ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ರಂತೆ ಖ್ಯಾತ ‘ಮಹಾಗುರು’ ಹಂಸಲೇಖ

ಬೆಂಗಳೂರು: ಪೇಜಾವರ ಶ್ರೀ ಕುರಿತು ಹೇಳಿಕೆ ದಾಖಲಿಸಲು ಪೊಲೀಸ್​ ಠಾಣೆಗೆ ಭೇಟಿ ನೀಡಿದ್ದ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಯಾಕೆ ಹೀಗೆ ಹೇಳಿಕೆ ನೀಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಹಂಸಲೇಖ ಅವರು, ಯಾಕೆ ಹಾಗೇ ಹೇಳಿದೆನೋ ಗೊತ್ತೇ ಆಗಲಿಲ್ಲ. ಯಾವ ಉದ್ದೇಶವು ಇರ್ಲಿಲ್ಲಾ ಎಂದಿದ್ದಾರಂತೆ.

ಮಾತನಾಡುವ ಬರದಲ್ಲಿ ಹಾಗೆ ಹೇಳಿಬಿಟ್ಟೇ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದ್ರು. ನನ್ನ ಎಪತ್ತು ವರ್ಷದ ಜೀವನದಲ್ಲಿ ಎಂದಿಗೂ ಹೀಗೆ ಮಾಡಿಕೊಂಡಿರಲಿಲ್ಲಾ. ತಪ್ಪಾಗಿದೆ ನನ್ನ ಹೇಳಿಕೆಯಿಂದ. ಯಾವ ಧರ್ಮ, ಜಾತಿಯ ನಿಂದಿಸೋ ಉದ್ದೇಶ ಇರ್ಲಿಲ್ಲಾ ಎಂದು ಹೇಳಿದರಂತೆ.

ಈ ಘಟನೆಯಿಂದ ತನಗೆ ತುಂಬಾ ನೋವಾಗಿದೆ. ನನ್ನ ಕೆಲಸದಲ್ಲೂ ಸೆಟ್ ಬ್ಯಾಕ್ ಆಗಿದೆ. ನಾನು ಈ ಘಟನೆಯಿಂದ ತುಬಾ ನೋವು ಅನುಭವಿಸಿದ್ದೇನೆ ಎಂದು ತನಿಖಾಧಿಕಾರಿಗಳ ಮುಂದೆ ಕಣ್ಣೀರಿಟ್ಟರಂತೆ. ನಂತರ ಒಂದೈದು ನಿಮಿಷ ಸುಧಾರಿಸಿಕೊಂಡು ಹೊರಟರಂತೆ.

News First Live Kannada

Leave a comment

Your email address will not be published. Required fields are marked *