ತನಗೆ ಸಿಕ್ಕ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಫ್ಯಾಮಿಲಿಗೆ ಅರ್ಪಿಸಿದ ಡೇವಿಡ್​ ವಾರ್ನರ್​​


ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್ ಅವರಿಗೆ ಶ್ರೇಷ್ಠ ಆಟಗಾರ ಪ್ರಶಸ್ತಿ ಸಿಕ್ಕಿದೆ. ವಾರ್ನರ್​​ ಈಗ ತಮಗೆ ಸಿಕ್ಕ ಟೂರ್ನಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ತಮ್ಮ ಕುಟುಂಬಕ್ಕೆ ಸಮರ್ಪಿಸಿದ್ದಾರೆ.

ಟಿ20 ವಿಶ್ವಕಪ್‌ ಆರಂಭಕ್ಕೂ ಮುನ್ನ ಕಳಪೆ ಫಾರ್ಮ್‌ನಲ್ಲಿದ್ದರು ವಾರ್ನರ್. ಐಪಿಎಲ್​​​​ ಬಳಿಕ ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಫಾರ್ಮ್‌ಗೆ ಮರಳಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ಟಿ20 ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಆಡಿದ ಏಳು ಪಂದ್ಯಗಳಲ್ಲಿ ವಾರ್ನರ್‌ ಮೂರು ಅರ್ಧಶತಕಗಳೊಂದಿಗೆ 289 ರನ್ ಸಿಡಿಸಿದ್ದರು. ಇತ್ತ ಫೈನಲ್​ ಪಂದ್ಯದಲ್ಲೂ ವಾರ್ನರ್​, ಅರ್ಧಶತಕ ಸಿಡಿಸಿದ್ದರು. ಈ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

News First Live Kannada


Leave a Reply

Your email address will not be published. Required fields are marked *