ತಂದೆ ಮಾಡಿದ ಸಾಲಕ್ಕೆ ಮುದ್ದು ಕಂದಮ್ಮನ ದುರಂತ ಅಂತ್ಯ; ತನಿಖೆಗೆ ಇಳಿದಾಗ ಪ್ರಕರಣಕ್ಕೆ ಸಿಕ್ತು ಸ್ಫೋಟಕ ತಿರುವು – Kolar crime story debt-ridden father murders his daughter Kolar news in kannada


ಟೆಕ್ಕಿಯೊಬ್ಬನು ಅನುಮಾನಾಸ್ಪದವಾಗಿ ಕಾಣಿಯಾಗಿ ಆತನ ಮೂರು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಪ್ರಕರಣ ಜಾಡು ಹಿಡಿದಿರುವ ಪೊಲೀಸರು ಟೆಕ್ಕಿಯ ಹುಡುಕಾಟ ಚುರುಕುಗೊಳಿಸಿದ್ದಾರೆ.

ತಂದೆ ಮಾಡಿದ ಸಾಲಕ್ಕೆ ಮುದ್ದು ಕಂದಮ್ಮನ ದುರಂತ ಅಂತ್ಯ; ತನಿಖೆಗೆ ಇಳಿದಾಗ ಪ್ರಕರಣಕ್ಕೆ ಸಿಕ್ತು ಸ್ಫೋಟಕ ತಿರುವು

ಮುದ್ದು ಮುದ್ದಾಗಿ ಆಟವಾಡ್ತಿದ್ದ ಮುದ್ದು ಕಂದಮ್ಮನ ದುರಂತ ಅಂತ್ಯ ಪ್ರಕರಣಕ್ಕೆ ಹೊಸ ತಿರುವು

ಕೋಲಾರ: ಟೆಕ್ಕಿಯೊಬ್ಬನು ಅನುಮಾನಾಸ್ಪದವಾಗಿ ಕಾಣಿಯಾಗಿ ಆತನ ಮೂರು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ (Dead body Found case) ಹೊಸ ತಿರುವು ಸಿಕ್ಕಿದ್ದು, ನಾಪತ್ತೆಯಾಗಿದ್ದ ಟೆಕ್ಕಿ ತಮಿಳುನಾಡಿನಲ್ಲಿರುವುದಾಗಿ ತಿಳಿದು ಬಂದಿದ್ದು, ಪ್ರಕರಣ ಜಾಡು ಹಿಡಿದಿರುವ ಪೊಲೀಸರು ಟೆಕ್ಕಿಯ ಹುಡುಕಾಟ ಚುರುಕುಗೊಳಿಸಿದ್ದಾರೆ. ಮಗುವಿನ ಶವ ಕೆರೆಯಲ್ಲಿ ಸಿಕ್ಕ ನಂತರ ದಡದಲ್ಲಿ ಕಾರು ಕೂಡ ಪತ್ತೆಯಾಗಿತ್ತು. ಹೀಗಾಗಿ ಮಗುವಿನ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿ ಕೆರೆಯಲ್ಲಿ ಎರಡು ದಿನಗಳ ತೀವ್ರ ಶೋಧ ನಡೆಸಲಾಗಿತ್ತು. ಹಾಗಿದ್ದರೆ ಈ ಪ್ರಕರಣವು ಹೊಸ ತಿರುವುದು ಪಡೆದುಕೊಂಡಿದ್ದು ಹೇಗೆ ಎಂಬುದು ಇಲ್ಲಿದೆ ನೋಡಿ.

ನವೆಂಬರ್​ 15 ರ ರಾತ್ರಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಕೆರೆಯಲ್ಲಿ ಮೂರು ವರ್ಷದ ಪುಟ್ಟ ಮಗುವಿನ ಶವವೊಂದು ಪತ್ತೆಯಾಗಿತ್ತು, ಜೊತೆಗೆ ಅದಕ್ಕೆ ಪೂರಕ ಎಂಬಂತೆ ಕೆರೆಯ ದಡದಲ್ಲಿ ಒಂದು ನೀಲಿ ಬಣ್ಣದ ಐ20 ಕಾರ್​ ಕೂಡಾ ಪತ್ತೆಯಾಗಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಬೇಟಿ ನೀಡಿದ್ದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು.

ಕೆರೆ ದಡದಲ್ಲಿ ಪತ್ತೆಯಾದ ಕಾರು​​ ಹಾಗೂ ಮೃತ ಮಗು ಯಾರದ್ದು ಎಂದು ವಿಚಾರಣೆ ಮಾಡಿದಾಗ ಪತ್ತೆಯಾಗಿದ್ದ ಮಗು ಗುಜರಾತ್​ ಮೂಲದ ಬೆಂಗಳೂರಿನ ಚಾಕ್ಲೆಟ್​ ಬಾಗಲೂರಿನ ರಾಗಾ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ರಾಹುಲ್​ ಹಾಗೂ ಭವ್ಯ ದಂಪತಿಯ ಮೂರು ವರ್ಷದ ಮಗು ಜಿಯಾ ಅನ್ನೋದು ತಿಳಿದು ಬಂದಿತ್ತು. ಇನ್ನು ಸ್ಥಳಕ್ಕೆ ಬಂದಿದ್ದ ರಾಹುಲ್​ ಪತ್ನಿ ಭವ್ಯ ಪೊಲೀಸರಿಗೆ ನವೆಂಬರ್​ 15ರ ಬೆಳಿಗ್ಗೆಯಿಂದ ತನ್ನ ಪತಿ ಹಾಗೂ ಮಗು ಇಬ್ಬರು ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ನೀಡಿದ್ದರು.

TV9 Kannada


Leave a Reply

Your email address will not be published.