ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನೀಗಿಸಿ, 20 ಜನರ ಪ್ರಾಣ ಕಾಪಾಡುವಲ್ಲಿ ನೆರವಾಗಿದ್ದಾರೆ.

ಆಕ್ಸಿಜನ್ ಕೊರತೆಯಿದ್ದ ಹಿನ್ನೆಲೆ ರೇಣುಕಾಚಾರ್ಯ ತಡರಾತ್ರಿ  ಆಸ್ಪತ್ರೆಗೆ ಭೇಟಿ‌ ನೀಡಿದ್ರು. ಪಿಪಿಇ ಕಿಟ್ ಧರಿಸಿ ವೆಂಟಿಲೇಟರ್ ವಾರ್ಡಿಗೆ ಭೇಟಿಗೆ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ 20 ಜನರು ಆಕ್ಸಿಜನ್ ಬೆಡ್​ನಲ್ಲಿದ್ದರು. ಆ ಆಕ್ಸಿಜನ್​ ಕೇವಲ ಮೂರು ಗಂಟೆಗಾಗುವಷ್ಟು ಮಾತ್ರ ಬಾಕಿ ಉಳಿದಿತ್ತು.

ಕೂಡಲೇ ರೇಣುಕಾಚಾರ್ಯ ಅಧಿಕಾರಿಗಳೊಂದಿಗೆ ಖಾಲಿ ಸಿಲಿಂಡರ್ ಸಮೇತ ಹರಿಹರದ ಆಕ್ಸಿಜನ್ ಘಟಕಕ್ಕೆ ತೆರಳಿದ್ರು. ಅಲ್ಲಿ ಖಾಲಿ ಸಿಲಿಂಡರ್​ಗಳಿಗೆ ಆಕ್ಸಿಜನ್​ ತುಂಬಿಸಿಕೊಂಡು ಆಸ್ಪತ್ರೆಗೆ ತಲುಪಿಸಿದ್ರು. ಶಾಸಕರ ಸಮಯಪ್ರಜ್ಞೆಯಿಂದ 20 ಜನರ ಜೀವ ಉಳಿದಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

The post ತಡರಾತ್ರಿ ಆಕ್ಸಿಜನ್ ಕೊರತೆ ನೀಗಿಸಿದ ರೇಣುಕಾಚಾರ್ಯ, 20 ರೋಗಿಗಳು ಸೇಫ್ appeared first on News First Kannada.

Source: newsfirstlive.com

Source link