ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಹತ್ಯೆಗೈದ ಅಣ್ಣ..! | Muslim man murdered by Hindu friends over friendship with their sister In Jharkhand


ತನ್ನ ತಂಗಿಯೊಂದಿಗೆ ಸ್ನೇಹ ಬೆಳಸಿದ್ದ ಮುಸ್ಲಿಂ ಯುವಕನನ್ನು ಆಕೆಯ ಅಣ್ಣ ಹೊಡೆದು ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ.

ರೂಟು, (ಜಾರ್ಖಂಡ್‌): ಸಹೋದರಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಸ್ಲಿಂ ಯುವಕನ್ನು ಆಕೆಯ ಅಣ್ಣ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ರೂಟು ಜಿಲ್ಲೆಯಲ್ಲಿ ನಡೆದಿದೆ.

ಶಹಬಾಜ್ ಅನ್ಸಾರಿ (19) ಹತ್ಯೆಯಾದ ಯುವಕ. ಆರೋಪಿಗಳನ್ನು ಓಂಪ್ರಕಾಶ್ ಮಹೊತೊ (25) ಮತ್ತು ಸುಶಾಂತ್ ನಾಯಕ್ (25) ಎಂದು ಗುರುತಿಸಲಾಗಿದೆ. ಶಹಬಾಜ್ ಅನ್ಸಾರಿ ಯುವತಿಯೊಂದಿಗೆ ಸ್ನೇಹ ಬೆಳಸಿದ್ದ, ಇದು ಆಕೆಯ ಅಣ್ಣನಿಗೆ ಇಷ್ಟವಿರಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯ ಅಣ್ಣ ಸುಶಾಂತ್ ನಾಯಕ್, ತನ್ನ ಸ್ನೇಹಿತನೊಂದಿಗೆ ಸೇರಿ ಕೊಂಡು ಶಹಬಾಜ್ ಅನ್ಸಾರಿನನ್ನು ಕೊಲೆ ಮಾಡಿದ್ದಾನೆ.

TV9 Kannada


Leave a Reply

Your email address will not be published.