ಬೆಂಗಳೂರು: ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಗರದ ಕಾಡುಗೋಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಯಾನ್, ಅರ್ನಾಲ್ಡ್, ಅನಿರುದ್, ಕಾನಿಷ್ಕ್ ರೆಡ್ಡಿ, ಸಂತೋಷ್ ಬಂಧಿತ ಆರೋಪಿಗಳಾಗಿದ್ದಾರೆ. ಡಾರ್ಕ್ ವೆಬ್ ಸೈಟ್ ಮೂಲಕ ಬಿಟ್ ಕಾಯಿನ್​​ ಬಳಕೆ ಮಾಡಿ ಆರೋಪಿಗಳು ಡ್ರಗ್ಸ್ ಖರೀದಿ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ಸುಮಾರು 30 ಲಕ್ಷ ಮೌಲ್ಯದ ಎಂಡಿಎಂಎ, ಎಲ್​​​ಎಸ್​​ಡಿ ಹಾಗೂ ಎಕ್ಸ್’ಟೆಸಿ ಮಾತ್ರೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳು ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಮಂಗಲ ಗ್ರಾಮದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು. ಒಂದು ಮಾತ್ರೆಗೆ ನಾಲ್ಕರಿಂದ ಆರು ಸಾವಿರಕ್ಕೆ ಮಾರಾಟ ಮಾಡಿ ಅಧಿಕ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

The post ಡ್ರಗ್ಸ್​​ ಮಾರಾಟ ಅಡ್ಡೆ ಮೇಲೆ ಸಿಸಿಬಿ ದಾಳಿ- ₹30 ಲಕ್ಷ ಮೌಲ್ಯದ ಮಾತ್ರೆ ವಶ appeared first on News First Kannada.

Source: newsfirstlive.com

Source link