ಡ್ರಿಂಕ್ ಅಂಡ ಡ್ರೈವ್​​ನಲ್ಲಿ ಆಕ್ಸಿಡೆಂಟ್ ಮಾಡಿ ಇನ್ಸ್​ಪೆಕ್ಟರ್ ಪತಿ-ಪತ್ನಿ ಕಿರಿಕ್..! ಸ್ಥಳಿಯರಿಂದ ದೂರು ದಾಖಲು | Inspector husband wife sneered at accident in drink and drive..! File a complaint from the locals


ಮೆಡಿಕಲ್ ಚೆಕ್ ಅಪ್ ಮಾಡಿಸಲು ಪೊಲೀಸ್ ಸಿಬ್ಬಂದಿ ಮುಂದಾಗಿದ್ದು, ತಪಾಸಣೆ ವೇಳೆ ಇನ್ಸ್ ಪೆಕ್ಟರ್ ಸಂಜೀವ್ ಮತ್ತು ಉಷಾ ಮದ್ಯಸೇವನೆ ಧೃಡಪಟ್ಟಿದೆ. ಮದ್ಯ ಸೇವಿಸಿ ಕಾರು ಚಲಾಯಿಸಿ, ಒನ್ ವೇ ನಲ್ಲಿ ಡ್ರೈವ್ ಮಾಡಿ ಆಕ್ಸಿಡೆಂಡ್ ಮಾಡಿದ್ದಾರೆ.

ಡ್ರಿಂಕ್ ಅಂಡ ಡ್ರೈವ್​​ನಲ್ಲಿ ಆಕ್ಸಿಡೆಂಟ್ ಮಾಡಿ ಇನ್ಸ್​ಪೆಕ್ಟರ್ ಪತಿ-ಪತ್ನಿ ಕಿರಿಕ್..! ಸ್ಥಳಿಯರಿಂದ ದೂರು ದಾಖಲು

ಸಿಎಆರ್ ಇನ್ಸ್​​ಪೆಕ್ಟರ್​ ಸಂಜೀವ್​, ಪತ್ನಿ ಉಷಾ

ಬೆಂಗಳೂರು: ನಗರದಲ್ಲಿ ಡ್ರಂಕ್​​​ ಮತ್ತು ಡ್ರೈವ್ ಮಾಡಿ ಕಾರು ಚಲಾಯಿಸಿ ಇನ್ಸ್​​ಪೆಕ್ಟರ್​​ ವಿರುದ್ಧ ನಿಯಮ ಉಲ್ಲಂಘನೆ ಆರೋಪ ಮಾಡಲಾಗಿದೆ. ನಿನ್ನೆ ರಾತ್ರಿ ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ಒನ್​ ವೇಯಲ್ಲಿ ಕಾರು ಚಲಾಯಿಸಿ ಸಿಎಆರ್ ಇನ್ಸ್​​ಪೆಕ್ಟರ್​ ಸಂಜೀವ್​. ಪತ್ನಿ ಉಷಾರಿಂದ ಕಿರಿಕ್ ಮಾಡಲಾಗಿದೆ.​​ ನಿನ್ನೆ ರಾತ್ರಿ 12 ಗಂಟೆಯಲ್ಲಿ ಜಾಲಿ ರೈಡ್ ಬಂದಿದ್ದ ಸಂಜೀವ್ ದಂಪತಿ, ಈ ವೇಳೆ ಕಾರು ಚಲಾಯಿಸುತ್ತಿದ್ದ ಪತ್ನಿ ಉಷಾ, ಚಾಮರಾಜಪೇಟೆಯ 6ನೇ ಮುಖ್ಯರಸ್ತೆ ಬಳಿ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸಂಜೀವ್ ದಂಪತಿ ಜೊತೆ ಕಾರು ಚಾಲಕ, ಸ್ಥಳೀಯರಿಂದ ಗಲಾಟೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಉಷಾ ದೂರು ನೀಡಿದ್ದಾರೆ. ಸಂಜೀವ್ ದಂಪತಿ ವಿರುದ್ಧ ಸ್ಥಳೀಯರಿಂದಲೂ ಪ್ರತಿದೂರು ನೀಡಲಾಗಿದೆ.

ಡ್ರಿಂಕ್ ಅಂಡ್ ಡ್ರೈವ್:

ಮೆಡಿಕಲ್ ಚೆಕ್ ಅಪ್ ಮಾಡಿಸಲು ಪೊಲೀಸ್ ಸಿಬ್ಬಂದಿ ಮುಂದಾಗಿದ್ದು, ತಪಾಸಣೆ ವೇಳೆ ಇನ್ಸ್ ಪೆಕ್ಟರ್ ಸಂಜೀವ್ ಮತ್ತು ಉಷಾ ಮದ್ಯಸೇವನೆ ಧೃಡಪಟ್ಟಿದೆ. ಮದ್ಯ ಸೇವಿಸಿ ಕಾರು ಚಲಾಯಿಸಿ, ಒನ್ ವೇ ನಲ್ಲಿ ಡ್ರೈವ್ ಮಾಡಿ ಆಕ್ಸಿಡೆಂಡ್ ಮಾಡಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಹಿನ್ನಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ದಂಪತಿ ವಿರುದ್ದ ಡಿಡಿ ಕೇಸ್ ದಾಖಲು ಮಾಡಲಾಗಿದೆ.

ಟ್ರಾಫಿಕ್ ಪೊಲೀಸರಿಂದ ಕೆಎಸ್​ಆರ್​​ಟಿಸಿ ಚಾಲಕನ ಮೇಲೆ ಹಲ್ಲೆ:

ಬೆಂಗಳೂರು: ಟ್ರಾಫಿಕ್ ಪೊಲೀಸರಿಂದ ಕೆಎಸ್​ಆರ್​​ಟಿಸಿ ಚಾಲಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ನಗರದ ಕಾರ್ಪೊರೇಷನ್ ಸರ್ಕಲ್​ನಲ್ಲಿ ನಡೆದಿದೆ. ಕೆಎಸ್​ಆರ್​​ಟಿಸಿ ಚಾಲಕ ಪ್ರಕಾಶ್ ಮೇಲೆ ಹಲ್ಲೆ ಆರೋಪ ಮಾಡಲಾಗಿದೆ. ಕಾರ್ಪೊರೇಷನ್ ಸರ್ಕಲ್ ಬಳಿ ಚಾಲಕ ಬಸ್​ ನಿಲ್ಲಿಸಿದ್ದ. ಈ ವೇಳೆ ಗಾಡಿ ನಿಲ್ಲಿಸಬೇಡ ಎಂದು ಟ್ರಾಫಿಕ್ ಪಿಸಿ ಹೇಳಿದ್ದಾರೆ. ವಾಹನ ತೆಗೆಯುವುದಾಗಿ ಚಾಲಕ ಹೇಳಿದ್ದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದಾಗ ಚಾಲಕನ ಮೇಲೆ ಹಲ್ಲೆ ಮಾಡಲಾಗಿದೆ. ಪಿಸಿ ಹಲ್ಲೆಯಿಂದಾಗಿ KSRTC ಚಾಲಕ ಪ್ರಕಾಶ್​ ಮೂಗಿಗೆ ಗಾಯವಾಗಿದೆ. ಎಸ್​​.ಜೆ.ಪಾರ್ಕ್ ಠಾಣೆಗೆ ಚಾಲಕ ಪ್ರಕಾಶ್ ದೂರು ನೀಡಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.