ಬೆಂಗಳೂರು: ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಲ್ಲದೇ ಮರ್ಮಾಂಗಕ್ಕೆ ಮದ್ಯದ ಬಾಟಲ್​ ಇಟ್ಟು ವಿಕೃತ ಕಾಮಿಗಳು ಪೈಶಾಚಿಕ ಕೃತ್ಯ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪ್ರಕರಣದ ಬೆನ್ನು ಹತ್ತಿರುವ ಬೆಂಗಳೂರು ಪೊಲೀಸರಿಗೆ ಶಾಕಿಂಗ್ ವಿಷಯಗಳು ಲಭ್ಯವಾಗುತ್ತಿದೆ. ಜೊತೆಗೆ ಈ ಪ್ರಕರಣ ಹೇಗೆ ಬೆಳಕಿಗೆ ಬಂತು ಅನ್ನೋದೇ ತುಂಬಾ ಇಂಟರೆಸ್ಟಿಂಗ್ ಆಗಿದೆ.

ಬಾಂಗ್ಲಾದಲ್ಲಿ ವಿಡಿಯೋ ಅಪ್​ಲೋಡ್​
ಕೃತ್ಯದ ಬಳಿಕ ರಿಧಾಯ್ ಎಂಬ ಆರೋಪಿ ಹೈದ್ರಾಬಾದ್ ಸ್ನೇಹಿತನಿಗೆ ವಿಡಿಯೋ ಕಳುಹಿಸಿದ್ದ. ಅಲ್ಲಿಂದ ವಿಡಿಯೋ ಬಾಂಗ್ಲಾ ತಲುಪುತ್ತದೆ. ಅಲ್ಲಿ ಓರ್ವ ಈ ವಿಡಿಯೋವನ್ನು ಮೇ 25 ರಂದು ಸೋಶಿಯಲ್ ಮೀಡಿಯಾಗೆ ಅಪ್​ಲೋಡ್ ಮಾಡ್ತಾನೆ. ನಂತರ ಢಾಕಾ ಪೊಲೀಸರು ತನಿಖೆಯನ್ನ ಆರಂಭಿಸುತ್ತಾರೆ. ಅದರಂತೆ ಇಡೀ ಬಾಂಗ್ಲಾ ದೇಶದಲ್ಲಿ ವಿಡಿಯೋ ಬಗ್ಗೆ ತನಿಖೆ ಶುರುವಾಗುತ್ತದೆ.

ವಿಡಿಯೋದ ಮೂಲಗಳು ಬಾಂಗ್ಲಾ ಪೊಲೀಸರಿಗೆ ಲಭ್ಯವಾಗುವುದಿಲ್ಲ. ಆದರೆ ವಿಡಿಯೋದಲ್ಲಿರುವ ವ್ಯಕ್ತಿಗಳೆಲ್ಲಾ ಬಾಂಗ್ಲಾ ದೇಶದವರೇ ಎಂದು ಪೊಲೀಸರು ಪತ್ತೆ ಮಾಡ್ತಾರೆ. ಯಾಕಂದ್ರೆ ಪ್ರಮುಖ ಆರೋಪಿ ರಿಧಾಯ್ ಒಬ್ಬ ಯೂ ಟ್ಯೂಬರ್ & ಟಿಕ್ಟಾಕ್ ಸ್ಟಾರ್​. ಹಾಗಾಗಿ ತಕ್ಷಣ ಆತನ ಫೋಟೋಸ್, ಮತ್ತು ನಂಬರ್ ಎಲ್ಲವನ್ನೂ ಢಾಕಾ ಪೊಲೀಸರು ಸಂಗ್ರಹ ಮಾಡುತ್ತಾರೆ. ಆದರೆ ಕೊನೆಗೆ ಬಾಂಗ್ಲಾದಲ್ಲಿ ಕೃತ್ಯ ನಡೆದಿಲ್ಲ ಅನ್ನೋದು ಬಾಂಗ್ಲಾ ಪೊಲೀಸರ ತನಿಖೆಯಿಂದ ತಿಳಿದು ಬರುತ್ತೆ. ಹೀಗಾಗಿ ಇದು ಬಹುಶಃ ಪಕ್ಕದ ಅಸ್ಸಾಂನಲ್ಲಿ ನಡೆದಿರಬಹುದಾ? ಅನ್ನೋ ಗುಮಾನಿ ವ್ಯಕ್ತವಾಗುತ್ತೆ. ಇದೇ ನಿಟ್ಟಿನಲ್ಲಿ ಬಾಂಗ್ಲಾದೇಶ ಸರ್ಕಾರ ಅಸ್ಸಾಂ ಪೊಲೀಸರಿಗೆ ಸುದ್ದಿ ಮುಟ್ಟಿಸುತ್ತಾರೆ. ಯಾಕಂದ್ರೆ ಆ ಸಂತ್ರಸ್ತೆ ಒಂದು ನಿಟ್ಟಿನಲ್ಲಿ ಈಶಾನ್ಯ ಭಾರತೀಯರನ್ನು ಹೋಲುತ್ತಿರುತ್ತಾಳೆ.

ಅಸ್ಸಾಂ ಪೊಲೀಸರ ಮೊರೆ ಹೋದ ಢಾಕಾ ಪೊಲೀಸರು
ಪ್ರಕರಣದ ಜಾಡಿನ ರಹಸ್ಯ ಬಯಲು ಮಾಡಲು ಹೊರಟಿದ್ದ ಢಾಕಾ ಪೊಲೀಸರು, ಭಾರತದ ಅಸ್ಸಾಂ ಪೊಲೀಸರ ಸಹಾಯವನ್ನ ಕೇಳುತ್ತಾರೆ. ಅದಕ್ಕೆ ಬೇಕಾಗಿರುವ ಎಲ್ಲಾ ಮಾಹಿತಿಗಳನ್ನ ಢಾಕಾದ ತನಿಖಾಧಿಕಾರಿಗಳ ತಂಡ ನೀಡುತ್ತದೆ. ಈ ದಾಖಲೆಗಳನ್ನ ಪಡೆದುಕೊಂಡ ಅಸ್ಸಾಂ ಪೊಲೀಸರು ಮೇ27 ರಂದು ಟ್ವೀಟ್ ಮಾಡ್ತಾರೆ. ಅಲ್ಲದೇ, ಈ ಘಟನೆ ಎಲ್ಲಿ ಮತ್ತು ಯಾವಾಗಾ ನಡೆದಿದ್ದು? ಅನ್ನೋದರ ವಿವರ ಲಭ್ಯವಿಲ್ಲ. ಯಾರಿಗಾದ್ರೂ ಈ ಬಗ್ಗೆ ಮಾಹಿತಿ ಸಿಕ್ಕರೆ ನಮಗೆ ನೀಡಿ ಎಂದೂ ಮನವಿ ಮಾಡಿಕೊಂಡಿದ್ದರು.

ಕ್ಲೂ ನೀಡಿದ ಐಎಂಇಐ ನಂಬರ್

ಜೊತೆ ಈ ವಿಡಿಯೋ ಅಪ್​ಲೋಡ್ ಆದ ಮೊಬೈಲ್ ಹಾಗೂ ಐಎಂಇಐ ನಂಬರ್ ಅನ್ನು ಕೂಡ ಢಾಕಾ ಪೊಲೀಸರು ಅಸ್ಸಾಂ ಪೊಲೀಸರಿಗೆ ನೀಡಿದ್ರು. ಪ್ರಕರಣದ ಜಾಡನ್ನ ಬೆನ್ನು ಬಿದ್ದಿದ್ದ ಪೊಲೀಸರಿಗೆ ಕ್ಲೂ ನೀಡಿದ್ದು ಆರೋಪಿಯ ಪೋನ್ ಐಎಂಇಐ ನಂಬರ್. ಅದನ್ನು ಪಡೆದು ಪರಿಶೀಲನೆ ಮಾಡಿದಾಗ ಭಾರತದ ಇಂಡಿಯಾ ನಂಬರ್ ಅನ್ನೋದು ಗೊತ್ತಾಗುತ್ತೆ. ಅದರ ಹಿಂದೆ ಬಿದ್ದಾಗ ಬೆಂಗಳೂರಲ್ಲಿ ಇರೋದು ಸಹ ಪತ್ತೆಯಾಗುತ್ತೆ. ಕೂಡಲೇ ನಗರ ಪೊಲೀಸ್ ಆಯುಕ್ತರನ್ನ ಸಂಪರ್ಕ ಮಾಡಲಾಗುತ್ತದೆ. ಅವರು ಸಿಸಿಬಿ ಕಮಿಷನರ್ ಸಂದೀಪ್ ಪಾಟೀಲ್​ಗೆ ಮಾಹಿತಿ ರವಾನೆ ಮಾಡುತ್ತಾರೆ. ಅವರಿಂದ ಆಗ ಒಂದು ಟೀಂ ರೆಡಿಯಾಗುತ್ತದೆ.

ಸಿಸಿಬಿ ಎಸಿಪಿ ಗೌತಮ್ ನೇತೃತ್ವದಲ್ಲಿ ಅಪರೇಷನ್ ಟೀಂ ರೆಡಿಯಾಗುತ್ತದೆ. ಇನ್ಸ್​ಪೆಕ್ಟರ್ ಲಕ್ಷ್ಮಿಕಾಂತಯ್ಯ, ಪಿಸಿಗಳಾದ ಶಶಿ ಹಾಗೂ ರವಿಶಂಕರ್, ಡ್ರೈವರ್ ಗಳಾದ ಸಿದ್ದು ಹಾಗೂ ವಿವೇಕ್ ಟೀಂ ರೆಡಿಯಾಗುತ್ತದೆ. ಈ ತಂಡಕ್ಕೆ ಪೂರ್ವ ವಿಭಾಗದ ಪೊಲೀಸರು ಸಹ ಸಾಥ್ ಕೊಡ್ತಾರೆ.

ಟವರ್ ಡಂಪ್
ತನಿಖೆಗೆ ಇಳಿದ ವಿಶೇಷ ತಂಡ, ಮೊದಲು ಅವರ ನಂಬರ್​ಗಳಲ್ಲಿ ಡಯಲ್ ಆಗಿರುವ ಟವರ್ ಡಂಪ್​​ ಪಡೆಯುತ್ತಾರೆ. ಅದು ಮಾರ್ಗೊಂಡನಹಳ್ಳಿಯ ಗ್ರೀನ್ ವೀವ್ ಲೇಔಟ್​ಗೆ ಲಿಂಕ್ ಆಗುತ್ತದೆ. ಅಲ್ಲಿಗೆ ಹೋದಾಗ ಅಲ್ಲಿ ಅನೇಕ ಮಂದಿ ಬಾಂಗ್ಲಾದವರು ಇರುತ್ತಾರೆ. ಈ ವೇಳೆ ಸ್ಥಳೀಯ ಇನ್ಫಾರ್ಮರ್​ಗಳ ಸಹಾಯ ಪಡೆಯುತ್ತಾರೆ. ವೈರಲ್ ಆಗಿದ್ದ ವಿಡಿಯೋದ ಆರೋಪಿಗಳ ಫೋಟೋ  ತೋರಿಸ್ತಾರೆ. ಆಗ ಅವರು ಏರೀಯಾದಲ್ಲಿ 2 ಪ್ಲೋರ್ ಕಟ್ಟಡದಲ್ಲಿರೋದು ಪತ್ತೆಯಾಗುತ್ತದೆ.

ಪೊಲೀಸರಿಂದ ಮತ್ತೊಂದು ಪ್ಲಾನ್
ಆರೋಪಿಗಳಿದ್ದ ಕಟ್ಟದ ಬಗ್ಗೆ ಮಾಹಿತಿ ಪತ್ತೆಯಾದಾಗ ಪೊಲೀಸರ ತಂಡ ಹೊಸದೊಂದು ಪ್ಲಾನ್ ಮಾಡುತ್ತದೆ. ಆರೋಪಿಗಳು ಎಲ್ಲಿಯೂ ಎಸ್ಕೇಪ್ ಆಗದಂತೆ ಏರಿಯಾವನ್ನ ಸಂಪೂರ್ಣ ಸುತ್ತುವರಿಯುತ್ತಾರೆ. ಪೊಲೀಸರ ಈ ಪ್ಲಾನ್ ಆಂಧ್ರ ಮೂಲದ ಆರೋಪಿ ಹಕೀಂಗೆ ತಿಳಿಯುತ್ತದೆ. ಅಲ್ಲದೇ ಸಿಕ್ಕಿಬಿದ್ದಿರುವ ಮಹಿಳಾ ಆರೋಪಿಗೂ ಗೊತ್ತಾಗುತ್ತೆ. ಅವರಿಬ್ಬರಲ್ಲಿ ಹಕೀಂ 2 ಪ್ಲೋರ್ ನಗೆದು ಪೊದೆ ಸೇರುತ್ತಾನೆ. ಆರೋಪಿ ರುಪ್ಸಾನ ಪತ್ನಿ ಕಿಟಕಿಯ ಸಜ್ಜಾ ಮೇಲೆ ಕುಳಿತುಕೊಳ್ತಾಳೆ. ಮೊದಲು ಪೊದೆಯಲ್ಲಿದ್ದ ಹಕೀಂ​ನನ್ನ ಪೊಲೀಸ್ ಅಧಿಕಾರಿ ಶಶಿ ವಶಕ್ಕೆ ಪಡೆಯುತ್ತಾರೆ.

ಡೋರ್ ಒಡೆದು ಆರೋಪಿಗಳ ಬಂಧನ
ವಶಕ್ಕೆ ಪಡೆದ ಶಶಿ ಮೂಲಕ ಉಳಿದ ಆರೋಪಿಗಳ ಫೋಟೋ ತೋರಿಸಿ ಉಳಿದವರು ಕಟ್ಟದಲ್ಲಿರುವ ಬಗ್ಗೆ ಕೇಳ್ತಾರೆ. ರಿಧಾಯ್, ಸಾಗರ್ & ಮಹಮ್ಮದ್ ಇರುವ ಬಗ್ಗೆ ತಿಳಿಯುತ್ತದೆ. ಆದರೆ ಆರೋಪಿಗಳು ಒಳಗಿನಿಂದ ಲಾಕ್ ಮಾಡಿಕೊಳ್ತಾರೆ. ಈ ವೇಳೆ ಸಜ್ಜಾ ಮೇಲಿದ್ದ ಯುವತಿಯನ್ನ ಎಸಿಪಿ ಗೌತಮ್ ಹಿಡಿಯುತ್ತಾರೆ. ಆನಂತರ ಡೋರ್ ಒಡೆದು ಉಳಿದ ಆರೋಪಿಗಳನ್ನ ವಶಕ್ಕೆ ಪಡೆಯುತ್ತಾರೆ.

ಆಪರೇಷನ್ ಸಕ್ಸಸ್​
ಆರೋಪಿಗಳನ್ನ ಬಂಧಿಸಿದ ಸಿಸಿಬಿಯ ವಿಶೇಷ ತಂಡ, ತೀವ್ರ ವಿಚಾರಣೆಗೆ ಒಳಪಡಿಸಿತು. ನಂತರ ಆರೋಪಿಗಳಿ ಕೃತ್ಯವೆಸಗಿದ್ದ ಜಾಗಕ್ಕೆ ತಾವೇ ಕರೆದೊಯ್ದಿದ್ದರು. ಅಲ್ಲಿಂದ ಆರೋಪಿಗಳನ್ನ ನೇರವಾಗಿ ಕೆ ಚನ್ನಸಂದ್ರಕ್ಕೆ ಕರೆದೊಯ್ಯುತ್ತಾರೆ. ಅಲ್ಲಿಂದ ಕನಕನಗರ ಲೇಔಟ್​ನಲ್ಲಿ ಕೃತ್ಯವೆಸಿಗಿದ್ದ ಮನೆಗೆ ಕರೆದೊಯ್ಯುತ್ತಾರೆ. ಅಲ್ಲಿ ವಿಡಿಯೋದಲ್ಲಿದ್ದ ಮನೆಗೂ ಕೃತ್ಯದ ಮನೆಗೂ ಮ್ಯಾಚ್ ಆಗುತ್ತದೆ. ಅಲ್ಲಿಗೆ ಪೊಲೀಸ್ರ ಅಪರೇಷನ್ ಸಂಪೂರ್ಣ ಸಕ್ಸಸ್ ಆಗತ್ತೆ.

ನಂತರ ಸಿಸಿಬಿ ಟೀಂ ಆರೋಪಿಗಳ ಪೂರ್ವ ವಿಭಾಗದ ಪೊಲೀಸ್ರಿಗೆ ಹಸ್ತಾಂತರ ಮಾಡುತ್ತದೆ. ವಿಚಾರಣೆಯನ್ನ ಮುಂದುವರಿಸಿರುವ ಪೊಲೀಸರು, ಸಂತ್ರಸ್ತೆಯನ್ನ ಕರೆಯಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಎಸ್ಕೇಪ್ ಆಗಿರುವ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ವರದಿ: ವಿಷ್ಣುಪ್ರಸಾದ್, ಕ್ರೈಂ ಬ್ಯೂರೋ

The post ಢಾಕಾ ಟು ಅಸ್ಸಾಂ.. ಬೆಂಗಳೂರಲ್ಲಿ ನಡೆದ ಕಾಮುಕರ ಪೈಶಾಚಿಕ ಕೃತ್ಯದ ಕ್ಲೂ ಸಿಕ್ಕಿದ್ದು ಎಲ್ಲಿಂದ ಗೊತ್ತಾ? appeared first on News First Kannada.

Source: newsfirstlive.com

Source link