ಬೆಂಗಳೂರು: ಐಪಿಎಸ್​ ಅಧಿಕಾರಿ ವರ್ತಿಕಾ ಕಟಿಯಾರ್ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಡಿಜಿ&ಐಜಿಪಿ ಪ್ರವೀಣ್ ಸೂದ್​​ಗೆ ದೂರು ನೀಡಲಾಗಿದೆ.

ವರ್ತಿಕಾ ಅವರು ತನ್ನ ಪತಿಗೆ ಮಗುವನ್ನ ನೋಡಲು ಬಿಡ್ತಿಲ್ಲ ಎಂದು ಆರೋಪಿಸಲಾಗಿದೆ. ತನ್ನ ಅಧಿಕಾರ ಬಳಸಿಕೊಂಡು ವರ್ತಿಕಾ ಕಟಿಯಾರ್ ತಮ್ಮ ಪತಿಗೆ ಮಗು ನೋಡದಂತೆ ತಡೆದಿದ್ದಾರೆ.. ಹೀಗಾಗಿ ಅವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಐಎಫ್​ಎಸ್​ ಅಧಿಕಾರಿಯಾಗಿರುವ ವರ್ತಿಕಾ ಅವರ ಪತಿ ನಿತಿನ್ ಶುಭಾಶ್, ತನಗೆ ತನ್ನ ಮಗುವನ್ನ ನೋಡಲು ಬಿಡ್ತಿಲ್ಲವೆಂದು ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮೊರೆ ಹೋಗಿದ್ದರು ಎನ್ನಲಾಗಿದೆ. ಈ ಹಿಂದೆ ನಿತಿನ್ ಅವರ ವಿರುದ್ಧ ವರ್ತಿಕಾ ಕೇಸ್ ದಾಖಲಿಸಿದ್ದರು. ₹35 ಲಕ್ಷ ಹಣ ಕೊಡುವಂತೆ ಹಲ್ಲೆ ಮಾಡಿದ್ದಾರೆ. ನನ್ನ ಸಂಬಳದ ಹಣವನ್ನೂ ಪಡೆದುಕೊಂಡಿದ್ದಾರೆ. ಪತಿಯ ಮನೆಯವರೂ ಸಹ ಹಿಂಸೆ ನೀಡಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಿತಿನ್ ದೆಹಲಿಯಲ್ಲಿ ವಾಸ ಮಾಡೋದ್ರಿಂದ ಕೇಸ್ ದೆಹಲಿಗೆ ವರ್ಗಾವಣೆಯಾಗಿತ್ತು.

ಸದ್ಯ ನಿತಿನ್ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ಮೊರೆ ಹೋದ ಹಿನ್ನೆಲೆ ದೂರು ಪರಿಶೀಲಿಸಿದ ಆಯೋಗ ಡಿಜಿ&ಐಜಿಪಿಗೆ ದೂರು ನೀಡಿದೆ.

The post ತಂದೆಗೆ ಮಗುವನ್ನು ನೋಡಲು ಬಿಡದ IPS ಅಧಿಕಾರಿ..? ಪತಿಯಿಂದ ಆರೋಪ.. ಡಿಜಿಪಿಗೆ ದೂರು appeared first on News First Kannada.

Source: newsfirstlive.com

Source link