ಬೆಂಗಳೂರು: ಮೂರನೇ ಕೊರೊನಾ ಅಲೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಡಾ. ದೇವಿಶೆಟ್ಟಿ ನೇತೃತ್ವದ ತಂಡ ವರದಿ ಸಲ್ಲಿಸಿದೆ. ವರದಿ ಕೈಸೇರಿದ ಬೆನ್ನಲ್ಲೇ ಸಿಎಂ ಬಿ.ಎಸ್​ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರ ಜೊತೆ ಸಭೆ ನಡೆಸಿದ್ರು.

ಈ ವೇಳೆ ತಜ್ಞರು ನೀಡಿರುವ ಸಲಹೆಗಳನ್ನು ಅನುಷ್ಠಾನ ಮಾಡುವ ಸಂಬಂಧ ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಆರೋಗ್ಯ ಸಚಿವ ಕೆ.ಸುಧಾಕರ್ ಜೊತೆ ಸಿಎಂ ಸಮಾಲೋಚನೆ ಮಾಡಿದ್ರು.

ಸಭೆ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಯಡಿಯೂರಪ್ಪ, ಡಾ.ದೇವಿಪ್ರಸಾದ್ ಶೆಟ್ಟಿ ಅವರ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಮೂರ‌ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚಿನ ಪ್ರಮಾಣದ ಸೋಂಕು ತಗುಲಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದರು. ಮೂರನೇ ಅಲೆ ತಡೆಗಟ್ಟಲು ಆರ್ಥಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಬೇಕು. ಸಾರ್ವಜನಿಕರ ಸಹಭಾಗಿತ್ವ ಬೇಕು ಎಂದಿದೆ. ಕೋವಿಡ್-19 ತುತ್ತಾದ ಮಕ್ಕಳ ಮನೋಭಾವನೆ ಹೆಚ್ಚಿಸಲು ಶಿಫಾರಸ್ಸು ಮಾಡಿದೆ ಎಂದು ತಿಳಿಸಿದ್ರು.

ಈವರೆಗೂ ಇರುವ ರಿಯಾಯಿತಿ ಸರಿಯಾಗಿದೆ. ಬರುವ ದಿನಗಳಲ್ಲಿ ಕಾಲೇಜುಗಳು ಆರಂಭ ಮಾಡುವ ವಿಚಾರ ಸರಿಯಿದೆ ಎಂದಿದೆ. ಮಕ್ಕಳಿಗೆ ಪರೀಕ್ಷೆ ನಡೆಸಲು ಕೋವಿಡ್ ಕೇರ್ ಸೆಂಟರ್ ಅಗತ್ಯತೆ ಬಗ್ಗೆ ತಿಳಿಸಿದೆ ಎಂದರು.

ಸದ್ಯಕ್ಕೆ ಆರಂಭವಾಗಲ್ಲ ಶಾಲೆಗಳು‌
ರಾಜ್ಯದಲ್ಲಿ ಸದ್ಯಕ್ಕೆ ಶಾಲೆಗಳು‌ ಆರಂಭವಾಗುವುದಿಲ್ಲ ಎಂಬ  ಬಗ್ಗೆ ಸಿಎಂ ಸುಳಿವು ಕೊಟ್ಟರು. ಕೇವಲ ಕಾಲೇಜು ಮಕ್ಕಳಿಗೆ ಮಾತ್ರ  ತರಗತಿಗೆ ಹಾಜರಾಗುವ ಅವಕಾಶ ನೀಲಡು ಚಿಂತನೆ ಮಾಡಲಾಗಿದೆ. ಲಸಿಕೆ ಕೊಟ್ಟ ಬಳಿಕ ಕಾಲೇಜು ಆರಂಭಿಸಲು ತಜ್ಞರು ಸಲಹೆ ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಲಸಿಕೆ ಕೊಟ್ಟ ಬಳಿಕವೇ ಕಾಲೇಜು ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಹೇಳಿದ್ರು.

ತಜ್ಞರ ವರದಿಯಲ್ಲಿ ಏನಿದೆ?
1. ಮಕ್ಕಳ ಕಲಿಕಾ ಮಟ್ಟ, ಭೌತಿಕ ಆರೋಗ್ಯ, ಮಾನಸಿಕ ಆರೋಗ್ಯ ವೃದ್ಧಿಗೆ ಶಾಲೆಗಳನ್ನ ಆರಂಭಿಸಬೇಕು
2. ಶಾಲೆಗಳ ಆರಂಭ ವಿಳಂಭ ಮಾಡಿದ್ರೆ ಅಪೌಷ್ಠಿಕತೆ, ಬಾಲ ಕಾರ್ಮಿಕ ಪದ್ದತಿ ಹೆಚ್ಚಾಗುತ್ತದೆ
ಅಲ್ಲದೇ ಬಾಲ್ಯ ವಿವಾಹ, ಬಿಕ್ಷಾಟನೆ, ಮಕ್ಕಳ ಲೈಂಗಿಕ ಷೋಷಣೆ ಹೆಚ್ಚಾಗುತ್ತದೆ
3. ಆನ್​ಲೈನ್ ಶಿಕ್ಷಣ ನಿರೀಕ್ಷಿತ ಮಟ್ಟ ತಲುಪುವಲ್ಲಿ ವಿಫಲವಾಗಿದೆ. ಕಲಿಕೆಯಲ್ಲಿ ಅಜಗಜಾಂತರ ವ್ಯತ್ಯಾಸ ಇದೆ
4. ಹೆಚ್ಚಿನ ಮಕ್ಕಳು ಏಸಿಮ್ಟಮ್ಯಾಟಿಕ್ ಅಥವಾ ಕಡಿಮೆ ಲಕ್ಷಣ ಇರೋ ಮಕ್ಕಳಾಗಿರುತ್ತಾರೆ ಎಂದು ಇಂಡಿಯನ್ ಅಕಾಡಮಿ ಆಫ್​ ಪಿಡಿಯಾಟ್ರಿಕ್ಸ್​ ಅಭಿಪ್ರಾಯ ಪಟ್ಟಿದೆ
5. ಶಾಲೆ ಆವರಣಗಳು ಹೆಚ್ಚು ಸೋಂಕು ಹಬ್ಬಿಸುತ್ತವೆ ಎಂಬುವುದಕ್ಕೆ ವಿಶ್ವಾದ್ಯಂತ ಯಾವುದೇ ಸಾಕ್ಷಾಧಾರಗಳು ಲಭ್ಯವಿಲ್ಲ
6. ಶಾಲೆ ಆರಂಭಿಸುವುದನ್ನು ಶಾಲಾಭಿವೃದ್ಧಿ ಸಮಿತಿಗಳಿಗೆ ವಹಿಸುವ ಮೂಲಕ ವಿಕೇಂದ್ರೀಕರಣ ಗೊಳಿಸಬೇಕು
7. ಜಿಲ್ಲಾ ಮಟ್ಟದ ಮಕ್ಕಳ ರಕ್ಷಣಾ ಸಮಿತಿಯನ್ನ ರಚಿಸಬೇಕು

The post ತಜ್ಞರಿಂದ ಶಾಲೆ ಆರಂಭಕ್ಕೆ ಗ್ರೀನ್​ ಸಿಗ್ನಲ್; ‘ಆದರೆ ಸದ್ಯಕ್ಕೆ ಶಾಲೆ ಆರಂಭಿಸಲ್ಲ’ ಎಂದ ಸಿಎಂ appeared first on News First Kannada.

Source: newsfirstlive.com

Source link