ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಮೇಲೆ ಯೆಮೆನ್ನ ಇರಾನ್-ಸಂಯೋಜಿತ ಹೌತಿ ಬಂಡುಕೋರರು ಭೀಕರ ಡ್ರೋನ್ ದಾಳಿ ನಡೆಸಿದ್ದರು. ಇವರ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಪಾಕ್ ಮೂಲದ ಪ್ರಜೆಯೋರ್ವ ಸಾವನ್ನಪ್ಪಿದ್ದರು ಎಂದು ವರದಿ ಆಗಿತ್ತು. ಈ ಡ್ರೋನ್ ದಾಳಿ ಪ್ರತಿಯಾಗಿ ಸೌದಿ ನೇತೃತ್ವದ ಮೈತ್ರಿಕೂಟ ಯೆಮೆನ್ನ ಇರಾನ್-ಸಂಯೋಜಿತ ಹೌತಿ ಬಂಡುಕೋರರ ಮೇಲೆ ಏರ್ಸ್ಟ್ರೈಕ್ ನಡೆಸಿದೆ.
ಹೌದು, ಸೌದಿ ಅರೆಬಿಯಾ ನೇತೃತ್ವದ ಮೈತ್ರಿಕೂಟ ಯಮೆನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಯಮೆನ್ ರಾಜಧಾನಿ ಸನಾದ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಭಾರತೀಯರ ಸಾವಿಗೆ ಯುಎಇ ವಿದೇಶಾಂಗ ಸಚಿವ ಎಬಿ ಜಾಯೇದ್ ಅವರು, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಎಸ್. ಜೈಶಂಕರ್, ಜಾಯೇದ್ ಅವರೊಂದಿಗೆ ಮಾತಾಡಿ ಖುಷಿಯಾಯ್ತು. ಇಂಡಿಯನ್ ಎಂಬಸಿಯೂ ಯುಎಇ ಜತೆ ಕೆಲಸ ಮಾಡಲಿದೆ ಎಂದು ಬರೆದುಕೊಂಡಿದ್ದಾರೆ.