ಕೊಡಗು: ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಕಾಂಕ್ರೀಟ್ ಲಾರಿ ಕುಸಿದ ಪರಿಣಾಮ ಮಣ್ಣಿನಡಿ ಇಬ್ಬರು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ಈ ಘಟ‌ನೆ ನಡೆದಿದ್ದು ಒಟ್ಟು 7 ಮಂದಿ ಮಣ್ಣಿನಡಿ ಸಿಲುಕಿದ್ದರು.. ಈ ಪೈಕಿ ಐವರನ್ನ ರಕ್ಷಿಸಲಾಗಿದೆ. ಮತ್ತಿಬ್ಬರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ತಮಿಳುನಾಡು ಮೂಲದ ಸಂತೋಷ (27), ಪ್ರವೀಣ್(21 )ಮಣ್ಣಿನಡಿ ಸಿಲುಕಿರುವ ಕಾರ್ಮಿಕರು ಎನ್ನಲಾಗಿದೆ.

ಸಿದ್ಧಾರೂಢ ಮಠದ ಆವರಣದ ತಡೆಗೋಡೆ ನಿರ್ಮಾಣದ ಸಂದರ್ಭದಲ್ಲಿ ಕಾಂಕ್ರೀಟ್ ಹಾಕುವ ವೇಳೆ 35 ಅಡಿ ಮೇಲಿಂದ ಕಾಂಕ್ರೀಟ್ ಮಿಕ್ಸರ್ ಲಾರಿ ಕುಸಿದು ಕೆಳಭಾಗದಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿದೆ. ಈಗಾಗಲೇ ಮಣ್ಣಿನಡಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಿದ್ದು, ಇಬ್ಬರನ್ನು ಕಾಪಾಡಲು ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ.

ಈ ಸಂಬಂಧ ಭಾಗಮಂಡಲ‌ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಇಬ್ಬರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

The post ತಡೆಗೋಡೆ ನಿರ್ಮಾಣದ ವೇಳೆ ದುರಂತ; ಮಣ್ಣಿನಡಿ ಸಿಲುಕಿದ ಐವರ ರಕ್ಷಣೆ.. ಮುಂದುವರೆದ ಕಾರ್ಯಾಚರಣೆ appeared first on News First Kannada.

Source: newsfirstlive.com

Source link