ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ ಜಾಗೂ ಪತ್ನಿ ಕಿರಣ್ ರಾವ್ ನಿನ್ನೆಯಷ್ಟೇ 15 ವರ್ಷಗಳ ನಂತರ ತಮ್ಮ ದಾಂಪತ್ಯ ಜೀವನಕ್ಕೆ ಗುಡ್​ಬೈ ಹೇಳಿದ್ದಾರೆ. ಜಂಟಿ ಪತ್ರಿಕಾ ಹೇಳಿಕೆ ನೀಡುವ ಮೂಲಕ ಅಧಿಕೃತ ಘೋಷಣೆ ಹೊರಡಿಸಿದ ಈ ಜೋಡಿ ನಂತರ ಜೂಮ್​ ವಿಡಿಯೋ ಮೂಲಕ ಅಭಿಮಾನಿಗಳಿಗೆ ಸಂದೇಶವೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: 15 ವರ್ಷದ ದಾಂಪತ್ಯಕ್ಕೆ ಬ್ರೇಕ್: ಬಾಲಿವುಡ್ ನಟ ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಡಿವೋರ್ಸ್

ಇಂದು ವಿಡಿಯೋದಲ್ಲಿ ಜೊತೆಯಲ್ಲೇ ಕೂತು ಕೈಕೈ ಹಿಡಿದುಕೊಂಡು ಮಾತನಾಡಿದ ಆಮಿರ್ ಖಾನ್ ಮತ್ತು ಕಿರಣ್ ರಾವ್.. ನಮ್ಮ ಡಿವೋರ್ಸ್ ಸುದ್ದಿ ಕೇಳಿ ನೀವೆಲ್ಲರೂ ಶಾಕ್​ಗೆ ಒಳಗಾಗಿರಬಹುದು ಅಥವಾ ಬೇಸರಗೊಂಡಿರಬಹುದು.. ನಾವು ಒಂದು ವಿಷಯ ಹೇಳಲು ಇಚ್ಛಿಸುತ್ತೇವೆ.. ನಾವು ಖುಷಿಯಿಂದಿದ್ದೇವೆ.. ಅಲ್ಲದೇ ಒಂದು ಕುಟುಂಬದ ಭಾಗವಾಗಿದ್ದೇವೆ. ನಮ್ಮ ಸಂಬಂಧ ಬದಲಾಗಿದೆ. ಆದರೂ ನಾವು ಜೊತೆಯಲ್ಲೇ ಇದ್ದೇವೆ.. ಹೀಗಾಗಿ ಅನ್ಯಥಾ ಭಾವಿಸಬೇಡಿ ಎಂದಿದ್ದಾರೆ.

 

View this post on Instagram

 

A post shared by Bolly insider (@bollynewsinsider)

The post ಡ್ಯಾಮೇಜ್ ಕಂಟ್ರೋಲ್​​ಗೆ ಮುಂದಾದ ಆಮೀರ್​​; ಪತ್ನಿ ಕೈ ಹಿಡಿದು ಹೇಳಿದ್ದೇನು? appeared first on News First Kannada.

Source: newsfirstlive.com

Source link