ಬೆಂಗಳೂರು: ಡ್ರಗ್ಸ್​​ ತಯಾರಿಕೆ ಅಡ್ಡೆ ಮೇಲೆ ನಾರ್ಕೋಟಿಕ್ಸ್​​ ಕಂಟ್ರೋಲ್ ಬ್ಯೂರೋ(ಎನ್.ಸಿ.ಬಿ) ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಮಾದಕವಸ್ತುವನ್ನ ವಶಕ್ಕೆ ಪಡೆದಿದ್ದಾರೆ.

ಕೋಲಾರ ಕೈಗಾರಿಕ ಪ್ರದೇಶದಲ್ಲಿ ಆಲ್ಪಾಜೋಲಮ್ ಎಂಬ ನಿಷೇಧಿತ ಮಾದಕವಸ್ತುವನ್ನ ತಯಾರಿಸಲಾಗ್ತಿತ್ತು. ಎನ್​ಸಿಬಿ ಅಧಿಕಾರಿಗಳು 91 ಕೆ.ಜಿ ಆಲ್ಪಾಜೋಲಮ್ ಹಾಗೂ 62 ಲಕ್ಷ ರೂಪಾಯಿ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.

ಕೋಲಾರ ಇಂಡಸ್ಟ್ರಿಯಲ್ ಏರಿಯಾ ಹಾಗೂ ಬೀದರ್ ಎರಡು ಕಡೆಗಳಲ್ಲಿ ಎನ್.ಸಿ.ಬಿ ದಾಳಿ ನಡೆದಿದೆ. ಇಂದು ಡ್ರಗ್ಸ್ ಪ್ರೈವೇಟ್ ಲಿಮಿಟೆಡ್, ಬೀದರ್ ಫ್ಯಾಕ್ಟರಿಯಲ್ಲಿ ಡ್ರಗ್ಸ್​ ಉತ್ಪಾದನೆಯಾಗ್ತಿತ್ತು. ಆಲ್ಪಾಜೋಲಮ್ ಪೌಡರ್ ತಯಾರಿಸಿ ಕೋಲಾರ, ಬೀದರ್, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಮಾರಾಟ ಮಾಡಲಾಗ್ತಿತ್ತು ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಬಂದ ಹಿನ್ನೆಲೆ ಬೆಂಗಳೂರು ಎನ್.ಸಿ.ಬಿ ವಲಯಾಧಿಕಾರಿ ಅಮಿತ್ ಗವಾಟೆ ನೇತೃತ್ವದಲ್ಲಿ ಹೈದರಾಬಾದ್​​ ಎನ್.ವಿ ರೆಡ್ಡಿ ಎಂಬಾತನಿಗೆ ಸೇರಿದ್ದ ಕಾರ್ಖಾನೆ ಮೇಲೆ ಹಾಗೂ ಎನ್.ವಿ ರೆಡ್ಡಿ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ 62 ಲಕ್ಷ ನಗದು ಹಣವನ್ನ ವಶಕ್ಕೆ ಪಡೆಯಲಾಗಿದೆ.

ಎಸ್.ಭಾಸ್ಕರ್ ಹಾಗೂ ರೆಡ್ಡಿ ಕಾರ್ಖಾನೆಯಲ್ಲಿ ಆಲ್ಪಾಜೋಲಮ್ ಡ್ರಗ್ಸ್​​ ಮ್ಯಾನುಫ್ಯಾಕ್ಟರ್ ಮಾಡ್ತಿದ್ರು. ಪ್ರಕರಣದಲ್ಲಿ ವೈ.ವಿ ರೆಡ್ಡಿ. ಎಸ್.ಮೆನನ್, ಎನ್.ವಿ.ರೆಡ್ಡಿ, ಅಮೃತ್ ಹಾಗೂ ಭಾಸ್ಕರ್ ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.

 

The post ಡ್ರಗ್ಸ್​​ ತಯಾರಿಕೆ ಅಡ್ಡೆ ಮೇಲೆ NCB ದಾಳಿ: 91 ಕೆ.ಜಿ ಆಲ್ಪಾಜೋಲಮ್, ₹62 ಲಕ್ಷ ನಗದು ವಶ appeared first on News First Kannada.

Source: newsfirstlive.com

Source link