– ಯಾದಗಿರಿಯಲ್ಲಿ ಒಬ್ಬೊಬ್ಬರದ್ದು ಒಂದೊಂದು ಕಥೆ

ಯಾದಗಿರಿ: ಒಂದು ಕಡೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಭಯಪಡುತ್ತಿರುವ ಪ್ರಯಾಣಿಕರು ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿದೆ. ಯಾದಗಿರಿ ನಗರದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಅಂದ್ರೆ ಸಾರ್ ನಾವು ಕುಡಿಯುತ್ತೇವೆ. ಸತ್ತರೆ ನಾವು ಹೀಗೆ ಸಾಯುತ್ತೇವೆ. ಸರ್ ಲಸಿಕೆಗಾಗಿಯೇ ನಾನು ಕೆಲಸ ಬಿಟ್ಟಿದ್ದೇನೆ. ನಾನು ಮಾತ್ರ ಯಾವುದೇ ಕಾರಣಕ್ಕೂ ಲಸಿಕೆ ಪಡೆಯಲ್ಲ ಎಂದು ಕುಡುಕರು ಉದ್ಧಟತನ ತೊರುತ್ತಿದ್ದಾರೆ.

ಈ ನಡುವೆ ಮಹಿಳೆಯೊಬ್ಬಳು ರೇಷನ್ ಕೊಡಿಸಿ ನಾನು ಲಸಿಕೆ ಹಾಕಿಸಿಕೊಳ್ಳುತ್ತೇನೆ. ರೇಷನ್ ನೀಡುವ ಭರವಸೆ ಕೊಟ್ಟನಂತರ ಮಹಿಳೆ ಲಸಿಕೆ ಹಾಕಿಸಿಕೊಂಡಿದ್ದಾರೆ. ಯಾದಗಿರಿ ನಗರದಲ್ಲಿ ಹೀಗೆ ಲಸಿಕೆ ನೀಡಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಖುದ್ದು ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಹನುಮಾನ ನಗರಕ್ಕೆ ಹೋದ್ರೆ ಜನರು ಶಾಕ್ ಕೊಟ್ಟಿದ್ದಾರೆ. ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊರೊನಾ ಮೂರನೇ ಅಲೆ ಎದುರಿಸಲು ಯಾದಗಿರಿ ಜಿಲ್ಲಾಡಳಿತದ ವಿಭಿನ್ನ ಹೆಜ್ಜೆ

ಮದ್ಯ ವೇಸನಿ ಯುವಕನೋರ್ವ ನಾನು ಡ್ರಿಂಕ್ ಮಾಡುತ್ತೆನೆ ಲಸಿಕೆ ಹಾಕಿಸಿಕೊಳ್ಳಲ್ಲ. ಸತ್ತರೇ ನಾನು ಹೀಗೆ ಸಾಯುತ್ತೆನೆಂದು ಜಾಗೃತಿ ಮೂಡಿಸಲು ತೆರಳಿದ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ ಹಾಗೂ ಆರೋಗ್ಯ ಸಿಬ್ಬಂದಿಗೆ ಹೇಳಿ ಯುವಕ ಉದ್ದಟತನ ತೋರಿದ್ದಾನೆ. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ ಎಷ್ಟೇ ಬುದ್ದಿ ಮಾತು ಹೇಳಿದ್ರೂ ಲಸಿಕೆ ಹಾಕಿಸಿಕೊಳ್ಳದೇ ಯುವಕ ನಿಷ್ಕಾಳಜಿ ತೋರಿದ್ದಾನೆ. ಬಹುತೇಕ ಮಹಿಳೆಯರು ಲಸಿಕೆ ಪಡೆಯಲು ವಿವಿಧ ನೆಪ ಹೇಳಿ ಹಿಂದೇಟು ಹಾಕಿದರು. ಆದರೂ ಕೆಲವರಿಗೆ ತಿಳಿ ಹೇಳಿ ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಯಾದಗಿರಿಯ ತಿಂಥಣಿ ರಾಜ್ಯದ ಮೊದಲ ಕೊರೊನಾ ಲಸಿಕೆ ಮುಕ್ತ ಗ್ರಾಮ ಪಂಚಾಯ್ತಿ

The post ಡ್ರಿಂಕ್ಸ್ ಮಾಡ್ತೀನಿ, ಸತ್ರೆ ಇಲ್ಲೇ ಸಾಯ್ತೀನಿ – ಲಸಿಕೆ ಪಡೆಯಲು ಕುಡುಕನ ಹಿಂದೇಟು appeared first on Public TV.

Source: publictv.in

Source link