ಲಂಡನ್: ಬ್ರಿಟನ್​ನಲ್ಲಿ ಕಾಣಿಸಿಕೊಂಡಿರೋ ರೂಪಾಂತರ ಆಲ್ಫಾಕ್ಕಿಂತ, ಡೆಲ್ಟಾ ರೂಪಾಂತರ ಪ್ರಕರಣಗಳು ಹೆಚ್ಚಾಗಿದ್ದು ಅಲ್ಲಿನ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಈ ಹಿಂದೆ ಸೋಂಕಿತರ ಪ್ರಕರಣ ಕಡಿಮೆಯಾದ ಕಾರಣ, ಬ್ರಿಟನ್​​​ನಲ್ಲಿ ಜೂನ್ 21ರಂದು ಲಾಕ್​ಡೌನ್ ತೆರವು ಮಾಡಬಹುದು ಅಂತ ಹೇಳಲಾಗಿತ್ತು. ಆದ್ರೆ ಈ ಬಗ್ಗೆ ಮಾತನಾಡಿರೋ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಡೆಲ್ಟಾ ಪ್ರಕರಣಗಳು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತಿವೆ.

ಸೋಂಕು ಹರಡೋ ವೇಗವೂ ಅತಿಯಾಗಿದೆ. ಆದ ಕಾರಣ ಸದ್ಯದ ಮಟ್ಟಿಗೆ ಲಾಕ್​ಡೌನ್ ತೆರವನ್ನು ಇನ್ನು ಕೆಲವು ದಿನಗಳ ಕಾಲ ಮುಂದೂಡಲಾಗುವುದು ಅಂತ ಹೇಳಿದ್ದಾರೆ.

The post ಡೆಲ್ಟಾ ವೇರಿಯಂಟ್​ ಹೆಚ್ಚಳ: ಬ್ರಿಟನ್​​ನಲ್ಲಿ ಸದ್ಯಕ್ಕಿಲ್ಲ ಅನ್​​ಲಾಕ್​​​ appeared first on News First Kannada.

Source: newsfirstlive.com

Source link