ನಿಖಿಲ್ ಕುಮಾರ್ ಸ್ವಾಮಿ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕದ ಶುಭ ಸುದ್ದಿ. ಕಳೆದ ವರ್ಷ ಏಪ್ರಿಲ್ 17ರಂದು ಮೊದಲ ಲಾಕ್ ಡೌನ್ ಸಂದರ್ಭದಲ್ಲಿ ಸರಳವಾಗಿ ರೇವತಿಯವರನ್ನ ಬಿಡದಿಯ ಫಾರ್ಮ್ ಹೌಸ್​​ನಲ್ಲಿ ವಿವಾಹವಾದ ನಿಖಿಲ್ ಕುಮಾರ್
ಆಗಾಗ ಸಿನಿಮಾ ಸುದ್ದಿ, ರಾಜಕೀಯ ಸುದ್ದಿಗಳ ಅಪ್​​ಡೇಟ್ಸ್​​ ಜೊತೆಗೆ ತಮ್ಮ ಧರ್ಮಪತ್ನಿಯ ಜೊತೆಯಲ್ಲಿರುವ ಫೋಟೋಸ್​ಗಳನ್ನ ಹಂಚಿ ಸಂತೋಷ ಪಡುತ್ತಿರುತ್ತಾರೆ.

ಈಗ ಸ್ಯಾಂಡಲ್​ವುಡ್ ಯುವರಾಜನ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಹೊರ ಬಂದಿದೆ. ಅದೇನಂದ್ರೆ ನಿಖಿಲ್ ಮತ್ತು ರೇವತಿ ಅಪ್ಪ-ಅಮ್ಮ ಆಗುವುದರಲ್ಲಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಯವರು ಅಜ್ಜನಾಗುತ್ತಿದ್ದಾರೆ.

ಹೌದು, ನಿಖಿಲ್ ಹಾಗೂ ರೇವತಿ ಕಲ್ಯಾಣ ಜೀವನಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ. ರೇವತಿ ನಿಖಿಲ್ ಕುಮಾರ್ ಇದೀಗ ಐದು ತಿಂಗಳ ಗರ್ಭಿಣಿ ಎನ್ನಲಾಗಿದೆ. ರೇವತಿಯವರ ಜನ್ಮದಿನದ ಪ್ರಯುಕ್ತವಾಗಿ ಬಿಡದಿಯ ಫಾರ್ಮ್​​​ ಹೌಸ್​ನಲ್ಲಿ ಬಡವರಿಗೆ, ನಿರಾಶ್ರಿತರಿಗೆ ಬಟ್ಟೆ ಮತ್ತು ಸಿಹಿಊಟವನ್ನ ಬಡಿಸಿದ್ದಾರೆ. ಜೊತೆಗೆ ನಿಖಿಲ್ ಕುಮಾರ್ ಮನೆಗೆ ಶೀಘ್ರದಲ್ಲೇ ಹೊಸ ಅತಿಥಿಯ ಆಗಮನವಾಗೋ ಶುಭ ಸುದ್ದಿಯನ್ನ ಸದ್ದಿಲ್ಲದೇ ಸಾರಿದ್ದಾರೆ. ಈ ವಿಚಾರವನ್ನ ಸೂಕ್ತ ಸಮಯದಲ್ಲಿ ತನ್ನ ಅಭಿಮಾನಿಗಳಿಗೆ ಹೇಳಬೇಕು ಎಂದುಕೊಂಡಿದ್ದ ನಿಖಿಲ್ ಕುಮಾರ್ ಸ್ವಾಮಿಯವರ ಪ್ಲಾನ್ ಉಲ್ಟಾ ಆಗಿದೆ. ತನ್ನ ಪತ್ನಿಯ ಜನ್ಮ ದಿನದಂದೇ ಈ ಶುಭ ಸುದ್ದಿ ಹೊರ ಬಂದಿದೆ.

The post ತಂದೆಯಾಗ್ತಿದ್ದಾರೆ ನಿಖಿಲ್​ ಕುಮಾರಸ್ವಾಮಿ.. ಪತ್ನಿಯ ಜನ್ಮದಿನದಂದು ಹೊರ ಬಿತ್ತು ಗುಡ್​ ನ್ಯೂಸ್​ appeared first on News First Kannada.

Source: newsfirstlive.com

Source link