ಟೀಮ್​​ ಇಂಡಿಯಾ, ವಿಶ್ವ ಕ್ರಿಕೆಟ್​ನ ಬಲಿಷ್ಟ ತಂಡಗಳಲ್ಲಿ ಒಂದು​.. ತಂಡದ ಸಕ್ಸಸ್​​ಗೆ ಆಟಗಾರರು ಪಠಿಸುವ ಒಗ್ಗಟ್ಟಿನ ಮಂತ್ರವೇ, ಕಾರಣ. ಆದ್ರೆ ಅದಕ್ಕೆ ಮೇಜರ್​ ರೀಸನ್​, ಟೀಮ್​ ಇಂಡಿಯಾ ಸೆಲೆಕ್ಟರ್ಸ್​​.!! ಹೌದು..! ಟ್ಯಾಲೆಂಟೆಡ್​​ ಆ್ಯಂಡ್​​​ ಫ್ಯೂಚರ್​​ ಸ್ಟಾರ್​​ ಪ್ಲೇಯರ್​​ಗಳ ಭವಿಷ್ಯ ನಿರ್ಧರಿಸುವವರೇ, ಸೆಲೆಕ್ಷನ್​ ಕಮಿಟಿ ಸದಸ್ಯರು. ಇವರ ಒಂದು ಖಡಕ್​ ನಿರ್ಧಾರದಿಂದ ಅದೆಷ್ಟೋ ಕ್ರಿಕೆಟಿಗರು, ಇಂದು ವರ್ಲ್ಡ್ಸ್​ ಬೆಸ್ಟ್​​ ಎನಿಸಿಕೊಂಡಿದ್ರೆ, ಇನ್ನು ಎಷ್ಟೋ ಪ್ರತಿಭಾನ್ವಿತ ಪ್ಲೇಯರ್​​ಗಳ​ ಭವಿಷ್ಯ ಅತಂತ್ರವಾಗಿದೆ. ಇಷ್ಟಕ್ಕೂ ಹೇಗೆಲ್ಲಾ ನಡೀತಿತ್ತು ಗೊತ್ತಾ ಟೀಮ್​ ಸೆಲೆಕ್ಷನ್​​..?

ತೆರೆಮರೆಯಲ್ಲಿ ನಡೆಯುತ್ತೆ ಪ್ಲೇಯರ್ಸ್​ ಸೆಲೆಕ್ಷನ್​ ಕಸರತ್ತು..!
ಟೀಮ್​ ಇಂಡಿಯಾದ ಪ್ರತಿಯೊಂದು ಸರಣಿಗೂ ಆಯ್ಕೆ ಸಮಿತಿ, ತೀವ್ರತರ ಮಟ್ಟದಲ್ಲಿ ಚರ್ಚೆ ನಡೆಸುತ್ತೆ. ಪ್ರತಿಸ್ಫರ್ಧಿ ತಂಡದ ವಿರುದ್ಧ ಬಲಿಷ್ಠ ತಂಡವನ್ನ ಕಟ್ಟೋಕೆ ಭಾರೀ, ಸಿದ್ಧತೆ ನಡೆಸುತ್ತೆ. ಪಿಚ್​​​ಗೆ ತಕ್ಕಂತೆ ಹೊಂದಿಕೊಳ್ಳುವ ಆಟಗಾರರು, ಫಾರ್ಮ್​​ನಲ್ಲಿ ಇಲ್ಲದ ಹಾಗೂ ಇಂಜುರಿಗೆ ಒಳಗಾದವರನ್ನ ಕೈ ಬಿಡೋದು..!!! ಹೀಗೆ ಹತ್ತು ಹಲವು ಲೆಕ್ಕಾಚಾರಗಳನ್ನು ಹಾಕಿಯೇ ಆಯ್ಕೆ ಸಮಿತಿ, ಎಚ್ಚರಿಕೆಯ ಹೆಜ್ಜೆ ಇಡುತ್ತೆ. ಇಂತಹ ಸಂದರ್ಭದಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ, ತಂಡದ ಕೋಚ್ ಮತ್ತು ಕ್ಯಾಪ್ಟನ್​ ಪಾತ್ರ, ಅತೀ ಮುಖ್ಯವಾಗಿರುತ್ತೆ. ಹಾಗಾಗಿ ತೆರೆಮರೆಯಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತೆ.

ಆದರೆ ಆಟಗಾರರ ವಿಷಯದಲ್ಲಿ ಅಧ್ಯಕ್ಷ, ಕೋಚ್​ ಮತ್ತು ಕ್ಯಾಪ್ಟನ್​ ನಡುವೆ ಭಿನ್ನಾಭಿಪ್ರಾಯ ಕೂಡ ಮೂಡುತ್ತೆ. ಅಂತಹ ಸಮಯದಲ್ಲಿ ಮೂವರು, ಒಬ್ಬೊಬ್ಬ ಆಟಗಾರನ ಮೇಲೆ ಒಲವು ತೋರುತ್ತಾರೆ. ಇಂತಹದ್ದೇ ವಿಚಾರ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಕೋಚ್​ ರವಿ ಶಾಸ್ತ್ರಿ ಮತ್ತು ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್​ಕೆ ಪ್ರಸಾದ್ ಮಧ್ಯೆ ಜೋರು ವಾಗ್ವಾದ ನಡೆಯುತ್ತಿತ್ತಂತೆ. ಅದು ಹೇಗೆ ಅಂದರೆ ಸಭೆ ಮುಗಿದ ಬಳಿಕ ಒಬ್ಬರ ಮುಖ, ಇನ್ನೊಬ್ಬರು ನೋಡಿಕೊಳ್ಳದೇ ಹೋಗುವಷ್ಟರ ಮಟ್ಟಿಗೆ. ಯೆಸ್​…ಹೀಗಂತ ಎಂ.ಎಸ್.​​ಕೆ ಪ್ರಸಾದ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಬಲಿಷ್ಠ ತಂಡ ರಚಿಸುವ ಸಂದರ್ಭದಲ್ಲಿ ನಾನು, ಕೋಚ್​​ ಮತ್ತು ಕ್ಯಾಪ್ಟನ್​​ ಸಖತ್​ ಆರ್ಗ್ಯೂಮೆಂಟ್​ ಮಾಡ್ತಿದ್ವಿ. ಒಬ್ಬೊಬ್ಬರು ಒಂದೊಂದು ರೀತಿಯ ತಂಡ ಕಟ್ಟೊಕೆ ಚರ್ಚೆ ನಡೆಸ್ತಿದ್ವಿ. ಇದು ತೀರಾ ಅತಿರೇಕಕ್ಕೆ ಹೋಗ್ತಿತ್ತು. ಸಭೆ ಮುಗಿದ ಬಳಿಕ ಒಬ್ಬರನ್ನೊಬ್ಬರು ಮುಖ ನೋಡಿಕೊಳ್ಳದೆಯೇ ಹೊರ ಹೋಗುತ್ತಿದ್ವಿ. ಆದರೆ ಮರುದಿನವೇ ಸಭೆಯಲ್ಲಿ, ನಡೆದದ್ದನ್ನೆಲ್ಲಾ ಮರೆತು ಭೇಟಿಯಾಗಿ ಮಾತನಾಡುತ್ತಿದ್ವಿ. ಈ ರೀತಿ ಎಷ್ಟೋ ಸಲ ಆಗಿದೆ’ -ಎಂ.ಎಸ್​​.ಕೆ ಪ್ರಸಾದ್​, ಮಾಜಿ ಸೆಲೆಕ್ಟರ್​

2019ರ ವಿಶ್ವಕಪ್​ ಆಯ್ಕೆಯಲ್ಲೂ ನಡೆದಿತ್ತು ವಾದ-ವಿವಾದ..!

ಭಾರತದ ಮಾಜಿ ಸೆಲೆಕ್ಟರ್​​​​ MSK ಪ್ರಸಾದ್​​,​ ತಮ್ಮ ಅಧಿಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಆಗಾಗ್ಗೆ ಟೀಕೆಗೆ ಒಳಗಾಗಿದ್ದಾರೆ. ಅದರಲ್ಲಿ ಒಂದು, 2019ರ ವಿಶ್ವಕಪ್ ತಂಡದಲ್ಲಿ ಅಂಬಟಿ ರಾಯುಡು ಬದಲಿಗೆ, ವಿಜಯ್ ಶಂಕರ್​​ರನ್ನ ಆಯ್ಕೆ ಮಾಡಿದ್ದು. ಈ ವಿಚಾರವಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಹೆಡ್​ ಕೋಚ್​​​ ರವಿ ಶಾಸ್ತ್ರಿ ಅವರೊಂದಿಗೆ ಬಾರಿ ವಾದ ನಡೆಸಿದ್ರು. 2017ರ ಚಾಂಪಿಯನ್ಸ್​ ಟ್ರೋಫಿಯ ನಂತರ ಯುವರಾಜ್​ ಸ್ಥಾನಕ್ಕೆ, ಆಲ್​​ರೌಂಡರ್​​ ವಿಜಯ್ ​ಶಂಕರ್​ಗೆ ಮಣೆ ಹಾಕಿ, ಆತನೊಬ್ಬ ತ್ರಿಡಿ ಪ್ಲೇಯರ್​ ಎಂದು MSK ಕರೆದಿದ್ದರು. ಆಗ ರಾಯುಡು, ವಿಶ್ವಕಪ್​ ನೋಡಲು 3D ಗ್ಲಾಸ್​ ಖರಿದಿಸಿದ್ದೇನೆ ಅಂತ ಪರೋಕ್ಷವಾಗಿ ಜಾಡಿಸಿದ್ದರು.

ನಾನೊಬ್ಬ ಮ್ಯಾನೇಜ್​ಮೆಂಟ್​​ ವಿದ್ಯಾರ್ಥಿ. ತಂಡವನ್ನ ಹೇಗೆ ನಿರ್ವಹಿಸಬೇಕೆಂಬುದರ ಕುರಿತು, ನನಗೆ ಅರಿವಿದೆ. ಸುಖಾಸುಮ್ಮನೆ ಜನರು ದೂಷಿಸಲೆಂದು ಕೆಲಸ ಮಾಡಲು ಸಾಧ್ಯವೇ..? ಆಯ್ಕೆ ಸಮಿತಿ ಎಂಬುದು ನನಗೆ ಕುಟುಂಬವಿದ್ದಂತೆ. ನನ್ನ ಕುಟುಂಬವನ್ನ ಹಾಳು ಮಾಡಿಕೊಳ್ಳಲು ಇಷ್ಟಪಡುತ್ತೇನೆಯೇ..? ವಿರಾಟ್ ಮತ್ತು ರವಿ ಅವರಿಗೆ ತಿಳಿದಿರುವ ವಿಷಯಗಳನ್ನ ಹಂಚಿಕೊಳ್ತಿದ್ರು. ಈ ಸಂದರ್ಭದಲ್ಲಿ ನಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗುತ್ತಿತ್ತು -ಎಂಎಸ್​​ಕೆ ಪ್ರಸಾದ್​, ಮಾಜಿ ಸೆಲೆಕ್ಟರ್​

ಪಂತ್​​ನನ್ನ ಸೆಲೆಕ್ಟ್​ ಮಾಡಿದ್ದಕ್ಕೆ ಹೆಚ್ಚು ಟೀಕಿಸಿದ್ರು..!

ಬಾರ್ಡರ್​-ಗವಾಸ್ಕರ್​ ಟ್ರೋಫಿಗೆ, ರಿಷಭ್​ಪಂತ್​ ಆಯ್ಕೆ ಮಾಡಿದ್ದಕ್ಕೆ ವಿವಾದಗಳಿಗೆ ಒಳಪಟ್ಟೆ.​ ಪಂತ್​ ಟೆಸ್ಟ್​ ತಂಡದ ಆಟಗಾರನಲ್ಲ.!! ಆತನನ್ನ ಆಯ್ಕೆ ಮಾಡಿದ್ದು ದೊಡ್ಡ ತಪ್ಪು. ಹಾಗೆಯೇ ಧೋನಿಗೆ ಉತ್ತರಾಧಿಕಾರಿ ಅನ್ನೋದು ಕೂಡ, ಕಲ್ಪನೆ ಎಂದೆಲ್ಲಾ ಮಾತನಾಡಿದ್ರು. ಆದರೀಗ ನೋಡಿ ಮಹತ್ವದ ಬಾರ್ಡರ್​ ಗವಾಸ್ಕರ್​ ಟ್ರೋಫಿ ಮತ್ತು ಇಂಗ್ಲೆಂಡ್​ ಸರಣಿಯಲ್ಲಿ ತಾನೇನು ಅನ್ನೋದನ್ನ ಪ್ರೂವ್​ ಮಾಡಿದ್ದಾನೆ. ಈಗ ಪಂತ್​​ನನ್ನ ಆಡಿಸಿದ್ದೇ ಒಳ್ಳೇದಾಯ್ತು ಅನ್ನೋ ಹೇಳಿಕೆಗಳನ್ನ ನೀಡ್ತಿದ್ದಾರೆ. ಜೊತೆಗೆ ಹಾರ್ದಿಕ್​ ಪಾಂಡ್ಯ ವಿಷಯದಲ್ಲೂ ಇದೇ ಆಗಿತ್ತು. ಪಾಂಡ್ಯರನ್ನ ಸೆಲೆಕ್ಟ್​ ಮಾಡೋವಾಗ ಬಾಯಿಗೆ ಬಂದಂತೆ ಮಾತನಾಡಿದವ್ರು, ಈಗ ಬೆಸ್ಟ್​ ಫಿನಿಷರ್​ ಅಂತಿದ್ದಾರೆ ಅಂದ್ರು MSK ಪ್ರಸಾದ್​ ಹೇಳಿದ್ದಾರೆ.

ಕೇಳಿದ್ರಲ್ಲ..! ಚರ್ಚೆ ನಡೆಯೋವಾಗ ಮತ್ತು ಚರ್ಚೆ ನಡೆದ್ಮೇಲೆ ಏನಾಗುತ್ತೆ ಅನ್ನೋದನ್ನ.!!! ಇದು ಕೇವಲ ವಿರಾಟ್​ ಎಂಎಸ್​​ಕೆ ಪ್ರಸಾದ್ ​- ಕೊಹ್ಲಿ – ರವಿ ಶಾಸ್ತ್ರಿ ನಡುವೆ ನಡೀತಿದ್ದ ವಾದ-ವಿವಾದಗಳು ಮಾತ್ರವಲ್ಲ..!!! ಈ ಹಿಂದೆ ಕೂಡ ಇಂತಹ ಅನೇಕ ಘಟನೆಗಳು ಸಂಭವಿಸಿವೆ. ಆದರೆ ಎಂಎಸ್​​ಕೆ ಪ್ರಸಾದ್​ರಂತೆ ಯಾರೂ, ಬಹಿರಂಗಪಡಿಸಿಲ್ಲ ಎನ್ನಲಾಗ್ತಿದೆ. ಆಟಗಾರರ ಆಯ್ಕೆ ಸಂದರ್ಭದಲ್ಲಿ ಕೋಚ್​​, ಕ್ಯಾಪ್ಟನ್​, ಆಯ್ಕೆ ಸಮಿತಿ ಅಧ್ಯಕ್ಷರ ನಡುವೆ ಸಾಕಷ್ಟು ಬಾರಿ​ ಮೇಲಿನಂತೆ ಆರ್ಗ್ಯೂಮೆಂಟ್​ ನಡೆದಿವೆ. ಆದರೆ ಈ ವಾದರಿಂದ ಎಷ್ಟೋ ಕ್ರಿಕೆಟಿಗರು ಭವಿಷ್ಯ ಕಟ್ಟಿಕೊಂಡಿರೋದಂತೂ ಸುಳ್ಳಲ್ಲ.

The post ತಂಡದ ಆಯ್ಕೆ ವೇಳೆ ಕೊಹ್ಲಿ, ಶಾಸ್ತ್ರಿ ಜೊತೆ ಸೆಲೆಕ್ಟರ್ಸ್​ ಜಗಳವಾಡಿದ್ದೇಕೆ..? appeared first on News First Kannada.

Source: newsfirstlive.com

Source link