ಡೆಲ್ಲಿ ತಂಡ ಸೇರಿದ ಬೆನ್ನಲ್ಲೇ RRಗೆ ಭಾವುಕ ಮೆಸೇಜ್​​ ಕಳಿಸಿದ ಸಕಾರಿಯಾ..!


ಭಾರತದ ಯುವ ವೇಗಿ ಚೇತನ್ ಸಕಾರಿಯಾ ತಮ್ಮ ಹಳೇ ತಂಡ, ರಾಜಸ್ಥಾನ ರಾಯಲ್ಸ್​ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ಜತೆಗಿನ ಐಪಿಎಲ್​ ಸೀಸನ್​ ನನಗೆ ಸಿಕ್ಕಂತ ಅತಿದೊಡ್ಡ ಅವಕಾಶವಾಗಿತ್ತು. ಇದಕ್ಕಾಗಿ ಆರ್​ಆರ್ ತಂಡದ ಎಲ್ಲಾ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯಿಂದ ಸಾಕಷ್ಟು ಕಲಿತಿದ್ದು, ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.

ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ನೀಡಿದ ಆರ್​ಆರ್ ಫ್ರಾಂಚೈಸಿಗೆ ನಾನು ಸದಾಕಾಲ ಕೃತಜ್ಞನಾಗಿರುತ್ತೇನೆ ಎಂದು ಸಕಾರಿಯಾ ಹೇಳಿದ್ದಾರೆ. ಐಪಿಎಲ್​​ನ ಕಳೆದ ಆವೃತ್ತಿಯಲ್ಲಿ ಚೇತನ್ ಸಕಾರಿಯಾ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ್ರು. ಆದ್ರೆ, ಈ ಬಾರಿ ಸಕಾರಿಯಾ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದು, 4.5 ಕೋಟಿ ನೀಡಿ ಈ ಯುವ ವೇಗಿಯನ್ನ ಡೆಲ್ಲಿ ಫ್ರಾಂಚೈಸಿ ತಮ್ಮ ತೆಕ್ಕೆಗೆ ಹಾಕಿಕೊಂಡಿದೆ.

News First Live Kannada


Leave a Reply

Your email address will not be published. Required fields are marked *