ಮುಂಬೈ: ಆರ್ಯನ್ ಖಾನ್ ಬಿಡುಗಡೆ ನಂತರ ನಟ ಶಾರುಖ್ ಖಾನ್ ತಮ್ಮ ಮಗನ ವಿಚಾರವಾಗಿ ಹಲವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸದ್ಯ ಆರ್ಯನ್ ಚಲನವಲನ ಹಾಗೂ ಭದ್ರತೆಯ ಬಗ್ಗೆ ತೀವ್ರ ಯೋಚನೆ ಮಾಡಿದ ಕಿಂಗ್ ಖಾನ್, ಆರ್ಯನ್ ಖಾನ್ಗೆ ಭದ್ರತೆಗಾಗಿ ಬಾಡಿಗಾರ್ಡ್ ನೇಮಿಸಲು ಹುಡುಕಾಟ ನಡೆಸಿದ್ದಾರೆ. ಈ ಮೊದಲು ಜನರಿಗೆ ಆರ್ಯನ್ರ ಮುಖ ಪರಿಚಯ ಇರದ ಕಾರಣ, ಪಾರ್ಟಿ ಅಥವಾ ಫ್ರೆಂಡ್ಸ್ ಜೊತೆ ಸುತ್ತಲು ಆರ್ಯನ್ ಒಬ್ಬರೇ ಹೋಗುತ್ತಿದ್ರು. ಆದ್ರೀಗ ಡ್ರಗ್ ಪ್ರಕರಣದ ನಂತರ ಆರ್ಯನ್ರನ್ನು ಎಲ್ಲರೂ ಗುರುತಿಸುತ್ತಿದ್ದು, ಈ ಹಿನ್ನಲೆ ಆರ್ಯನ್ ರಕ್ಷಣೆಗೆ ಶಾರುಖ್ ಬಾಡಿಗಾರ್ಡ್ ನೇಮಕ ಮಾಡಿದ್ದಾರೆ.
ಜಾಮೀನು ನಿಯಮದಂತೆ ಆರ್ಯನ್ ದಿನನಿತ್ಯ ಪೊಲೀಸ್ ಠಾಣೆಗೆ ಬಂದು ಸಹಿ ಮಾಡಬೇಕು. ಇನ್ನು ನೆನ್ನೆ ಆರ್ಯನ್ ಖಾನ್ ಹುಟ್ಟು ಹಬ್ಬವಿದ್ದರೂ ತಮ್ಮ ಬಾಡಿಗಾರ್ಡ್ಗಳ ಜೊತೆ ಠಾಣೆಗೆ ಆಗಮಿಸಿ ಸಹಿ ಮಾಡಿ ತೆರಳಿದ್ದಾರೆ.
The post ಡ್ರಗ್ ಕೇಸ್ ಬಳಿಕ ಹೆಚ್ಚಾಯ್ತಂತೆ ಆರ್ಯನ್ ಜನಪ್ರಿಯತೆ; ಅದಕ್ಕೆ ಶಾರೂಖ್ ಖಾನ್ ಏನ್ಮಾಡಿದ್ರು ಗೊತ್ತಾ..? appeared first on News First Kannada.