ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮತ್ತೂಂದು ಕೋವಿಡ್ ಆಘಾತ ಎದುರಾಗಿದೆ.

ಅಕ್ಷರ್‌ ಪಟೇಲ್‌ ಬಳಿಕ ತಂಡದ ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್‌ ನೋರ್ಜೆ ಅವರಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅವರೀಗ ಕ್ವಾರಂಟೈನ್‌ನಲ್ಲಿದ್ದಾರೆ.

ಇದನ್ನೂ ಓದಿ:ಬ್ಯಾಟಿಂಗ್‌ ಬಲವನ್ನೇ ನೆಚ್ಚಿರುವ ಡೆಲ್ಲಿ, ರಾಜಸ್ಥಾನ್‌

ಅನ್ರಿಚ್‌ ನೋರ್ಜೆ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳನ್ನು ಮುಗಿಸಿ ನೆಗೆಟಿವ್‌ ವರದಿಯೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಮುಂಬಯಿಗೆ ಬಂದಿಳಿದ ಬಳಿಕ ಒಂದು ವಾರದ ಕಠಿನ ಕ್ವಾರಂಟೈನ್‌ನಲ್ಲೂ ಇದ್ದರು. ಡೆಲ್ಲಿ ತಂಡದ ಜೈವಿಕ ಸುರಕ್ಷಾ ವಲಯವನ್ನು ಸೇರಿಕೊಳ್ಳುವ ಮೊದಲು ನಡೆಸಲಾದ ಕೋವಿಡ್‌ ಟೆಸ್ಟ್‌ ವೇಳೆ ನೋರ್ಜೆ ಫ‌ಲಿತಾಂಶ ಪಾಸಿಟಿವ್‌ ಬಂದಿದೆ ಎಂಬುದಾಗಿ ಫ್ರಾಂಚೈಸಿ ತಿಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲ ಪಂದ್ಯವನ್ನು ನಿರಾಯಾಸವಾಗಿ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ. ರಾಜಸ್ಥಾನ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಸೋಲನುಭವಿಸಿತ್ತು.

ಕ್ರೀಡೆ – Udayavani – ಉದಯವಾಣಿ
Read More