ಬಿಗ್‍ಬಾಸ್ ಮನೆಯಲ್ಲಿ ಗ್ರೂಪ್ ಟಾಸ್ಕ್ ಜಿದ್ದಾಜಿದ್ದಿನಲ್ಲಿ ನಡೆಯುತ್ತಿದೆ. ಮಂಜು ಮತ್ತು ಅರವಿಂದ್ ಅವರು ಎರಡು ತಂಡದ ಕ್ಯಾಪ್ಟನ್‍ಗಳಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಈ ನಡುವೆ ಅರವಿಂದ್ ತಮ್ಮ ತಂಡದ ಸದಸ್ಯರೊಂದಿಗೆ ಮಾತನಾಡುತ್ತಿರುವಾಗ ಗಳಗಳನೆ ಅತ್ತಿದ್ದಾರೆ.

ಅರವಿಂದ್ ತಂಡದ ಸದಸ್ಯೆ ದಿವ್ಯಾ ಉರುಡುಗ, ಗ್ರೂಪ್ ಟಾಸ್ಕ್‍ನಲ್ಲಿ ನಾವು ಜಯಗಳಿಸುವ ಸಾಕಷ್ಟು ಅವಕಾಶಗಳಿದ್ದರೂ ಕೂಡ ನಾವು ಸೋತಿದ್ದು ನನಗೆ ಬೇಸರವಾಯಿತು. ಅದೇ ರೀತಿ ಅರವಿಂದ್ ಮತ್ತು ನಿಧಿ ಜಗಳದಲ್ಲಿ ಅರವಿಂದ್ ನಿಧಿಗೆ ನೀನು ಮುಚ್ಚುಕೊಂಡು ಹೋಗು ಅಂದಿದ್ದು ನನಗೆ ತಪ್ಪು ಎಂದು ಅನಿಸಿತು. ನಾವು ಗೆಲ್ಲುವಂತಹ ಟಾಸ್ಕ್ ಗಳನ್ನು ಸೋತಿದ್ದೇವೆ. ನಮ್ಮಲ್ಲಿ ಹೊಂದಾಣಿಕೆಯ ಕೊರತೆ ಕಾಡುತ್ತಿದೆ ಎಂದು ನನಗೆ ಅನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವೈಷ್ಣವಿ, ನಾವು ಗೆಲ್ಲುತ್ತೇವೆ ಎಂದು ಗೊತ್ತಿದ್ದರೂ ಕೂಡ ನಾವು ಸೋತಿದ್ದು ಬೇಸರವಾಗಿದೆ. ಮುಂದಿನ ಟಾಸ್ಕ್ ಗಳಲ್ಲಿ ಇದನ್ನು ಮರುಕಳಿಸುವುದು ಬೇಡ ಎಂದರು. ಇದಕ್ಕೆ ಶಮಂತ್ ಮತ್ತು ಇತರ ಸದಸ್ಯರು ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ನಾ ನಿನ್ನ ಮರೆಯಲಾರೆ ರೀತಿ ತೆರೆಮೇಲೆ ಬರಲಿದ್ಯಾಂತೆ ಅರ್ವಿಯಾ ಸಿನಿಮಾ

ವೈಷ್ಣವಿ ಮಾತಿನ ಬಳಿಕ ಮತ್ತೆ ಮಾತಿಗಿಳಿದ ದಿವ್ಯಾ, ನಿಧಿ ಬಗ್ಗೆ ಆ ಸಮಯದಲ್ಲಿ ಕೆಪಿ ಹೇಳಿದ ಪದ ನನಗೆ ಸರಿ ಅನಿಸಲಿಲ್ಲ ಎಂದರು. ಇದಕ್ಕೆ ಸಂಬರಗಿ, ಕೆಪಿ ಜೋಕ್ ಮಾಡಿದಾಗ ಹಲವು ಬಾರಿ ಮುಚ್ಚುಕೊಂಡು ಇರು ಅಂತ ಹೇಳಿದ್ದಾನೆ. ನಾನು ಹೇಳಿದ್ದೇನೆ ಇದು ಸಾಮಾನ್ಯವಾಗಿ ಮಾತಿನಲ್ಲಿ ಬರುವ ಪದ ಎಂದಿದ್ದಾರೆ. ಇದನ್ನು ಕೇಳಿದ ದಿವ್ಯಾ ಅದು ಬಿಡಿ ಗ್ರೂಪ್ ಟಾಸ್ಕ್ ಸಮಯದಲ್ಲಿ ಆ ಟೈಮ್‍ಗೆ ಅರವಿಂದ್ ಹೇಳಿದ ಮಾತು ಸರಿಯಲ್ಲ ಎಂದರು. ಈ ಮಾತನ್ನು ಕೇಳಿಸಿಕೊಂಡ ಅರವಿಂದ್ ಗಳಗಳನೆ ಅತ್ತರು ಮತ್ತೆ ದಿವ್ಯಾ ಅವರನ್ನು ಸಮಾಧಾನ ಪಡಿಸಿದರು.

ಇದಾದ ಬಳಿಕ ರಿಂಗರಣ ಆಟದಲ್ಲಿ ತಂಡ ಮಾಡಿದ ತಪ್ಪನ್ನು ಹೇಳಿಕೊಂಡು ಪರಸ್ಪರ ಚರ್ಚೆ ನಡೆಸಿದರು. ಮತ್ತೆ ತಂಡದ ಸದಸ್ಯರು ಇದನೆಲ್ಲ ಬಿಟ್ಟುಬಿಡಿ ಮುಂದಿನ ಟಾಸ್ಕ್‍ನಲ್ಲಿ ಉತ್ತಮವಾಗಿ ಆಡಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

The post ತಂಡದ ಸದಸ್ಯರ ಮುಂದೆ ಗಳಗಳನೆ ಅತ್ತ ಅರವಿಂದ್ appeared first on Public TV.

Source: publictv.in

Source link