ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್ ಶಾಕ್; ​​ಶ್ರೇಯಸ್ ಅಯ್ಯರ್ ಟಾರ್ಗೆಟ್​ ಏನು ಗೊತ್ತಾ..?


ಶ್ರೇಯಸ್ ಅಯ್ಯರ್.. ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿಯ ಯಶಸ್ವಿ ನಾಯಕ ಹಾಗೂ ನಂಬಿಕಸ್ಥ ಬ್ಯಾಟ್ಸಮನ್. ಆದ್ರೀಗ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನೇ ತೊರೆಯಲು ಮುಂದಾಗಿದ್ದಾರೆ. ಅದ್ಯಾವ ಕಾರಣಕ್ಕಾಗಿ..?

ಸೀಸನ್-15ರ ಕಲರ್​​ಫುಲ್ ಟೂರ್ನಿ ಭಾರೀ ಬದಲಾವಣೆಗಳಿಗೆ ಸಾಕ್ಷಿಯಾಗ್ತಿದೆ. ಮೆಗಾ ಹರಾಜು ನಡೆಯಲಿದ್ದು, ಪ್ರತಿ ತಂಡದಲ್ಲೂ ಹೊಸ ಹೊಸ ಆಟಗಾರರು ಕಾಣಿಸಿಕೊಳ್ಳತ್ತಾರೆ. ಹೀಗಾಗಿ ಮುಂದಿನ​​ ಸೀಸನ್​​ನಲ್ಲಿ ಯಾವ ಸ್ಟಾರ್​ ಆಟಗಾರ? ಯಾವ ತಂಡಕ್ಕೆ ಹೋಗ್ತಾರೆ? ಯಾವ ಸ್ಟಾರ್​ ಆಟಗಾರ ತಂಡ ಬಿಟ್ಟು ಮತ್ತೊಂದು ತಂಡಕ್ಕೆ ಸೇರ್ಪಡೆಯಾಗ್ತಾರೆ ಎಂಬ ಕುತೂಹಲ ಮನೆ ಮಾಡಿದೆ. ಆದರೆ ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್​ನ ಮಾಜಿ ಕ್ಯಾಪ್ಟನ್ ಶ್ರೇಯಸ್​ ಅಯ್ಯರ್, ಡೆಲ್ಲಿ ಫ್ರಾಂಚೈಸಿ ತೊರೆಯಲು ಮುಂದಾಗಿದ್ದಾರೆ.
ಕ್ಯಾಪ್ಟನ್ ಪಟ್ಟಕ್ಕಾಗಿ ತಂಡ ತೊರೆಯಲು ಮುಂದಾದ ಶ್ರೇಯಸ್​..?

2018ರ ಐಪಿಎಲ್​ ಮೊದಲಾರ್ಧ ಬಳಿಕ ನಾಯಕನ ಪಟ್ಟಕ್ಕೇರಿದ್ದ ಶ್ರೇಯಸ್, ತಂಡವನ್ನ ಯಶಸ್ಸಿನ ಹಾದಿಯಲ್ಲಿ ನಡೆಸಿದ್ರು. 2019ರ ಸೀಸನ್​​ನಲ್ಲಿ ಸೆಮಿಫೈನಲ್​​, 2020ರ ಸೀಸನ್​ನಲ್ಲಿ ಫೈನಲ್​ಗೆ ಕೊಂಡೊಯ್ದ ಹೆಗ್ಗಳಿಕೆ ಶ್ರೇಯಸ್​ಗೆ ಸೇರುತ್ತೆ. ಆದ್ರೆ, ಕಳೆದ ಆವೃತ್ತಿಯಲ್ಲಿ ಇಂಜುರಿ ಕಾರಣ ಮೊದಲಾರ್ಧಕ್ಕೆ ಅಲಭ್ಯರಾಗಿದ್ದ ಶ್ರೇಯಸ್​, ಸೆಕೆಂಡ್ ಹಾಫ್​ನಲ್ಲಿ ತಂಡವನ್ನ ಕೂಡಿಕೊಂಡಿದ್ರು. ಆದ್ರೆ, ನಿರೀಕ್ಷಿಸಿದ್ದ ನಾಯಕತ್ವ ಪಟ್ಟ ಸಿಕ್ಕಿರಲಿಲ್ಲ. ಇದು ಸಹಜವಾಗೇ ಮುಂಬೈಕರ್​​ ಶ್ರೇಯಸ್​ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಮೆಗಾ ಹರಾಜಿನಲ್ಲಿ ಪಾಲ್ಗೊಂಡು ಮತ್ತೊಂದು ತಂಡಕ್ಕೆ ಹಾರಿ ನಾಯಕನ ಪಟ್ಟ ಗಿಟ್ಟಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.

ಯಾವ ಫ್ರಾಂಚೈಸಿ ಮೇಲಿದೆ ಶ್ರೇಯಸ್ ಅಯ್ಯರ್ ಕಣ್ಣು..?
ಸದ್ಯ ಆರ್​ಸಿಬಿ ಸೇರಿದಂತೆ ಐಪಿಎಲ್​ನ ಹೊಸ ತಂಡಗಳೂ ನಾಯಕನ ಹುಡುಕಾಟದಲ್ಲಿವೆ. ವಿರಾಟ್ ಆರ್​ಸಿಬಿ ನಾಯಕತ್ವ ತೊರೆದಿದ್ದಾರೆ. ಹೀಗಾಗಿ ಆರ್​ಸಿಬಿಗೆ ನ್ಯೂ ಕ್ಯಾಪ್ಟನ್​ ಬೇಕಿದ್ದಾರೆ. ಇದರ ಜೊತೆಗೆ ಹೊಸ ತಂಡಗಳಾದ ಲಕ್ನೋ, ಅಹ್ಮದಾಬಾದ್​​​​​ ಫ್ರಾಂಚೈಸಿಗಳೂ ಸಮರ್ಥ ನಾಯಕನ ಹುಡುಕಾಟದಲ್ಲಿವೆ. ಅಷ್ಟೇ ಅಲ್ಲ, ಕೆ.ಎಲ್.ರಾಹುಲ್, ಪಂಜಾಬ್ ಕಿಂಗ್ಸ್​​ ತೊರೆಯುವ ಮುನ್ಸೂಚನೆ ನೀಡಿದ್ದಾರೆ. ಹೀಗಾಗಿ ನಾಲ್ಕು ತಂಡಗಳ ಗುರಿ ತಂಡವನ್ನ ಮುನ್ನಡೆಸುವ ಆಟಗಾರನ ಮೇಲೆಯೇ ನೆಟ್ಟಿದೆ.

ಅದ್ರಲ್ಲೂ ನಾಯಕತ್ವ ವಿಚಾರದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಶ್ರೇಯಸ್​, ಈ ನಾಲ್ಕು ಫ್ರಾಂಚೈಸಿಗಳ ಪೈಕಿ ಒಂದು ತಂಡ ಸೇರೋದು ಕನ್ಫರ್ಮ್ ಅಂತಿವೆ ಮೂಲಗಳು. ಆದ್ರೆ, ಡೆಲ್ಲಿ ಕ್ಯಾಪಿಟಲ್ಸ್​ ಅಭಿಮಾನಿಗಳು ಮಾತ್ರ, ಶ್ರೇಯಸ್​ರ ಈ ನಡೆ ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ತಮ್ಮ ಸಾಮರ್ಥ್ಯಕ್ಕೆ ತಕ್ಕ ರೋಲ್​ಗಾಗಿ ತಂಡ ತೊರೆದರೆ ತಪ್ಪೇನು ಅಂತಿದ್ದಾರೆ.

The post ಡೆಲ್ಲಿ ಕ್ಯಾಪಿಟಲ್ಸ್​ಗೆ ಬಿಗ್ ಶಾಕ್; ​​ಶ್ರೇಯಸ್ ಅಯ್ಯರ್ ಟಾರ್ಗೆಟ್​ ಏನು ಗೊತ್ತಾ..? appeared first on News First Kannada.

News First Live Kannada


Leave a Reply

Your email address will not be published.