‘ಡೋಲಿಡಾ’ ಸಾಂಗ್​ ರಿಲೀಸ್-ಆಲಿಯಾ ಭರ್ಜರಿ ಸ್ಟೆಪ್ಸ್​ ಕಂಡು ಪ್ರೇಕ್ಷಕ ಫಿದಾ


ಬಾಲಿವುಡ್ ನಟಿ ಆಲಿಯಾ ಭಟ್​ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಗಂಗೂ ಬಾಯಿ ಕಾಠಿಯಾವಾಡಿ’ ಚಿತ್ರದ ‘ಡೋಲಿಡಾ’ ಹಾಡು ರಿಲೀಸ್ ಆಗಿದೆ.

ಈಗಾಗಲೇ ಚಿತ್ರದ ಟ್ರೈಲರ್​ ಕೂಡ ರಿಲೀಸ್​ ಆಗಿದ್ದು, ಆಲಿಯಾ ಅಭಿನಯನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಚಿತ್ರದ ‘ಡೋಲಿಡಾ’ ಎಂಬ ಸಾಂಗ್​ ರಿಲೀಸ್​ ಆಗಿದ್ದು, ಈ ಹಾಡಿನಲ್ಲಿ ಆಲಿಯಾ ಭರ್ಜರಿ ಸ್ಟೇಪ್​ ಹಾಕಿದ್ದಾರೆ. ಅಲಿಯಾ ಡ್ಯಾನ್ಸ್​ ಕಂಡು ಪ್ರೇಕ್ಷಕರು ಫುಲ್​ ಫಿದಾ ಆಗಿದ್ದಾರೆ. ರಿಲೀಸ್​ ಆದ ಕೆಲವೇ ಕೆಲವು ಘಂಟೆಗಳಲ್ಲಿ ಈ ಹಾಡು ಸಖತ್​ ಸದ್ದು ಮಾಡುತ್ತಿದೆ.

‘ಗಂಗೂ ಬಾಯಿ ಕಾಠಿಯಾವಾಡಿ’ ಚಿತ್ರದ ನಿರ್ದೇಶಕರಾಗಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೇ ಈ ಹಾಡನ್ನು ಸಂಯೋಜಿಸಿದ್ದು, ಗಾಯಕಿ ಜಾನ್ವಿ ಶ್ರೀಮಾನ್‌ಕರ್ ಈ ಹಾಡಿಗೆ ದನಿ ನೀಡಿದ್ದಾರೆ. ಇನ್ನು ಆಲಿಯಾ ಭಟ್​ ಅವರೇ ಈ ಹಾಡಿನ ತುಣುಕನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡು ಸಂಜಯ್ ಲೀಲಾ ಬನ್ಸಾಲಿ ಅವರ ಸಂಗೀತದಲ್ಲಿ ನೃತ್ಯ ಮಾಡುವ ನನ್ನ ಕನಸು ನನಸಾಗಿದೆ ಎಂದು ಬರೆದುಕೊಂಡಿದ್ದಾರೆ. ಇದೇ ಫೆಬ್ರವರಿ 25 ರಂದು ‘ಗಂಗೂ ಬಾಯಿ ಕಾಠಿಯಾವಾಡಿ’ ಸಿನಿಮಾ ರಿಲೀಸ್​ ಆಗುತ್ತಿದೆ.

The post ‘ಡೋಲಿಡಾ’ ಸಾಂಗ್​ ರಿಲೀಸ್-ಆಲಿಯಾ ಭರ್ಜರಿ ಸ್ಟೆಪ್ಸ್​ ಕಂಡು ಪ್ರೇಕ್ಷಕ ಫಿದಾ appeared first on News First Kannada.

News First Live Kannada


Leave a Reply

Your email address will not be published.