ಬೆಂಗಳೂರು: ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಅವರ ತಂದೆ ಮೊಮ್ಮಕ್ಕಳೊಂದಿಗೆ ಆಟ ಆಡುತ್ತಾ ಭಜನೆಯ ಹಾಡೊಂದನ್ನು ಹಾಡಿದ್ದಾರೆ. ಈ ಭಜನೆ ಹಾಡನ್ನು ಕೇಳಿದ ರಾಧಿಕಾ ಪಂಡಿತ್ ಇದು ನನ್ನ ಅಚ್ಚುಮೆಚ್ಚಿನ ಭಜನೆ ಹಾಡಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ರಾಧಿಕಾ ಪಂಡಿತ್ ಅವರ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಮೊಮ್ಮಕಳಾದ ಐರಾ ಮತ್ತು ಯಥರ್ವ್ ಜೊತೆ ಆಟವಾಡುತ್ತ ಪಂಡಿತ್ ಭೀಮಸೇನ ಜೋಶಿ ಅವರು ಹಾಡಿರುವ ಮಾಜೆ ಮಹೇರಾ ಪಂಡಾರಿ… ಎಂದು ಮಧುರವಾಗಿ ಭಜನಾ ಹಾಡನ್ನು ಹಾಡುತ್ತಿದ್ದರು. ಇದನ್ನು ವೀಡಿಯೋ ಮಾಡಿರುವ ರಾಧಿಕಾ ಪಂಡಿತ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನೀವು ನೀಡಿದ ಅಗಾಧ ಪ್ರೀತಿಗೆ ತುಂಬಾ ಧನ್ಯವಾದಗಳು – ಯಶ್

 

View this post on Instagram

 

A post shared by Radhika Pandit (@iamradhikapandit)

ಈ ವೀಡಿಯೋದಲ್ಲಿ ತಂದೆಯ ಕಂಠದಲ್ಲಿ ಭಜನೆ ಗೀತೆಯನ್ನು ಕೇಳಿಸಿಕೊಂಡ ರಾಧಿಕಾ ಇದು ನನಗೆ ತುಂಬಾ ಇಷ್ಟವಾದ ಭಜನಾ ಗೀತೆಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ. ಇತ್ತ ಐರಾ ಮತ್ತು ಯಥರ್ವ್ ಅಜ್ಜ ಹಾಡಿದ ಹಾಡನ್ನು ಕೇಳಿಸಿಕೊಂಡು ತಾವು ಕೂಡ ಹಾಡಲು ಪ್ರಯತ್ನಿಸುತ್ತಿರುವ ದೃಶ್ಯ ತುಂಬಾ ಮುದ್ದಾಗಿ ಕಾಣಿಸುತ್ತಿದೆ.

The post ತಂದೆಯ ಭಜನೆ ಹಾಡಿಗೆ ಮನಸೋತ ರಾಧಿಕಾ ಪಂಡಿತ್ appeared first on Public TV.

Source: publictv.in

Source link