ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ ಸೋಂಕಾಗಿದೆ. ಕೋವಿಡ್ ಪಾಸಿಟಿವ್ ಬಂದಿರುವ ಕುರಿತಾಗಿ ಸಂಯುಕ್ತಾ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಬರೆದುಕೊಂಡಿದ್ದಾರೆ.

ಮನೆಯಲ್ಲಿ ಅಪ್ಪ-ಅಮ್ಮನ ನಂತರ ಈಗ ನಟಿ ಸಂಯುಕ್ತಾ ಹೆಗಡೆ ಅವರಿಗೂ ಸೋಂಕಾಗಿದೆ. ಮೊದಲು ಸಂಯುಕ್ತಾ ಅವರ ಅಪ್ಪನಿಗೆ ನಂತರ ಅಮ್ಮನಿಗೆ ಕೊರೊನಾ ಸೋಂಕಾಗಿತ್ತು. ತಮಗೆ ಪಾಸಿಟಿವ್ ಆಗಿರುವ ಕುರಿತು ಸಂಯುಕ್ತಾ ಹೆಗಡೆ ತಮ್ಮ ಇನ್‍ಸ್ಟಾಗ್ರಾಂ ಸ್ಟೋರೀಸ್‍ನಲ್ಲಿ ಪೋಸ್ಟ್ ಮಾಡಿದ್ದರು.

 

View this post on Instagram

 

A post shared by Samyuktha Hegde (@samyuktha_hegde)

25 ದಿನಗಳ ಹಿಂದೆ ಅಪ್ಪ-ಅಮ್ಮನಿಗೆ ಕೊರೊನಾ ಸೋಂಕಾದಾಗ ಬಿಬಿಎಂಪಿ ಅವರು 11 ದಿನಗಳ ನಂತರ ಕರೆ ಮಾಡಿದ್ದರು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ನನಗೆ ಪಾಸಿಟಿವ್ ರಿಪೋರ್ಟ್ ಬಂದ ಒಂದು ಗಂಟೆಯ ನಂತರವೇ ಬಿಬಿಎಂಪಿ ಅವರಿಂದ ಕರೆ ಬಂದಿದೆ. ಜೊತೆಗೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಕ್ವಾರಂಟೈನ್ ಆಗಿ, ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ತಂದೆ, ತಾಯಿ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

ನಿತ್ಯ ಚಿಕ್ಕ-ಪುಟ್ಟ ವ್ಯಾಯಾಮ ಮಾಡುತ್ತಿರುವುದಾಗಿಯೂ ವೀಡಿಯೋ ಹಂಚಿಕೊಂಡಿದ್ದಾರೆ. ಸಂಯುಕ್ತಾ ಹೆಗಡೆ ಆರೋಗ್ಯ ಆದಷ್ಟು ಬೇಗ ಚೇತರಿಕೆಯಾಗಲಿ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

The post ತಂದೆ, ತಾಯಿ ನಂತ್ರ ನಟಿ ಸಂಯುಕ್ತಾ ಹೆಗಡೆಗೆ ಕೊರೊನಾ appeared first on Public TV.

Source: publictv.in

Source link