ಮಡಿಕೇರಿ: ಕೊರೊನಾ ಲಾಕ್‍ಡೌನ್ ನಿಂದ ಮನೆಯಿಂದ ಹೊರಗೆ ಓಡಾಡುವಂತೆ ಇಲ್ಲ. ಆದರೆ ಇಲ್ಲೊಬ್ಬ ಮನೆ ಮಾಲೀಕನ ಮಗ ಬಾಡಿಗೆದಾರರನ್ನು ಹೊರ ಹಾಕಲು ಪ್ರಯತ್ನಿಸಿ ಈಗ ಪೆÇಲೀಸರ ವಿಚಾರಣೆ ಎದುರಿಸುವಂತೆ ಆಗಿದೆ.

ಮಡಿಕೇರಿ ನಗರದ ಮೈತ್ರಿ ಹಾಲ್ ಬಳಿ ಬಾಡಿಗೆ ಮನೆಯಲ್ಲಿದ್ದ ದಂಪತಿಗಳನ್ನು ಮನೆ ಮಾಲೀಕನ ಮಗ ಪ್ರದೀಪ್ ಬಾಡಿಗೆದಾರರಾದ ಮಧು ಮತ್ತು ಪ್ರಿಯಾ ದಂಪತಿಗಳನ್ನು ಹೊರ ಹಾಕಲು ಪ್ರಯತ್ನಿಸಿದ್ದಾನೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಮಧು ಪ್ರಿಯಾ ದಂಪತಿಗಳು ಈ ಮನೆಗೆ ಬಾಡಿಗೆಗೆ ಬಂದಿದ್ದರು.

ಮನೆ ಬಾಡಿಗೆಯನ್ನು ಇವರು ಮನೆ ಮಾಲೀಕನಿಗೆ ಪ್ರತೀ ತಿಂಗಳು ಸರಿಯಾಗಿ ನೀಡುತ್ತಿದ್ದರು. ಆದರೆ, ಮಾಲೀಕನ ಮಗ ಪ್ರದೀಪ್ ಬಾಡಿಗೆಯನ್ನು ನನ್ನ ತಂದೆಗೆ ಹಾಕದೆ ನನಗೆ ಕೊಡಬೇಕು. ಇಲ್ಲದಿದ್ದರೆ ಮನೆ ಖಾಲಿ ಮಾಡಿ ಎಂದು ಬಾಡಿಗೆದಾರರಿಗೆ ಮನಬಂದಂತೆ ಬೈದು ಜಗಳವಾಡುತ್ತಿದ್ದನಂತೆ. ಇದರಿಂದ ಬೇಸತ್ತ ಪ್ರಿಯಾ ಅವರು ಮಡಿಕೇರಿ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರದೀಪ್‍ನನ್ನು ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

The post ತಂದೆ, ಮಕ್ಕಳ ಜಗಳದಲ್ಲಿ ಬಾಡಿಗೆದಾರರ ಮೇಲೆ ದರ್ಪ appeared first on Public TV.

Source: publictv.in

Source link