ಭಾರತದಲ್ಲಿ, ಕೊರೊನಾ ಎರಡನೇ ಅಲೆಯ ಸುನಾಮಿ ತುಂಬಾ ಜನರ ಜೀವಕ್ಕೆ ಹೊಡೆತ ಕೊಟ್ಟಿರೋದು ಸತ್ಯ. ಜರಿಗೆ ಜೀವ ಇದ್ದರೆ ಜೀವನ ಅನ್ನೋ ಸತ್ಯದಲ್ಲಿ ಜೀವಿಸುವಂತೆ ಮಾಡಿರೋದು ಇದೇ ಕೊರೊನಾ. ಇದೀಗ, ಇಡೀ ದೇಶದಲ್ಲಿ ಕೊರೊನಾ ಹಾವಳಿಯಿದೆ, ಇದರಿಂದ ನಮ್ಮ ದೇಶದಲ್ಲೂ ಕಟ್ಟು ನಿಟ್ಟಿನ ಕ್ರಮಗಳೊಂದಿಗೆ ಲಾಕ್​ ಡೌನ್​ ಮಾಡಲಾಗಿದ್ದು, ಜನ ಮನೆಯಲ್ಲೆ ಇದ್ದಾರೆ. ಅದ್ರಲ್ಲೂ, ವೈದ್ಯರು, ನರ್ಸ್​ ಎಲ್ಲರೂ ನಮಗೆ ಮನೆಯೊಳಗೆ ಇರೋದಕ್ಕೆ ಮನವಿ ಮಾಡ್ತಿರೋದನ್ನ ನಾವು ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಅಂತ ನೋಡ್ತೀವಿ. ಅಷ್ಟೇ ಅಲ್ಲ, ಅದೆಷ್ಟೋ ವೈದ್ಯರ ಕುಟುಂಬವೂ ಈ ಹೆಮ್ಮಾರಿ ಕೊರೊನಾದ ಕಂಟಕಕ್ಕೆ ಸಿಲುಕಿರೋದು ನೋಡಿದ್ದೀವಿ. ಇದೀಗ, ಅಂಥದ್ದೇ ಒಂದ ಸ್ಟೋರಿ ಹೇಲ್ತೀವಿ ಕೇಳಿ.

450 ಕಿಮಿ ದೂರಕ್ಕೆ ಪ್ರಯಾಣಿಸಿದ ಮಗ
25 ವರ್ಷದ ಡಾಕ್ಟರ್ ಇಕ್ಬಾಲ್​​ ಅನ್ನೋರು, ತಮ್ಮ ತಂದೆಯನ್ನ ಉಳಿಸೋದಕ್ಕೆ ಬಿಹಾರದಿಂದ ಲಖ್​ನೌನ ಆಸ್ಪತ್ರೆಗೆ ಕರೆದೋಯ್ದಿದ್ದಾರೆ. 65 ವರ್ಷದ ಬ್ಯುಜಿನೆಸ್​ ಮ್ಯಾನ್​ ಮೊಹಮ್ಮದ್​ ಹಮಿಮ್​ಗೆ ಶುಗರ್​, ಬಿಪಿ ಎಲ್ಲವೂ ಇತ್ತು. ಜೊತೆಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿದ್ದಾಗ, ಅವರ ಆಕ್ಸಿಜನ್​ ಲೆವೆಲ್ 75​%ಗೆ ಇಳಿದಿತ್ತು. ಹೀಗಿರುವಾಗ, ಬಿಹಾರದ ಸುಮಾರು ಆಸ್ಪತ್ರೆಗೆ ಸೇರಿಸಲು ಪ್ರಯತ್ನ ಪಡ್ತಾರೆ ಆದ್ರೆ, ಅದು ಆಗೋದಿಲ್ಲ, ಹೀಗಾಗಿ, ಡಾಕ್ಟರ್​ ತಮ್ಮ ತಂದೆಯನ್ನ ಬಿಹಾರದಿಂದ 450ಕಿಮಿ ದೂರದವರೆಗೆ ಲಖ್​ನೌನ ಡಿಆರ್​ಡಿಓ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ. ಅಲ್ಲಿ, ಅವರ ತಂದೆಯ ಪ್ರಾಣವನ್ನ ಡಿಆರ್​ಡಿಓ ಆಸ್ಪತ್ರೆಯ ವೈದ್ಯರು ಕಾಪಾಡಿದ್ದಾರೆ.

The post ತಂದೆಯನ್ನ ಉಳಿಸಿಕೊಳ್ಳೋದಕ್ಕೆ 450 ಕಿ.ಮೀ ದೂರ ಕರೆದುಕೊಂಡು ಹೋದ ಮಗ appeared first on News First Kannada.

Source: newsfirstlive.com

Source link