ಡ್ರಾಮಾ ಜೂನಿಯರ್ಸ್​ಗೆ ಬರ್ತಿದ್ದಾರೆ ರವಿ ಮಾಮಾ; ಏನಿದೆ ವಿಶೇಷ?!


ಕಲರ್ಸ್​ನ ಫ್ಯಾಮಿಲಿಯ ಮತ್ತೊಬ್ಬ ಸದಸ್ಯರು ಜ್ಹೀ ಕುಟುಂಬಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಡ್ರಾಮಾ ಜೂನಿಯರ್ಸ್ ಸೀಸನ್​ 4ಗೆ ನಟ ವಿ.ರವಿಚಂದ್ರ​ ಅವ್ರು ಬರ್ತಿದ್ದು, ಜಡ್ಜ್​ ಸೀಟ್​ ಅಲಂಕರಿಸಲಿದ್ದಾರೆ.

ಅಂದ್ಹಾಗೆ, ಈ ಹಿಂದೆ ಸರಿಗಮಪನಲ್ಲಿ ಜಡ್ಜ್​ ಆಗಿ ಹಲವು ಸೀಸನ್​ಗಳಲ್ಲಿ ಕಾಣಿಸಿಕೊಂಡಿದ್ದ ರಾಜೇಶ್​ ಕೃಷ್ಣನ್​ ಅವ್ರು ಎದೆ ತುಂಬಿ ಹಾಡುವೆನು ಶೋಗೆ ಜಡ್ಜ್​ ಆಗಿ ಬಂದು ಕಲರ್ಸ್ ಜೊತೆ ಅನುಬಂಧ ಬೆಳೆಸಿದ್ರು. ನಂತರ ಕಲರ್ಸ್​ ಕನ್ನಡದ ಸೂಪರ್​ ಮಿನಿಟ್​ನಿಂದ ಗೋಲ್ಡನ್​ ಗೂಡಿಗೆ ಎಂಟ್ರಿ ಕೊಟ್ಟವ್ರು ಗೋಲ್ಡನ್​ ಸ್ಟಾರ್​ ಗಣೇಶ್​. ಇನ್ನೂ ಇತ್ತೀಚಿಗೆ ನಟ ವಿಜಯ್​ರಾಘವೇಂದ್ರ ಕೂಡ ಝೀ ಕುಟುಂಬದಿಂದ ಕಲರ್ಸ್​ ಫ್ಯಾಮಿಲಿಗೆ ಜಂಪ್​ ಆಗಿದ್ರು. ಈಗ ರವಿ ಸರ್​ ಸರದಿ.

ಇನ್ನು ತಕಧಿಮಿತ, ಡಾನ್ಸಿಂಗ್​ ಸ್ಟಾರ್​ ಹೀಗೆ ಕಲರ್ಸ್​ನ ಹಲವು ಶೋಗಳಿಗೆ ಜಡ್ಜ್​ ಆಗಿದ್ದ ರವಿ ಸರ್​ ಈಗ ಜ್ಹೀ ಕುಟುಂಬಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆ ಕುಟುಂಬಂದಿದ್ದ ಈ ಕುಟುಂಬಕ್ಕೆ ಸ್ಟಾರ್​ಗಳು ಎಕ್ಸ್​ಚೆಂಜ್​ ಆಗ್ತಿರೋದು ವಿಶೇಷ.

ಡ್ರಾಮಾ ಜುನಿಯರ್ಸ್ ಸೀಸನ್​ 4ಗೆ ರವಿಚಂದ್ರ ಅವ್ರು ಬರೋದು ಕನ್​ಫರ್ಮ್​ ಆಗಿದೆ. ಆದ್ರೇ ಇನ್ನಿಬ್ಬರು ಜಡ್ಜ್​​ ಯಾರು ಎಂಬ ಪ್ರಶ್ನೆಗೆ ಒಂದು ಮೂಲದ ಪ್ರಕಾರ ಈ ಹಿಂದೆ ಜಡ್ಜ್​ ಆಗಿದ್ದ ಹಿರಿಯನಟಿ ಲಕ್ಷ್ಮೀ ಅವ್ರು ಹಾಗೂ ಹಿರಿಯನಟ ಮುಖ್ಯಮಂತ್ರಿ ಚಂದ್ರು ಅವ್ರು ಮರಳಲಿದ್ದಾರೆ ಎಂಬ ಸುದ್ದಿ ಇದೆ. ಪಕ್ಕಾ ಇನ್​ಫಾರ್ಮೇಶನ್​ನ್ನ ಇನ್ನೆರಡು ದಿನಗಳಲ್ಲಿ ನಾವೇ ನೀಡ್ತಿವಿ.

ಒಟ್ಟಿನಲ್ಲಿ ಡ್ರಾಮಾ ಜುನಿಯರ್ಸ್​ ನಾವು ಪಕ್ಕಾ ಡ್ರಾಮಾ ಪಂಟ್ರು ಅಂತಾ ಸಖತ್​ ಎನರ್ಜಿಯಲ್ಲಿ ಸಜ್ಜಾಗಿದ್ದಾರೆ. ಈಗಾಗಲೇ ರಾಜ್ಯಾಂದ್ಯಂತ ಆಡಿಶನ್ಸ್ ಆಗಿದ್ದು, ಡ್ರಾಮಾ ಕ್ವಿನ್ಸ್​ ಅಂಡ್​ ಕಿಂಗ್ಸ್​ ನಿಮ್ಮ ಮನೆಗೆ ಕಾಲಿಡಲು ಇನ್ನೇನಿದ್ದರು ಒಂದೇ ಹೆಜ್ಜೆ ಬಾಕಿ ಇದೆ.

News First Live Kannada


Leave a Reply

Your email address will not be published.