ಡ್ರೋನ್​​ ಬಳಸಿ ಕೋವಿಡ್​ ಲಸಿಕೆ ಸಾಗಾಟ ಯಶಸ್ವಿ..15 ಕೆಜಿ ಹೊತ್ತು 10 ನಿಮಿಷದಲ್ಲಿ ಕ್ರಮಿಸಿದ್ದೆಷ್ಟು ಗೊತ್ತಾ?


ಬೆಂಗಳೂರು: ಡ್ರೋನ್​ ಬಳಸಿ ಕೋವಿಡ್ ಲಸಿಕೆ ಸಾಗಾಟ ಯಶಸ್ವಿಯಾಗಿದೆ. ನಗರದಲ್ಲಿ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿಸ್(NAL) ಅಭಿವೃದ್ಧಿಪಡಿಸಿದ ಆಕ್ಟಾಕಾಪ್ಟರ್ ಡ್ರೋಣ್​ ಮೂಲಕ ಲಸಿಕೆ ಪೂರೈಕೆಯ ಪ್ರಯೋಗಾರ್ಥ ನಡೆಸಿದ್ದು ಯಶಸ್ವಿಯಾಗಿದೆ.

ಚಂದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಾರಗದ್ದೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡ್ರೋನ್​ ರವಾನೆ ಮಾಡಲಾಗಿತ್ತು. ಈ ವೇಳೆ ಡ್ರೋನ್​ 15 ಕೆಜಿ ತೂಕದ ಐಸ್ ಬಾಕ್ಸ್ ನಲ್ಲಿ 50 ವಯಲ್ಸ್ ವ್ಯಾಕ್ಸಿನ್ ಹೊತ್ತು ಕೇವಲ 10 ನಿಮಿಷದಲ್ಲಿ 14 ಕಿ.ಮೀ ಕ್ರಮಿಸಿದೆ.

ಸಾಮಾನ್ಯವಾಗಿ ರಸ್ತೆ ಮಾರ್ಗವಾಗಿ ಲಸಿಕೆ ರವಾನಿಸಲು 30-40 ನಿಮಿಷ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಡ್ರೋನ್​10 ಮೂಲಕ ಕೇವಲ 10 ನಿಮಿಷದಲ್ಲಿ ತಲುಪಲಾಗಿದೆ. ಆ ಮೂಲಕ ಬೆಂಗಳೂರಲ್ಲಿ ಮೊದಲ ಬಾರಿ ಡ್ರೋಣ್ ಬಳಸಿ ಲಸಿಕೆ ಪೂರೈಕೆ ಯಶಸ್ವಿ ಕಂಡತಾಗಿದೆ.

News First Live Kannada


Leave a Reply

Your email address will not be published.