ಡ್ರಗ್ಸ್ ಪಾರ್ಟಿ ಪ್ರಕರಣ: ಬಂಧನಕ್ಕೊಳಗಾಗಿದ್ದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಿಡುಗಡೆ | Actor Siddhant Kapoor’s release on station bail


ಡ್ರಗ್ಸ್ ಪಾರ್ಟಿ ಪ್ರಕರಣ: ಬಂಧನಕ್ಕೊಳಗಾಗಿದ್ದ ನಟ ಸಿದ್ದಾಂತ್ ಕಪೂರ್ ಸೇರಿ ಐವರ ಬಿಡುಗಡೆ

ನಟ ಸಿದ್ದಾಂತ್ ಕಪೂರ್

ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಸೇರಿ ಐವರಿಗೆ ಜಾಮೀನು ಠಾಣಾ ಜಾಮೀನು ಮಂಜೂರಾಗಿದೆ.

ಬೆಂಗಳೂರು: ನಗರದ ಖಾಸಗಿ ಹೋಟೆಲ್​​ನಲ್ಲಿ ಡ್ರಗ್ಸ್​ ಪಾರ್ಟಿ (Drug Party) ನಡೆಸುತ್ತಿದ್ದ ಪ್ರಕರಣ ಸಂಬಂಧ ಬಂಧಿತಕ್ಕೊಳಗಾಗಿದ್ದ ಬಾಲಿವುಡ್ ನಟ ಸಿದ್ಧಾಂತ್ ಕಪೂರ್ (siddhanth kapoor) ಸೇರಿ ಐವರಿಗೆ ಜಾಮೀನು ಠಾಣಾ ಜಾಮೀನು ಮಂಜೂರಾಗಿದೆ. ಪಾರ್ಟಿ ವೇಳೆ ಡ್ರಗ್ಸ್ ಸೇವಿಸಿದ್ದ ಆರೋಪದಡಿ ನಟ ಸಿದ್ದಾಂತ್ ಸೇರಿದಂತೆ ಒಟ್ಟು ಐವರನ್ನು ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದರು. ಸದ್ಯ ಬಂಧಿತ ಐವರಿಗೂ ಠಾಣಾ ಜಾಮೀನು (Station Bail) ಮಂಜೂರಾಗಿದ್ದು, ಸೋಮವಾರ ರಾತ್ರಿ ಬಿಡುಗಡೆಯಾಗಿದ್ದಾರೆ. ಮಂಗಳವಾರ (ಜೂನ್ 14) ಬೆಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರ ಕಾರ್ಯದ ಬಗ್ಗೆ ಮಾತನಾಡಿದ ಸಿದ್ದಾಂತ್, ಬೆಂಗಳೂರು ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದಿದ್ದಾರೆ.

TV9 Kannada


Leave a Reply

Your email address will not be published.