ವಿಜಯಪುರ: ಡ್ರಗ್ಸ್ ಕೇಸ್ ವಿಚಾರವಾಗಿ ವಿಜಯಪುರದಲ್ಲಿ ಚಿತ್ರನಟಿ ರಾಗಿಣಿ ದ್ವಿವೇದಿ ಮಾತನಾಡಿ.. ಆ ವಿಚಾರದ ಬಗ್ಗೆ ಹೆಚ್ಚಿಗೆ ಮಾತಾಡೋದಿಲ್ಲ. ನನ್ನ ಮೇಲೆ ಜನರ ಪ್ರೀತಿ, ವಿಶ್ವಾಸವಿದೆ. ತಪ್ಪು ಮಾಡಿಲ್ಲಾ ಅಂದ್ರೆ ನಾವು ಟೆನ್ಷನ್ ಮಾಡ್ಕೊಬಾರ್ದು. ಡ್ರಗ್ಸ್ ವಿಚಾರದಲ್ಲಿ 100% ಟಾರ್ಗೆಟ್ ಮಾಡಲಾಗಿದೆ. ಬರಿ ಒಂದು ಕೇಸ್ ವಿಚಾರವಾಗಿ ಮಾತ್ರವಲ್ಲ.. ಹೆಣ್ಮಕ್ಕಳು ಅಂದ್ರೆ ಸಾಕು ಪ್ರತಿಯೊಂದು ವಿಚಾರದಲ್ಲೂ ಸಮಾಜದಲ್ಲಿ ಟಾರ್ಗೆಟ್ ಮಾಡಲಾಗುತ್ತದೆ ಎಂದಿದ್ದಾರೆ.

ಹೆಣ್ಮಕ್ಕಳನ್ನು ತುಂಬಾ ಈಸಿಯಾಗಿ ಟಾರ್ಗೆಟ್ ಮಾಡೋದು ಹವ್ಯಾಸವಾಗಿದೆ. ಬ್ಲೇಮ್ ಮಾಡೋ ಬದಲು ಎಲ್ಲರೂ ನಿಮ್ಮ ನಿಮ್ಮ ಕೆಲಸದಲ್ಲಿ ಕರೆಕ್ಟ್ ಆಗಿದ್ರೆ ಸಾಕು ಅಂತಲೂ ಹೇಳಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಪ್ರಶಾಂತ ಸಂಬರಗಿ ವಿಚಾರವಾಗಿ ಪ್ರತಿಕ್ರಿಯಿಸಿದ ರಾಗಿಣಿ.. ಅವರು ನಿಜವಾಗಿಯೂ ನನಗೆ ಪರಿಚಯವಿಲ್ಲ, ಅವರೊಂದಿಗೆ ನಾನು ಮಾತಾಡಿಯೂ ಇಲ್ಲ. ಅವರು ಏನು ಮಾತಾಡ್ತಾರೋ ಮಾತಾಡಲಿ, ನನಗೆ ಅವರ ಪರಿಚಯವಿಲ್ಲ. ಅವರವರ ಓಪಿನಿಯನ್ ಮಾತಾಡ್ತಾರೆ, ಅದನ್ನು ನಾನು ಕಂಟ್ರೋಲ್ ಮಾಡಲು ಆಗಲ್ಲ. ನಾನು ಏನು ಮಾಡ್ತೀನಿ, ಏನು ಮಾತಾಡ್ತೀನಿ ಅನ್ನೋದನ್ನು ಮಾತ್ರ ಕಂಟ್ರೋಲ್ ಮಾಡ್ತೀನಿ. ನನ್ನನ್ನು ಎಲ್ಲರೂ ಇಷ್ಟ ಪಡ್ತಾರೆ, ನನಗೆ ಫ್ಯಾನ್ಸ್ ಇದಾರೆ, ಅವರಿಗೆಲ್ಲ ಧನ್ಯವಾದ ಹೇಳ್ತೇನೆ. ನನ್ನನ್ನು ಇಷ್ಟ ಪಟ್ಟವರಿಗೂ, ಇಷ್ಟ ಪಡದವರಿಗೂ ಥ್ಯಾಂಕ್ಯೂ ಎಂದರು

The post ಡ್ರಗ್ಸ್​ ಕೇಸ್​ನಲ್ಲಿ 100% ನನ್ನನ್ನು ಟಾರ್ಗೆಟ್ ಮಾಡಲಾಗಿದೆ- ರಾಗಿಣಿ ದ್ವಿವೇದಿ appeared first on News First Kannada.

Source: newsfirstlive.com

Source link