ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ನ 22 ನೇ ಮ್ಯಾಚ್​ನಲ್ಲಿ ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ಮುಖಾಮುಖಿಯಾಗಿವೆ. ಟಾಸ್​ ಗೆದ್ದು ಬೌಲಿಂಗ್ ಆಯ್ದುಕೊಂಡ ಡೆಲ್ಲಿ ಆರ್​ಸಿಬಿಯನ್ನ ಬ್ಯಾಟಿಂಗ್​ಗೆ ಆಹ್ವಾನಿಸಿತು. ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್ ದಾಖಲಿಸಿದೆ. ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಆರ್​ಸಿಬಿ ತಂಡ 172 ರನ್​ಗಳ ಟಾರ್ಗೆಟ್ ನೀಡಿದೆ.

ಆರ್​ಸಿಬಿ ಪರ ಕ್ಯಾಪ್ಟನ್ ಕೊಹ್ಲಿ 12, ದೇವದತ್ ಪಡಿಕ್ಕಲ್ 17, ರಜತ್ ಪಾಟಿದಾರ್ 31, ಗ್ಲೆನ್ ಮ್ಯಾಕ್ಸ್​​ವೆಲ್, ವಾಷಿಂಗ್ಟನ್ ಸುಂದರ್ 6, ಡೇನಿಯಲ್ 3 ರನ್​ಗಳಿಸಿದ್ರು. ಆಪತ್ಬಾಂಧವನಂತೆ ಆಟವಾಡಿದ ಎಬಿ ಡೆವಿಲಿಯರ್ಸ್​ 42 ಬಾಲ್​ಗಳಲ್ಲಿ 75 ರನ್ ಬಾರಿಸಿದ್ರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ಪರ ಇಶಾಂತ್ ಕಿಶನ್, ಕಗಿಸೊ ರಬಾಡ, ಆವೇಶ್ ಖಾನ್, ಅಮಿತ್ ಮಿಶ್ರಾ ಮತ್ತು ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದುಕೊಂಡ್ರು.

The post ಡೆಲ್ಲಿ ಕ್ಯಾಪಿಟಲ್ಸ್​​ಗೆ 172 ರನ್​ಗಳ ಟಾರ್ಗೆಟ್​​ ನೀಡಿದ ಆರ್​ಸಿಬಿ.. ಆಪತ್ಬಾಂಧವನಾದ ಎಬಿಡಿ appeared first on News First Kannada.

Source: newsfirstlive.com

Source link