ಬೆಂಗಳೂರು: ಗಾಂಜಾ‌ ನಶೆಯಲ್ಲಿ ಮೂವರು ಪುಂಡರು ವಿಜಯನಗರದ ಆರ್​​ಟಿಪಿಸಿಆರ್​ ಲೇಔಟ್​ನಲ್ಲಿ ತಡರಾತ್ರಿ ಸಿಕ್ಕ ಸಿಕ್ಕ ವಾಹನಗಳ ಗಾಜು ಪುಡಿ ಮಾಡಿದ ಘಟನೆ ನಡೆದಿದೆ. ಅದೇ ಏರಿಯಾದ ಯುವಕರು ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ರಸ್ತೆ ಬದಿ ನಿಲ್ಲಿಸಿದ್ದ ಐದಕ್ಕೂ ಹೆಚ್ಚು ವಾಹನಗಳ ಗ್ಲಾಸ್​ಗಳನ್ನ ಯುವಕರು ಪುಡಿಪುಡಿ ಮಾಡಿದ್ದು ಸಿಸಿಟಿವಿಗಳಲ್ಲಿ ಕೃತ್ಯದ ದೃಶ್ಯ ಸೆರೆಯಾಗಿದೆ. ಯುವಕರು ಕೃತ್ಯ ತಡೆಯಲು ಹೋದವರ ಮೇಲೆ ಕಲ್ಲು ತೂರಿ ಯುವಕರು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನ ವಶಕ್ಕೆ ಪಡೆದ ಪೊಲೀಸರು ಸದ್ಯ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ವಿಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

The post ತಡರಾತ್ರಿ ಯುವಕರ ಪುಂಡಾಟ.. ಸಿಕ್ಕ ಸಿಕ್ಕ ವಾಹನಗಳ ಗಾಜು ಪುಡಿಮಾಡಿ ಎಸ್ಕೇಪ್ appeared first on News First Kannada.

Source: newsfirstlive.com

Source link