ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರಿಗೆ 33ನೇ ಹ್ಯಾಪಿ ಹುಟ್ಟುಹಬ್ಬ. ಪ್ರಜ್ಜು ಈ ಬಾರಿ ಜೋರಾಗಿ ಬರ್ತ್​ಡೇ ಸೆಲೆಬ್ರೇಟ್ ಮಾಡದಿದ್ದರು ಬೇಜಾನ್ ಗಿಫ್ಟ್​​​​ಗಳಂತು ಕೊಟ್ಟಿದ್ದಾರೆ. ಹಾಗಾದ್ರೆ ‘ಜಂಟಲ್​​ಮನ್’ ಕಡೆಯಿಂದ ಬಂದಿರೋ ಉಡುಗೊರೆಗಳ್ಯಾವುವು..?

ಸ್ಯಾಂಡಲ್​ವುಡ್​​ನ ಎಂಗ್ ಆಂಡ್ ಎನರ್ಜಿಟಿಕ್ ಸ್ಮಾರ್ಟ್ ಹೀರೋ ಪ್ರಜ್ವಲ್ ದೇವರಾಜ್. ಸದಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಪ್ರಜ್ಜು 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಜಂಟಲ್​ಮನ್ ಬರ್ತ್​ಡೇ ಪ್ರಯುಕ್ತ ಅದ್ಭುತ ಉಡುಗೊರೆಗಳು ಅಭಿಮಾನಿಗಳಿಗೆ ಸಿನಿಮಾ ತಂಡಗಳಿಂದ ಸಿಕ್ಕಿದ್ರೆ ಅವುಗಳಲ್ಲಿ ಮೊದಲನೆದ್ದು ವೀರಂ.

ಖದರ್ ಕುಮಾರ್ ರಾಜ್ ನಿರ್ದೇಶನದ ವೀರಂ ಚಿತ್ರದ ಜಬರ್​​ದಸ್ತ್ ಪ್ರಜ್ವಲ್ ದೇವರಾಜ್ ಬರ್ತ್​​ಡೇ ಟೀಸರ್ ಹೊರಬಂದಿದೆ.. ಲವ್ ಕಮ್ ಆ್ಯಕ್ಷನ್ ಕಥೆಯುಳ ವೀರಂ ಚಿತ್ರದಲ್ಲಿ ಪ್ರಜ್ವಲ್ ಲುಕ್ ಮತ್ತು ಆ್ಯಕ್ಷನ್ ಸಖತ್ ಇಂಟ್ರಸ್ಟಿಂಗ್ ಆಗಿ ಮೂಡಿಬಂದಿದೆ. ಜಂಟಲ್ ಮನ್ ಸಿನಿಮಾದ ನಂತರ ಮತ್ತೊಂದು ಸಕ್ಸಸ್​​ ಅನ್ನ ವೀರಂ ಚಿತ್ರ ಕೊಡೋ ಸೂಚನೆ ಕೊಟ್ಟಿದೆ.

ಪ್ರಜ್ವಲ್ ದೇವರಾಜ್ ಅವರ ಹಲವು ಸಿನಿಮಾಗಳಲ್ಲಿ ಮತ್ತೊಂದು ಪ್ರಮುಖವಾಗಿರೋ ಸಿನಿಮಾ ಮಾಫಿಯಾ. ಅಂಬಿನಿಂಗ್ ವಯಸ್ಸಾಯ್ತೋ ಸಿನಿಮಾವನ್ನ ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದ ಗುರುದತ್ತ್ ಗಾಣಿಗ ಈ ಮಾಫಿಯಾ ಸಿನಿಮಾದ ಸೂತ್ರಧಾರ. ಮಾಫಿಯಾ ಸಿನಿಮಾದ ಟೈಟಲ್ ಇಂಪ್ರೇಸಿವ್ ಆಗಿದ್ದು ಕನ್ನಡದಲ್ಲಿ ಡಾ.ಶಿವರಾಜ್ ಕುಮಾರ್ ತಮಿಳಿನಲ್ಲಿ ಆರ್ಯ ಹಾಗೂ ವಿಜಯ್ ಸೇತುಪತಿ ಪೋಸ್ಟರ್ ಅನ್ನ ಲಾಂಚ್ ಮಾಡಿದ್ದಾರೆ.

ದಿವಗಂತ ಕೋಟಿ ರಾಮು ನಿರ್ಮಾಣದ ಅರ್ಜುನ್ ಗೌಡ ಸಿನಿಮಾ ರಿಲೀಸ್​​ಗೆ ಸಜ್ಜಾಗಿದೆ. ಒಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಪ್ರಜ್ವಲ್ ದೇವರಾಜ್ ಚಿತ್ರಪ್ರೇಮಿಗಳನ್ನ ರಂಜಿಸಲು ಸಜ್ಜಾಗಿದ್ದಾರೆ.

The post ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಬರ್ತ್ಡೇಗೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ appeared first on News First Kannada.

Source: newsfirstlive.com

Source link