ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರೋಚಕ ಜಯ ಸಾಧಿಸಿದೆ. ಸೂಪರ್ ಓವರ್ ಕಂಡ ಪಂದ್ಯದಲ್ಲಿ ಪಂತ್ ಬಳಗ ಗೆದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಆದರೆ ಇದರ ಬೆನ್ನಲ್ಲೇ ತಂಡಕ್ಕೆ ಆಘಾತ ಎದುರಾಗಿದೆ.

ಪಂತ್ ಬಳಗದ ಪ್ರಮುಖ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅರ್ಧದಲ್ಲಿ ಐಪಿಎಲ್ ತೊರೆಯಲು ನಿರ್ಧರಿಸಿದ್ದಾರೆ. ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದಲ್ಲಿ ಕುಟುಂಬದ ಜೊತೆ ಕೈಜೋಡಿಸುವ ಸಲುವಾಗಿ ಅಶ್ವಿನ್ ಈ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ:ಡೆಲ್ಲಿಗೆ ಸೂಪರ್ ಸಂಡೆ : ಹೈದರಾಬಾದ್‌ ವಿರುದ್ಧ ಗೆದ್ದು ದ್ವಿತೀಯ ಸ್ಥಾನಕ್ಕೆ ಏರಿದ ಡೆಲ್ಲಿ

ಈ ಬಗ್ಗೆ ಟ್ವೀಟ್ ಮಾಡಿರುವ ಅಶ್ವಿನ್, ನಾಳೆಯಿಂದ ನಾನು ಈ ವರ್ಷದ ಐಪಿಎಲ್ ನಲ್ಲಿ ಆಡುತ್ತಿಲ್ಲ. ನನ್ನ ಕುಟುಂಬ ಕೋವಿಡ್ ವಿರುದ್ಧ ಹೋರಾಡುತ್ತಿದೆ. ಈ ಕಷ್ಟದ ಸಮಯದಲ್ಲಿ ನಾನು ಅವರೊಂದಿಗೆ ಇರಬೇಕಾಗಿದೆ. ಒಂದು ವೇಳೆ ಎಲ್ಲವೂ ಸರಿಯಾದರೆ ಮತ್ತೆ ಆಡಲು ಬರುತ್ತೇನೆ ಎಂದಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಅಶ್ವಿನ್ ಕಣಕ್ಕಿಳಿದಿದ್ದರು. ಒಂದು ವಿಕೆಟ್ ಪಡೆದಿರುವ ಅಶ್ವಿನ್ ಏಳರ ಸರಾಸರಿಯಲ್ಲಿ ರನ್ ನೀಡಿದ್ದರು.

ಕ್ರೀಡೆ – Udayavani – ಉದಯವಾಣಿ
Read More

By

Leave a Reply