ಬೆಂಗಳೂರು: ಹಳ್ಳಿ‌ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕು ಉಲ್ಬಣವಾಗ್ತಾಯಿರೋದ್ರಿಂದ ಎಡಿಜಿಪಿ ಸೀಮಂತ್ ಕುಮಾರ್‌‌ ಸೋಂಕಿತರಿಗೆ ಸಹಾಯ ಹಸ್ತ ಚಾಚಿದ್ದಾರೆ.

ಆಕ್ಸಿಜನ್ ಬೆಡ್​ಗಳಿಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಸಮಸ್ಯೆ ಉಂಟಾಗ್ತಾಯಿದೆ. ಹೀಗಾಗಿ ಸೀಮಂತ್ ಕುಮಾರ್​ ವಿದೇಶಿ ಹಾಗೂ ಸ್ಥಳೀಯ ಸ್ನೇಹಿತರ ಜೊತೆಗೂಡಿ ಆಕ್ಸಿಜನ್ ವ್ಯವಸ್ಥೆಯನ್ನ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಸಿಬ್ಬಂದಿಗೂ ಸಮಸ್ಯೆ ಇದ್ದು, ಕೋವಿಡ್ ಕೇರ್ ಸೆಂಟರ್​ಗಳ ವ್ಯವಸ್ಥೆ ಕೂಡ ಮಾಡಿದ್ದಾರೆ.

ಕೇಂದ್ರ ವಲಯದ ವಿಶೇಷ ನೋಡೆಲ್ ಅಧಿಕಾರಿಯಾಗಿರೋ ಸೀಮಂತ್ ಕುಮಾರ್, ಹಳ್ಳಿ ಪ್ರದೇಶಗಳಲ್ಲಿ ಅಕ್ಸಿಜನ್ ಸಮಸ್ಯೆ ಬಗ್ಗೆ ವಾಟ್ಸ್​​ಆ್ಯಪ್​ ಮೂಲಕ ಸ್ನೇಹಿತರಿಗೆ ವಿವರಿಸಿದ್ದರು. ಅವರು ಸಹಾಯ ಕೋರಿದ್ದೇ ತಡ ಎಲ್ಲಾ ಸ್ನೇಹಿತರು ನೆರವಿಗೆ ಮುಂದಾಗಿದ್ದಾರೆ.ಮೊದಲು  ಜಿಲ್ಲಾ ಆರೋಗ್ಯ ಕೇಂದ್ರಗಳಿಗೆ ಆಕ್ಸಿಜನ್ ಕನ್ಸಂಟ್ರೇಟರ್​ನ ವ್ಯವಸ್ಥೆ ಮಾಡಿದ್ದಾರೆ. ನಂತರ ಚಿಕ್ಕಬಳ್ಳಾಪುರ, ಕೆಜಿಎಫ್ ,ಕೋಲಾರ, ತುಮಕೂರು, ದೊಡ್ಡಬಳ್ಳಾಪುರ, ರಾಮನಗರ, ಬಳ್ಳಾರಿ, ಕೊಪ್ಪಳ, ವಿಜಯಪುರ, ಮೈಸೂರು, ಬಾಗಲಕೋಟೆ ಪೊಲೀಸ್ ಕೇರ್​ ಸೆಂಟರ್​ಗಳಿಗೂ ಆಕ್ಷಿಜನ್​ ವ್ಯವಸ್ಥೆಯನ್ನ ಮಾಡಿದ್ದಾರೆ.

ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿರೋ ಸೊಂಕಿತರಿಗೆ ಇದನ್ನ ಉಪಯೋಗಿಸಲಾಗ್ತಿದ್ದು, ಅಲ್ಲಿಂದ ಉತ್ತಮ‌ ಸ್ಪಂದನೆ ಸಿಕ್ಕಿದೆ. ಇನ್ನೊಂದು ವಾರದೊಳಗಾಗಿ ಬರೋಬ್ಬರಿ 100 ಆಕ್ಸಿಜನ್ ಕಾನ್ಸಂಟ್ರೇಟರ್​​ಗಳ ಖರೀದಿಗೆ ತಯಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ಆಕ್ಸಿಜನ್ ಸಪ್ಲೈ ಮಾಡುವ ಗುರಿಯನ್ನ ಹೊಂದಿದ್ದಾರೆ ನೋಡಲ್ ಅಧಿಕಾರಿ.

The post ಡ್ಯೂಟಿಗೂ ಸೈ, ಮಾನವೀಯತೆಗೂ ಜೈ; ADGP ಸೀಮಂತ್ ಕುಮಾರ್​​​ರಿಂದ ಹಳ್ಳಿಗಳಿಗೆ ಆಕ್ಸಿಜನ್ ವ್ಯವಸ್ಥೆ appeared first on News First Kannada.

Source: newsfirstlive.com

Source link