ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಪತ್ನಿ ಜೊತೆ ಕಾಲ ಕಳೆಯುತ್ತಾ ಇತ್ತ ರಾಜಕೀಯದಲ್ಲಿಯೂ ಬ್ಯುಸಿಯಾಗಿದ್ದ ನಟ ನಿಖಿಲ್ ಕುಮಾರಸ್ವಾಮಿ ಇದೀಗ ಮತ್ತೊಂದು ಸಿಹಿ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಿಖಿಲ್, ನಿಮ್ಮ ಜೊತೆ ಸಂತೋಷದ ವಿಚಾರ ಹಂಚಿಕೊಳ್ಳುತ್ತಿದ್ದೇನೆ. ಕೆವಿಎಸ್ ಬ್ಯಾನರ್ ಅಡಿಯಲ್ಲಿ ನನ್ನ ಮುಂದಿನ ಸಿನಿಮಾ ಬರಲಿದೆ. ವೆಂಕಟ್ ನಾರಾಯಣ್ ಸರ್ ಮತ್ತು ಸುಪ್ರೀತಾಗೆ ತುಂಬಾ ಥ್ಯಾಂಕ್ಸ್. ಮಂಜು ನಿರ್ದೇಶನಕ್ಕೆ ಡಿಒಪಿ ಮಾಡುತ್ತಿದ್ದಾರೆ. ಅಜನೀಶ್ ಅವರ ಸಂಗೀತ ಇರಲಿದೆ ಎಂದು ಬರೆದುಕೊಂಡಿದ್ದಾರೆ.

ಆಕ್ಷನ್, ಫ್ಯಾಮಿಲಿ ಕಂಟೆಂಟ್ ಜತೆಗೆ ಸಮಾಜಕ್ಕೆ ಬೇಕಾದ ವಸ್ತುವೂ ಇದೆ. ಮೇಕಿಂಗ್ ವಿಚಾರದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗುವುದಿಲ್ಲ. ಆಗಸ್ಟ್ ಕೊನೇ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಮಾಡಲು ಎಲ್ಲ ರೀತಿಯ ಪ್ಲಾನ್ ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಿಖಿಲ್ ಅವರ ಪಾತ್ರ ಎಂಥದ್ದು, ನಾಯಕಿ, ಯಾರೆಲ್ಲ ನಟಿಸುತ್ತಿದ್ದಾರೆ ಎಂಬುದನ್ನು ರಿವೀಲ್ ಮಾಡುವುದಾಗಿ ನಿರ್ದೇಶಕ ಮಂಜು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ತಮ್ಮ ರಾಮನಗರದ ತೋಟದ ಮನೆಗೆ ನಿಖಿಲ್ ಭೇಟಿ ನೀಡಿದ್ದರು. ಅಲ್ಲಿ ಕರುವಿನ ಜೊತೆಗೆ ಫೋಟೋ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಲ್ಲದೆ ‘ನಮ್ಮ ಮನೆಗೆ ಹೊಸ ಅತಿಥಿಯ ಆಗಮನ’ ಎಂದು ಕ್ಯಾಪ್ಷನ್ ಕೂಡ ನೀಡಿದ್ದರು.

ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಾವು ಅಜ್ಜನಾಗುತ್ತಿರುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು. ಸೊಸೆ ರೇವತಿ 5 ತಿಂಗಳ ಗರ್ಭಿಣಿ ಎಂದು ಸಂತಸದ ಸುದ್ದಿಯನ್ನು ರಿವೀಲ್ ಮಾಡಿದ್ದರು.

The post ತಂದೆಯಾಗ್ತಿರೋ ಖುಷಿ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡಿದ್ರು ನಿಖಿಲ್ appeared first on Public TV.

Source: publictv.in

Source link