ಕಳೆದೊಂದು ವರ್ಷದಿಂದ ಜನರ ಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಒಂದು ಕಡೆ ಕೋವಿಡ್‌ನಿಂದ ಜನರ ನಿದ್ದೆಗೆಟ್ಟಿದ್ರೆ ಮತ್ತೊಂದೆಡೆ ನಾಳೆ ಏನಾಗಬಹುದು ಎಂಬ ಭಯ ಕಾಡ್ತಿದೆ. ಇನ್ನೇನು ಕೋವಿಡ್ ಸೋಂಕು ಕಡಿಮೆಯಾಗ್ತಿದೆ ಅಂತ ನಿರಾಳರಾಗೋವಷ್ಟರಲ್ಲೇ ಫಂಗಸ್‌ಗಳ ಕಾಟ ಹೆಚ್ಚಾಯ್ತ್ತು. ತಕ್ಕ ಮಟ್ಟಿಗೆ ಅದೂ ಸಹ ಕಡಿಮೆ ಆಗ್ತಿದೆ ಅನ್ನೋವಾಗಲೇ ಶುರುವಾಗಿದ್ದು ಡೆಲ್ಟಾ ಅಬ್ಬರ. ಡೆಲ್ಟಾಗಿಂತ ತಾನೇನು ಕಮ್ಮಿಯಿಲ್ಲ ಅನ್ನೋ ರೀತಿಯಲ್ಲಿ ಈಗ ಡೆಲ್ಪಾ ಪ್ಲಸ್ ಹಾವಳಿ ಏರುತ್ತಿದೆ.

ದಿನ ಕಳೆದಂತೆ ಕೊರೊನಾ ವೈರಸ್ ರೂಪಾಂತರವಾಗುತ್ತಲೇ ಇದೆ. ಅದರ ಜೊತೆಜೊತೆಗೆ ನೂತನ ಸೋಂಕುಗಳೂ ಸಹ ಮುನ್ನೆಲೆಗೆ ಬರ್ತಿದೆ. ಒಂದು ಕಡೆ ಕೋವಿಡ್ ಆದ್ರೆ, ಮತ್ತೊಂದು ಕಡೆ ಬ್ಲಾಕ್ ಫಂಗಸ್, ವೈಟ್ ಫಂಗಸ್, ಎಲ್ಲೋ ಫಂಗಸ್‌ಗಳ ಅಬ್ಬರ. ಇವಿಷ್ಟು ಜನರನ್ನು ಕಾಡೋಕೆ ಸಾಲದೇನೋ ಎಂಬಂತೆ ಈಗ ಡೆಲ್ಟಾ ಸರದಿ ಆರಂಭವಾಗಿದೆ. ಇನ್ನೂ ಡೆಲ್ಟಾ ಕುರಿತ ಸ್ಪಷ್ಟ ಮಾಹಿತಿ ದೊರೆಯೋವಷ್ಟರಲ್ಲೇ ಡೆಲ್ಪಾ ಪ್ಲಸ್ ತನ್ನ ಪ್ರದರ್ಶನ ಆರಂಭಿಸಿದೆ.

ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗು ತಮಿಳುನಾಡುವಿನಲ್ಲಿ ಈಗಾಗಲೇ ಡೆಲ್ಟಾ ಪ್ಲಸ್‌ನಿಂದ ಸಾವುಗಳ ಸಂಭವಿಸಿದೆ ಅಂತ ಹೇಳಲಾಗ್ತಿದೆ. ಆದ್ರೆ, ಡೆಲ್ಪಾ ಪ್ಲಸ್‌ ಅಷ್ಟು ಆಘಾತಕಾರಿ ಅಲ್ಲ ಅಂತ ವೈದ್ಯರ ಒಂದು ತಂಡ ಹೇಳಿದ್ರೆ, ಮತ್ತೊಂದು ತಂಡ ಭಿನ್ನ ರೀತಿಯ ವರದಿ ಹೊರಹಾಕಿದೆ. ಈ ಕಾರಣದಿಂದಲೇ ವೈರಸ್‌ನ ಕುರಿತ ಸ್ಪಷ್ಟ ಮಾಹಿತಿ ದೊರೆಯಬೇಕೆಂದು ಅಧ್ಯಯನ ನಡೆಸಲಾಗ್ತಿದೆ. ನುರಿತ ವೈದ್ಯರ ತಂಡಗಳಿಂದ ಭಾರತದ ಒಟ್ಟು 28 ಪ್ರತಿಷ್ಟಿತ ಲ್ಯಾಬ್‌ಗಳಲ್ಲಿ ಡೆಲ್ಟಾ ಪ್ಲಸ್ ಕುರಿತ ಇನ್ ಡೆಪ್ತ್ ಸ್ಟಡಿ ಮಾಡಲಾಗ್ತಿದೆ.

ಸದ್ಯ ಇರುವ ಮಾಹಿತಿ ಪ್ರಕಾರ, ಇನ್ನೇನು 2 ವಾರಗಳಲ್ಲಿ ಅಧ್ಯಯನ ಪೂರ್ಣ ವರದಿ ಹೊರಬೀಳಲಿದೆ. ಕೋವಿಡ್‌ ಲಸಿಕೆ ಪಡೆದರೆ ಡೆಲ್ಟಾ ಪ್ಲಸ್‌ನಿಂದಲೂ ಸೇಫ್ ಆಗ್ತಾರಾ ಅಥವ ಹೆಚ್ಚಿನ ಚಿಕಿತ್ಸೆ ಪಡೆಯಬೇಕಾಗಬಹುದಾ ಎಂಬುದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಜೊತೆಗೆ ಶ್ವಾಸಕೋಶದ ಮೇಲೆ ಡೆಲ್ಟಾ ಪ್ಲಸ್ ಯಾವ ರೀತಿ ಪರಿಣಾಮ ಬೀರುತ್ತೆ? ಹಾಗು ಅದನ್ನು ಸರಿಪಡಿಸಲು ಏನೆಲ್ಲಾ ಮಾಡಬೇಕಾಗುತ್ತೆ ಅನ್ನೋದ್ರ ಅಕ್ಯೂರೇಟ್ ಮಾಹಿತಿ ಅತಿ ಶೀಘ್ರದಲ್ಲೇ ಹೊರಬೀಳಲಿದೆ.

The post ಡೆಲ್ಟಾ ಪ್ಲಸ್ ಪ್ರಕರಣಗಳ ಏರಿಕೆ: ಆಳ ಅಧ್ಯಯನಕ್ಕಿಳಿದ 28 ಪ್ರತಿಷ್ಟಿತ ಲ್ಯಾಬ್​​ಗಳು appeared first on News First Kannada.

Source: newsfirstlive.com

Source link