ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಗದಗ: ಛತ್ತೀಸ್​ಘಡದಲ್ಲಿ ನಕ್ಸಲರೊಂದಿಗೆ ಹೋರಾಡುತ್ತಾ ಹುತಾತ್ಮನಾದ ಯೋಧನ ಅಂತ್ಯಕ್ರಿಯೆ ತಡರಾತ್ರಿ ಗದಗ ಜಿಲ್ಲೆಯ ಸ್ವಗ್ರಾಮ ಗೊಜನೂರಿನಲ್ಲಿ ನಡೆದಿದೆ.

ನಕ್ಸಲರೊಂದಿಗೆ ಹೋರಾಡುವಾಗ ಗುಂಡು ತಗುಲಿ ಎರಡು ದಿನಗಳ ಹಿಂದೆ ಯೋಧ ಲಕ್ಷ್ಮಣ ಗೌರಣ್ಣವರ್ (30) ಹುತಾತ್ಮರಾಗಿದ್ದರು.. ರಾತ್ರಿ 11 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಗ್ರಾಮಕ್ಕೆ ಬಂದಿದ್ದು ತಡರಾತ್ರಿ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗಿದೆ.
ಪಾರ್ಥಿವ ಶರೀರ ಗ್ರಾಮಕ್ಕೆ ಬರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.. ಯೋಧನ ಸಾವಿಗೆ ಇಡೀ ಗ್ರಾಮಕ್ಕೆ ಗ್ರಾಮವೇ ಕಂಬಿನಿ ಮಿಡಿದಿದೆ.

ಇದನ್ನೂ ಓದಿ: ಛತ್ತೀಸ್​ಘಡದಲ್ಲಿ ಹುತಾತ್ಮರಾದ ಯೋಧ ಕೊಟ್ಟಿದ್ದ ಮಾತು.. ‘ಮರಳಿ ಬಂದು ತಮ್ಮಂದಿರ ಮದುವೆ ಮಾಡ್ತೀನಿ’

The post ತಡರಾತ್ರಿ ಸ್ವಗ್ರಾಮಕ್ಕೆ ಬಂದ ಗದಗ ಯೋಧನ ಮೃತದೇಹ.. ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ appeared first on News First Kannada.

Source: newsfirstlive.com

Source link