ತಂದೆ ತಾಯಿಯನ್ನು ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ವಂಶೋದ್ಧಾರಕ ಮಗ! ಕುಡಿತದ ಚಟ ಬಿಡಿಸುವುದಾಗಿ ಗದರಿಸಿದ್ದಕ್ಕೆ ಮಗನ ವಿಕೃತ ವರ್ತನೆ | Son bites mother and father in chikkaballapur taluk


ತಂದೆ ತಾಯಿಯನ್ನು ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ವಂಶೋದ್ಧಾರಕ ಮಗ! ಕುಡಿತದ ಚಟ ಬಿಡಿಸುವುದಾಗಿ ಗದರಿಸಿದ್ದಕ್ಕೆ ಮಗನ ವಿಕೃತ ವರ್ತನೆ

ತಂದೆ ತಾಯಿಯನ್ನು ಬಾಯಿಯಿಂದ ಕಚ್ಚಿ ಗಾಯಗೊಳಿಸಿದ ವಂಶೋದ್ಧಾರಕ ಮಗ! ಕುಡಿತದ ಚಟ ಬಿಡಿಸುವುದಾಗಿ ಹೇಳಿದ್ದಕ್ಕೆ ಮಗನ ವಿಕೃತ ವರ್ತನೆ!!

ಮನೆಗೊಬ್ಬ ವಂಶ ಉದ್ದಾರಕ ಇರಲಿ ಅಂತ ಕಷ್ಟ ಪಟ್ಟು ಮಗನನ್ನು ಹೆತ್ತು ಹೊತ್ತು, ವಿದ್ಯೆ ಬುದ್ದಿಯನ್ನು ಕೊಡಿಸಿದ್ದಕ್ಕೆ, ಮದ್ಯ ವ್ಯಸನಿಯಾಗಿರುವ ಮಗ ಮುನಿರಾಜು ಈಗ ವೃದ್ದ ತಂದೆ ತಾಯಿಯನ್ನೆ ಹೊಡೆದು ವಿಕೃತವಾಗಿ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ.

ಮನೆಗೊಬ್ಬ ಮಗ (Son) ಇರಲಿ ಅಂತ ಅದೆಷ್ಟೋ ತಂದೆ ತಾಯಿ ದೇವರು ದಿಂಡಿರು, ಆ ಪೂಜೆ-ಈ ಪೂಜೆ ಅಂತ ಮಾಡಿ, ಕಷ್ಟಪಟ್ಟು ಮಕ್ಕಳನ್ನು ಪಡೆಯುತ್ತಾರೆ. ಆದ್ರೆ ಇಲ್ಲೊಬ್ಬ ಐನಾತಿ ಮಗ… ತಂದೆ ತಾಯಿ ಅನ್ನೋ ಮಮತೆಯೂ ಇಲ್ಲದೆಯೆ ಕುಡಿತದ ಚಟ ಬಿಡಿಸುವುದಾಗಿ ಹೇಳಿದ್ದಕ್ಕೆ ಆಕ್ರೋಶಗೊಂಡು, ವೃದ್ದ ತಂದೆ ತಾಯಿಯನ್ನು (mother and father) ತನ್ನ ಬಾಯಿಯಿಂದ ಕಚ್ಚಿ ಕಚ್ಚಿ ವಿಕೃತವಾಗಿ ಗಾಯಗೊಳಿಸಿದ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ನಡೆದಿದ್ದು ಅಂತೀರಾ? ಈ ವರದಿ ನೋಡಿ

ಹಣ್ಣು ಹಣ್ಣಾಗಿರುವ ಈ ವೃದ್ದ ದಂಪತಿಯನ್ನು ಒಮ್ಮೆ ನೋಡಿ!! ಇವರಲ್ಲಿ ವೃದ್ದನ ಹೆಸರು ಮುನಿಕೃಷ್ಣಪ್ಪ, ವೃದ್ದೆಯ ಹೆಸರು ಜಯಮ್ಮ. ಇಬ್ಬರೂ ಚಿಕ್ಕಬಳ್ಳಾಪುರ ತಾಲೂಕಿನ ಗುಂತಪನಹಳ್ಳಿ ನಿವಾಸಿಗಳು. ಕೂಲಿ ನಾಲಿ ಮಾಡಿ ಸ್ವಾಭಿಮಾನದಿಂದ ಜೀವನ ಸಾಗಿಸುತ್ತಿದ್ದಾರೆ. ಜನ್ಮ ನೀಡಿದ ಮಗನಿಗೆ ಮದುವೆಯನ್ನು ಮಾಡಿ, ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದ್ರೆ ಇವರ ಮಗ ಮುನಿರಾಜು ಎನ್ನುವ ಹೈದ, ಈ ವೃದ್ದ ತಂದೆ ತಾಯಿಗೆ ಕೊಡಬಾರದ ಚಿತ್ರ ಹಿಂಸೆ ಕೊಡ್ತಿದ್ದಾನೆ.

ಗಂಡ ಹೆಂಡಿರ ಜಗಳ 112 ಪೊಲೀಸರು ಬರೋವರೆಗೂ ಮಾತ್ರ! ಇದರಿಂದ ಬಹುತೇಕ ಕ್ರೈಂಗಳು ಸ್ಮಾರ್ಟ್ ಆಗಿ ನಿಯಂತ್ರಣ ಆಗ್ತಿವೆ! ಎಲ್ಲಿ?

ವೃತ್ತಿಯಲ್ಲಿ ಚಾಲಕನಾಗಿರುವ ಮುನಿರಾಜು, ಎರಡು ದಿನಗಳಿಂದ ಕಂಠಪೂರ್ತಿ ಕುಡಿದು ಬಂದು ಮನೆಯಲ್ಲಿ ಹೆಂಡತಿ ಜೊತೆ ಗಲಾಟೆ ಮಾಡ್ತಿದ್ದಾನೆ. ಇದ್ರಿಂದ ಮಗನಿಗೆ ಬುದ್ದಿವಾದ ಹೇಳಿದ್ದ ತಾಯಿ, ನಿನ್ನನ್ನು ಮದ್ಯ ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸ್ತೀವಿ ಅಂತಾ ಹೇಳಿದ್ದಳು. ಇದ್ರಿಂದ ಕುಪಿತಗೊಂಡ ಮುನಿರಾಜ ತನ್ನ ತಾಯಿ ಜಯಮ್ಮಳಿಗೆ ಹೊಡೆದು ಆಕೆಯ ಬಾಯಿ ಮತ್ತು ಕೈಗೆ ಬಾಯಿಯಿಂದ ಕಚ್ಚಿದ್ದಾನೆ.

Son bites mother and father in chikkaballapur

ತಂದೆ ಮುನಿಕೃಷ್ಣಪ್ಪ, ಮಗನಿಗೆ ಎರಡೇಟು ಹಾಕಿದ್ದಕ್ಕೆ ತಂದೆಗೂ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ.

ಇನ್ನು ತಾಯಿಗೆ ಮಗ ಹೊಡೆದು ಕಚ್ಚಿರುವ ಸುದ್ದಿ ತಿಳಿದ ತಂದೆ ಮುನಿಕೃಷ್ಣಪ್ಪ, ಮಗನಿಗೆ ಎರಡೇಟು ಹಾಕಿದ್ದಕ್ಕೆ ತಂದೆಗೂ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ. ಅಸಹಾಯಕಳಾದ ಆರೋಪಿಯ ಪತ್ನಿ, 112 ಪೊಲೀಸ್ ಎಮರ್ಜೆನ್ಸಿಗೆ ಕರೆ ಮಾಡಿದ್ದಕ್ಕೆ ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು, ಅರೆ ಬೆತ್ತಲಾಗಿದ್ದ ಆರೋಪಿ ಮುನಿರಾಜುನನ್ನು ವಶಕ್ಕೆ ಪಡೆದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ಅಪ್ಪ-ಅಮ್ಮನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮನೆಗೊಬ್ಬ ವಂಶ ಉದ್ದಾರಕ ಇರಲಿ ಅಂತ ಕಷ್ಟ ಪಟ್ಟು ಮಗನನ್ನು ಹೆತ್ತು ಹೊತ್ತು, ವಿದ್ಯೆ ಬುದ್ದಿಯನ್ನು ಕೊಡಿಸಿದ್ದಕ್ಕೆ, ಮದ್ಯ ವ್ಯಸನಿಯಾಗಿರುವ ಮಗ ಮುನಿರಾಜು ಈಗ ವೃದ್ದ ತಂದೆ ತಾಯಿಯನ್ನೆ ಹೊಡೆದು ವಿಕೃತವಾಗಿ ಬಾಯಿಯಿಂದ ಕಚ್ಚಿ ಗಾಯಗೊಳಿಸಿದ್ದಾನೆ.

-ಭೀಮಪ್ಪ ಪಾಟೀಲ್, ಟಿವಿ9, ಚಿಕ್ಕಬಳ್ಳಾಪುರ

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಉಳುಮೆ ಮಾಡುವಾಗ ಪಾಳು ಬಾವಿಗೆ ಬಿದ್ದ ಜೋಡಿ ಎತ್ತುಗಳು ಹಾಗೂ ರೈತ! ಮುಂದೇನಾಯ್ತು?

TV9 Kannada


Leave a Reply

Your email address will not be published.