೇಶವನ್ನು ಕೇಂದ್ರೀಕರಿಸಿ, ಜನಸಂದಣಿ ತಡೆಯುವುದು ಜನರು ಬೆರೆಯುವುದನ್ನ ತಡೆಗಟ್ಟಬೇಕು. ಜೊತೆಗೆ ವ್ಯಾಪಕವಾಗಿ ಪರೀಕ್ಷೆಗಳನ್ನು ನಡೆಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ವಿತರಿಸಿ, ಕ್ಲಸ್ಟರ್​ಗಳಲ್ಲಿ ಸೋಂಕು ನಿಯಂತ್ರಣಕ್ಕೆ ಶೀಘ್ರ ಕ್ರಮ ವಹಿಸಿ ಅಂತ ಮೂರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

The post ಡೆಲ್ಟಾ ಪ್ಲಸ್ ಪತ್ತೆ: ಮೂರು ರಾಜ್ಯಗಳಿಗೆ ಆರೋಗ್ಯ ಇಲಾಖೆಯಿಂದ ವಾರ್ನಿಂಗ್ appeared first on News First Kannada.

Source: newsfirstlive.com

Source link